ಕಂಡುದ ಹಿಡಿಯಲೋಲ್ಲದೆ

ಕಂಡುದ ಹಿಡಿಯಲೋಲ್ಲದೆ

ಕಂಡುದ ಹಿಡಿಯಲೋಲ್ಲದೆ .ಕಾಣುದದನರಸಿ ಹಿಡಿದಿಹೆನೆಂದಡೆ.
ಸಿಕ್ಕಿದೆಂಬ ಬಳಲಿಕೆ ನೋಡಾ . ಕಂಡುದದನೆ ಕಂಡು ಗುರುಪಾದವಿಡಿದಲ್ಲಿ
ಕಾಣಬಾರದುದ ಕಾಣಬಹುದು ಗುಹೇಶ್ವರ

ಅಲ್ಲಮ ಪ್ರಭುಗಳು – ವಚನ ಸಂಖ್ಯೆ ..51-ಸ ವ ಸ೦ 2

ಪ್ರತಿಯೊಬ್ಬನಿಗೂ ಪ್ರಾಪಂಚಿಕ ಮತ್ತು ಪಾರಮಾರ್ಥಿಕ ಬದುಕುಗಳುಂಟು . ಮನುಷ್ಯ ತನ್ನ ಬಯಕೆ ಆಶೆ ಆಮಿಷಗಳ ಬೆನ್ನು ಹತ್ತಿ ಕಾಣದ ಐಸಿರಿಗೆ ಪ್ರಾಪಂಚಿಕ ಸುಖಕ್ಕೆ ಭೌತಿಕ ಪದಾರ್ಥಗಳ ಹುಡುಕಾಟಕ್ಕೆ ನಿರಂತರವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಅಂತಹ ಭೌತಿಕ ಪದಾರ್ಥಗಳ ಬೆನ್ನು ಹತ್ತಿದ ಮಾನವ ಅದು ಇನ್ನೇನು ಸಿಕ್ಕೆ ಬಿಟ್ಟಿತು ಎಂಬುದು ಮನದ ಬಳಲಿಕೆಯಾಗಿದೆ .ಅದು ಬರಿ ಭ್ರಮೆ ,ಕಂಡದ್ದು ಸಿಕ್ಕಿತೆ೦ಬುದು ಮರಭೂಮಿಯ ಮರೀಚಿಕೆ ,ಮನದ ಆಯಾಸ . ತನ್ನ ಮುಂದೆ ಕಂಡು ಬರುವ ಆತ್ಮೋದ್ಧಾರ ಮನಶಾಂತಿ ಜ್ಞಾನ
ಸೇವಾ ನಿಸ್ವಾರ್ಥ ತ್ಯಾಗ ಮನೋಭಾವಗಳ ಉನ್ನತ ಘನ ವಿಚಾರಗಳು ಕಂಡು ಬಂದರೂ ಅವುಗಳನ್ನು ಮನುಷ್ಯ ನಿರ್ಲಕ್ಷಿಸುತ್ತಾನೆ.
ಶುದ್ಧವಾದ ನೀರು ಹವೆ ಪ್ರಕಾಶ ಬೆಳಕು ಅಚ್ಚ ಹಸುರಿನ ಗಿರಿ ಮರಗಳು ಪ್ರಾಣಿ ಪಕ್ಷಿಗಳು ಇವುಗಳ ಮಧ್ಯೆ ಎಲ್ಲ ಜಂಜಡಗಳ ಮರೆತು ಯೋಗ ಸಾಧನೆ ಅಲೌಕಿಕ ಚಿಂತನೆ ಮಾಡಿದರೆ ಸಿಗುವ ಶಾಶ್ವತ ನೆಮ್ಮದಿ ಸುಖ ಬಹು ದೊಡ್ಡದು. ಇಂತಹ ಅಲೌಕಿಕ ಬದುಕಿನ ಜ್ಞಾನ ಶಾಂತಿಯನ್ನು ಮನುಷ್ಯ ತನ್ನದಾಗಿಸಿಕೊಂಡರೆ . ಅಂತಪ್ಪ ದಿವ್ಯ ಆಸ್ತಿಯನ್ನು ಗುರುಪಾದ ದಿವ್ಯ ಮಾರ್ಗದ ದಾರಿ ಮಾಡಿಕೊಂಡರೆ ಎಲ್ಲಾ ಪ್ರಾಪಂಚಿಕ ಕಾಣಬಾರದ ವಸ್ತುಗಳು ಪದಾರ್ಥಗಳು ಗೋಚರಗೊಲ್ಲುತ್ತವೆ.
ಅಂತೆಯೇ ಜನಪದಿಗರು ಮರೆತು ಮನದಲ್ಲಿ ಶಿವನ ವನವ ಸುತ್ತಿದರೇನು. ಕಂಡು ಬರುವ ಬಹು ದೊಡ್ಡ ಅತ್ಯಮೂಲ್ಯ ಅವಿರಳ ವಸ್ತು ಎಂದರೆ ಮನುಷ್ಯನ ಸಕ್ರಿಯ ಸ್ರಜನಶೀಲ ಮನಸ್ಸು ಜ್ಞಾನ ಪ್ರೀತಿ ವಿಶ್ವ ಬಂಧುತ್ವ ಇವುಗಳನ್ನು ತನ್ನವದನ್ನಾಗಿಸಿಕೊಂಡರೆ ಕಾಣಬಾರದುದ ಕಾಣಬಹುದು ಗುಹೇಶ್ವರನ ಸಾಕ್ಷಿಯಾಗಿ ಎಂದು ಅಲ್ಲಮ ಪ್ರಭುಗಳು ನೀವೆದಿಸಿಕೊಂಡಿದ್ದಾರೆ.

ಡಾ .ಶಶಿಕಾಂತ.ರು. ಪಟ್ಟಣ -ಪೂನಾ -ರಾಮದುರ್ಗ

Don`t copy text!