ಕನಕದಾಸರ ಹರಿಭಕ್ತಿ ಸಾರ

ಕನಕದಾಸರ ಹರಿಭಕ್ತಿ ಸಾರ

ದಾಸಸಾಹಿತ್ಯದ ಆರಂಭವಾಗಿದ್ದು 13ನೇ ಶತಮಾನದಲ್ಲಾದೂ 15ನೇ ಶತಮಾನದಲ್ಲಿ ಪುರಂದರದಾಸರಿಂದ ಬಹಳಷ್ಟು ಪ್ರಚಲಿತವಾಯಿತು. ಈ ದಾಸ ಸಾಹಿತ್ಯದ ಸ್ವರ್ಣಯುಗದಲ್ಲಿ ಪ್ರಮುಖ ದಾಸರಲ್ಲಿ ಕನಕದಾಸರೂ ಒಬ್ಬರು. ಅವರ ಜನ್ಮ 16ನೇ ಶತಮಾನದಲ್ಲಿ ಆಯಿತು ಅವರ ಕಾಲವನ್ನು (1508-1606) ಎಂದು ಗುರುತಿಸಲಾಗುತ್ತದೆ. ಧಾರವಾಡ ಜಿಲ್ಲೆಯ ಬಾಡ ಗ್ರಾಮದಲ್ಲಿ ಬೀರಪ್ಪ-ಬಚ್ಚಮ್ಮ ದಂಪತಿಗಳ ಮಗನಾಗಿ ತಿಮ್ಮಪ್ಪ ಎಂಬ ಹೆಸರನ್ನು ಪಡೆಯುತ್ತಾರೆ ತಂದೆಯ ನಂತರ ವಿಜಯನಗರದ ಅರಸರ ಗುತ್ತಿಗೆದಾರನಾಗಿಯೂ ಕೆಲಸ ನಿರ್ವಹಿಸುತ್ತಾರೆ. ಭೂಮಿಯಲ್ಲಿ ಹೂತಿಟ್ಟ ಕನಕವು ದಾಸರಿಗೆ ದೊರೆತ ಕಾರಣ ಕನಕ, ಕನಕನಾಯಕ ಎಂಬ ಹೆಸರನ್ನು ಪಡೆಯುತ್ತಾರೆ. ಕನಕದಾಸರು ತಮಗೆ ದೊರೆತ ನಿಧಿಯನ್ನು ವ್ಯಯಿಸಿ ಕಾಗಿನೆಲೆಯಲ್ಲಿ ಕೇಶವನ ದೇವಾಲಯವನ್ನು ಕಟ್ಟಿಸಿ ದೇವರನ್ನು ಪೂಜಿಸುತ್ತಾ ಕಾಲ ಕಳೆಯುತ್ತಿರುತ್ತಾರೆ. ಅವರ ಮಾತಾ ಪಿತೃಗಳ ವಿಯೋಗದಿಂದ ಉಂಟಾದ ದುಃಖದಿಂದ ಅಧಿಕಾರ ತ್ಯಾಗ ಮಾಡಿ ಶ್ರೀ ವ್ಯಾಸರಾಜರ ಶಿಷ್ಯರಾಗಿ ಹರಿದಾಸರಾಗಿ ಪರಿವರ್ತಿತರಾಗುತ್ತಾರೆ.

ಕನಕದಾಸರು ಭಕ್ತಿ, ಲೋಕಕಲ್ಯಾಣ, ಸಾಮಾಜಿಕ ಕಾಳಜಿಯ ಅನೇಕ ಪದಗಳನ್ನು ರಚಿಸಿದ್ದಾರೆ. ಇವರು ಅನೇಕ ಪದಗಳನ್ನು ಗ್ರಂಥಗಳನ್ನು ಬರೆದಿದ್ದು ಅವುಗಳಲ್ಲಿ ಹರಿಭಕ್ತಿಸಾರ, ಮೋಹನ ತೃಂಗಿಣಿ, ನಳಚರಿತ್ರೆ, ರಾಮಧ್ಯಾನ ಚರಿತ್ರೆ ಜೊತೆಗೆ ಉಗಾಬೋಗಗಳು ಮುಂಡಿಗೆಗಳನ್ನು ಬರೆದಿದ್ದಾರೆ.

ಪ್ರಸ್ತುತ ಹರಿಭಕ್ರಿಸಾರವು ಬಹಳ ವೈಶಿಷ್ಠ್ಯಪೂರ್ಣವಾದ ಕೃತಿಯಾಗಿದೆ ಇದರಲ್ಲಿ ಬಹಳ ಪ್ರಸಿದ್ಧವಾದ “ದೀನ ನಾನು ಸಮಸ್ತಲೋಕಕ್ಕೆ ದಾನಿ ನೀನು, ಕೈವಲ್ಯ ಪತಿ ನೀನು! ಏನ ಬಲ್ಲೆನು ನಾನು ನೆರೆಸುಜ್ಞಾನ ಮೂರುತಿ ನೀನು, ನಿನ್ನ ಸಮಾನರುಂಟೇ ದೇವ ರಕಿಸು ನಮ್ಮನನವರತ” ಎಂಬುದಾಗಿದೆ ಒಟ್ಟಾರೆ 111 ಪದಗಳ ಈ ಕೃತಿಯಲ್ಲಿ ರಾಮ ಕೃಷ್ಣಾದಿ ದಶಾವತಾರಗಳ ಸ್ತುತಿ, ಭಕ್ತಿಯ ಮಹಾತ್ಮೆ, ದೇವರ ಮಹಿಮೆ, ಕಾರುಣ್ಯ ನಂತರ ವೈರಾಗ್ಯ ಮತ್ತು ಬೋಧಕ ವಿಚಾರಗಳು ಭಕ್ತಿಯ ಪದಗಳಿಂದ ವರ್ಣಿತವಾಗಿರುವ ಒಂದು ಅದ್ಭುತ ಕೃತಿಯಾಗಿದೆ

ಮಾಧುರಿ ಬೆಂಗಳೂರು

Don`t copy text!