ಸಮಯ ಪ್ರಜ್ಞೆ ಮೆರೆದ ನಿರ್ವಾಹಕಿ ಶರಣಮ್ಮ ಗೌಡರ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ….
e-ಸುದ್ದಿ ಇಲಕಲ್ಲ
ಲಾರಿ ಬೆಂಕಿ ಹತ್ತಿಕೊಂಡು ಧಗ ಧಗ ಉರಿಯುತ್ತಿರುವದನ್ನು ನೋಡಿದ ಇಳಕಲ್ ಡಿಪೋ ಕಂಡಕ್ಟರ್ ಶರಣಮ್ಮ ಗೌಡರ ತಕ್ಷಣ ಜಾಗೃತರಾಗಿ ಅಗ್ನಿಶಾಮಕ ದಳಕ್ಕೆ ದೂರವಾಣಿ ಕರೆ ಮಾಡಿ ತಿಳಿಸಿದ ಪ್ರಯುಕ್ತ ಸಮಯಕ್ಕೆ ಸರಿಯಾಗಿ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಡೀಸೆಲ್ ಟ್ಯಾಂಕಿಗೆ ಬೆಂಕಿ ತಗಲುತ್ತಿದ್ದ ಸಮಯಕ್ಕೆ ಸರಿಯಾಗಿ ಆಗಮಿಸಿ ಆಗಬಹುದಾದ ದೊಡ್ಡ ಅನಾಥವನ್ನು ತಪ್ಪಿಸಿದ ಘಟನೆಯ ಬಗ್ಗೆ , ಶರಣಮ್ಮಳ ಸಮಯ ಪ್ರಜ್ಞೆ ಕುರಿತು e-ಸುದ್ದಿ ಅಭಿನಂದಿಸಿ ವರದಿ ಪ್ರಕಟಿಸಿತ್ತು.
ವರದಿ ಗಮನಿಸಿದ ಸಾರಿಗೆ ಇಲಾಖೆಯ ಸಚಿವ ರಾಮಲಿಂಗ ರಡ್ಡಿ e-ಸುದ್ದಿ ವರದಿಗಾರ ಶರಣಗೌಡ ಕಂದಕೂರ ಅವರಿಗೆ ನಿರ್ವಾಹಕಿ ಶರಣಮ್ಮಳನ್ನು ಅಭಿನಂದಿಸಿದರು.
ಘಟನೆ ಹಿನ್ನಲೆ : ಹುನಗುಂದ ಸಮೀಪದ ಹೊರವಲಯದ ಎನ್ಎಚ್ 50 ರಲ್ಲಿ ಕೆ ಎ – 29 ಎ – 9276 ನಂಬರಿನ ಲಾರಿ ಬಾಗಲಕೋಟೆ ಸಿಮೆಂಟ್ ಫ್ಯಾಕ್ಟರಿಯಿಂದ ತೋರಣಗಲ್ಲಿಗೆ ಜಲ್ಲಿಯನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಏಕಾಏಕಿ ಲಾರಿಗೆ ಬೆಂಕಿ ಬಿದ್ದದ್ದನ್ನು ಮಾರ್ಗ ಮಧ್ಯದಲ್ಲಿ ಶಹಾಪೂರ – ಇಲಕಲ್ಲ ಬಸ್ಸಿನ ನಿರ್ವಾಹಕಿ ಶರಣಮ್ಮ ಗೌಡರ ತಕ್ಷಣ ಜಾಗೃತರಾಗಿ ಅಗ್ನಿಶಾಮಕ ದಳಕ್ಕೆ ದೂರವಾಣಿ ಕರೆ ಮಾಡಿ ತಿಳಿಸಿದ ಪ್ರಯುಕ್ತ ಸಮಯಕ್ಕೆ ಸರಿಯಾಗಿ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಡೀಸೆಲ್ ಟ್ಯಾಂಕಿಗೆ ಬೆಂಕಿ ತಗಲುತ್ತಿದ್ದ ಸಮಯಕ್ಕೆ ಸರಿಯಾಗಿ ಆಗಮಿಸಿ ಆಗಬಹುದಾದ ದೊಡ್ಡ ಅನಾಥವನ್ನು ತಪ್ಪಿಸಿರುತ್ತಾರೆ.
ವರದಿಗಾರರು: ಶರಣಗೌಡ ಕಂದಕೂರ