ನ್ಯಾಷನಲ್‌ ನ್ಯೂಟ್ರಿಷನ್‌ ವೀಕ್‌

ನ್ಯಾಷನಲ್‌ ನ್ಯೂಟ್ರಿಷನ್‌ ವೀಕ್‌

( ರಾಷ್ಟ್ರೀಯ ಪೋಷಕಾಂಶ ಯುಕ್ತ ಆಹಾರ ಸೇವನೆಯ ವಾರ)

ಮನುಷ್ಯನ ದೇಹಕ್ಕೆ ಸಮಪ್ರಮಾಣದ ಪೋಷಕಾಂಶಗಳು ಆರೋಗ್ಯವಂತರಾಗಿರಲು ಬೇಕಾಗುತ್ತದೆ. ವಿಶ್ವದಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಅಪೌಷ್ಠಿಕತೆಯ ಸಮಸ್ಯೆ ಕಾಣುತ್ತದೆ. ನಾವು ಏತಕ್ಕಾಗಿ ಪೋಕಾಂಶಯುಕ್ತ ಆಹಾರ ಸೇವನೆ ಮಾಡಬೇಕಂದು ತಿಳಿಸಲು ಈ ನ್ಯೂಟ್ರಿಷನ್‌ ವೀಕ್‌ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಅಪೌಷ್ಠಿಕತೆ ಮಹಿಳೆಯರು ಮತ್ತು ಸಣ್ಣ ಮಕ್ಕಳಲ್ಲಿ ಕಾಣುತ್ತದೆ. ಮುದುಕರಲ್ಲೂ ಕೂಡ ಹೆಚ್ಚು ಪ್ರಮಾಣದ ಅಪೌಷ್ಠಿಕ ಆಹಾರವನ್ನು ಸೇವಿಸುವ ಜನರು ಇರುವುದಿಂಧ ಪೋಷಕಾಂಶಯುಕ್ತ ಆಹಾರದ ತಿಳುವಳಿಕೆ ನೀಡುವುದು ಮಹತ್ವವನ್ನು ಪಡೆದಿದೆ.

1973ರಲ್ಲಿ ಅಮೆರಿಕಾದ ಅಮೆರಿಕನ್‌ ಡಯಬಿಟೀಸ್‌ ಅಸೊಸಿಯೇಷನ್‌ನವರು ಮೊಟ್ಟ ಮೊದಲ ಬಾರಿಗೆ ಈ ನ್ಯೂಟ್ರಿಷನ್‌ ವೀಕ್‌ನ್ನು ಆರಂಭಿಸಿ ಟಿವಿ, ರೆಡಿಯೋ ಗಳಲ್ಲಿ ಮತ್ತು ತಮ್ಮ ಅಧ್ಯಕ್ಷರ ಮಾತುಗಳಿಂದ ಪೋಷಕಾಂಶಯುಕ್ತ ಆಹಾರ ಸೇವಿಸುವ ಮಹತ್ವವನ್ನು ಸಾರಿಸಿದರು. ಸೆಪ್ಟೆಂಬರ್‌ ತಿಂಗಳ ಮೊದಲವಾರ ಅಂದರೆ 1ನೇ ತಾರೀಖಿನಿಂಧ 7ನೇ ತಾರೀಖಿನವರೆಗೆ ನ್ಯೂಟ್ರಿಷನ್‌ ವೀಕ್‌ ಆಚರಿಸಲಾಗುತ್ತದೆ. ಭಾರತದಲ್ಲಿ 1982ರಿಂದ ಜನರ ದೀರ್ಘಾಯುಸ್ಸನ್ನು ಪಡೆದು ಕೊಳ್ಳಲು ಸಮತೋಲಿತ ಪೋಷಕಾಂಶಯುಕ್ತ ಆಹಾರವನ್ನು ಸೇವಿಸುವ ಸಲಹೆಯನ್ನು ನೀಡುವ ಈ ಆಚರಣೆಯನ್ನು ಆರಂಭಿಸಲಾಯಿತು. ಇದು ಎಷ್ಟರ ಮಟ್ಟಿಗೆ ಪ್ರಸಿದ್ಧವಾಯಿತೆಂದರೆ ಆಚರಣೆಯನ್ನು ಸೆಪ್ಟೆಂಬರ್‌ ತಿಂಗಳು ನ್ಯೂಟ್ರಿಷನ್‌ ಮಂತ್‌ ಎಂದು ಆಚರಿಸುವಷ್ಟು ಪ್ರಸಿದ್ದಿಯನ್ನು ಪಡೆದಿದೆ.

ಪ್ರತಿಬಾರಿಯೂ ಇಂತಹ ಆಚರಣೆಯನ್ನು ಮಾಡುವಾಗ ಒಂದೊಂದು ಥೀಮ್‌ ಇಟ್ಟುಕೊಳ್ಳಲಾಗುತ್ತದೆ ಅದರಂತೆಯೇ ಈ ಬಾರಿಯ ನ್ಯೂಟ್ರಿಷನ್‌ ವೀಕ್‌ನ ಥೀಮ್‌ ” ಮಧ್ಯ ವಯಸ್ಸಿನ ಜನರಿಗೂ ನ್ಯೂಟ್ರಿಷನ್‌ಯುಕ್ತ ಆಹಾರದ ಆದ್ಯತೆಯ ಬಗೆಗೆ ತಿಳುವಳಿಕೆ ನೀಡುವುದಾಗಿದೆ”

ಭಾರತೀಯರಲ್ಲಿ ಅಪೌಷ್ಠಿಕತೆಯ ಸಮಸ್ಯೆ ಹೆಚ್ಚು ಪ್ರಮಾಣದಲ್ಲಿ ಬಸುರಿ,ಬಾಣಂತಿ ಮತ್ತು ಮಗು ಹಾಗೂ ಮುದುಕರಲ್ಲೀ ಹೆಚ್ಚು ಆಗಿದ್ದರಿಂದ ಹಿಂದೆಲ್ಲಾ ಅವರನ್ನೇ ಹೆಚ್ಚು ಗಮನದಲ್ಲಿಟ್ಟುಕೊಂಡು ಪೋಷಕಾಂಶಯುಕ್ತ ಆಹಋ ಸೇವನೆಯ ಮಹತ್ವವನ್ನು ತಿಳಿಸಿ ಹೇಳಲಾಗಿದೆ. ಆದರೆ ಇಂದಿನ ಸಮಯದಲ್ಲಿ ನಡುವಯಸ್ಸಿನವರಿಗೂ ಕೂಡ ಪೋಷಕಾಂಶ ಯುಕ್ತ ಆಹಾರದ ಅವಶ್ಯಕತೆಯು ಎದ್ದು ಕಾಣುತ್ತಿದೆ. ನಡುವಯಸ್ಸಿನಲ್ಲಿ ಬಲವು ಕುಂದುತ್ತಾ ಬರುವ ಕಾಲ ಹಾಗೂ ಮುಪ್ಪನ್ನು ಎದುರಿಸಲು ಹಾಗೂ ಮುಪ್ಪಿನಲ್ಲಿಯೂ ಆರೋಗ್ಯಯುತರಾಗಿರಲು ತಯಾರಾಗುವ ಸಮಯವಾದುದರಿಂದ ಈ ಸಮಯದಲ್ಲಿಯೂ ಉತ್ತಮ ಪೌಷ್ಠಿಕ ಆಹಾರವನ್ನು ಸೇವಿಸುವುದು ಅನಿವಾರ್ಯವಾಗುತ್ತದೆ.

ಪೌಷ್ಠಿಕ ಆಹಾರವೆಂದರೆ ಆಹಾರದಲ್ಲಿ 7 ಬಗೆಯ ಪೋಷಕಾಂಶಗಳು ಇರಬೇಕು. ಕಾರ್ಬೊಹೈಡ್ರೆಡ್ಸ್‌, ಪ್ರೋಟಿನ್‌ಗಳು, ಪ್ಯಾಟ್‌, ವಿಟಮಿನ್‌ಗಳು, ಮಿನರಲ್‌ಗಳು, ಡಯಟರೀ ಫೈಬರ್‌ಗಳು ಮತ್ತು ಸಾಕಷ್ಟು ಪ್ರಮಾಣದ ನೀರು ಇವೆಲ್ಲ ಗುಣವಿರುವ ಅಹಾರವನ್ನು ಸೇವಿಸಿದಾಗ ಪೌಷ್ಠಿಕ ಆಹಾರ ಸೇವನೆ ಮಾಡಿದಂತೆ

ಎಲ್ಲವಯೋಮಾನದವರಿಗೆ ಅವರ ಅವಶ್ಯಕತೆಗೆ ತಕ್ಕಂತ ಪೋಷಕಾಂಶಗಳು ಬೇಕು ಆದ್ದರಿಂದ ಆಯಾ ವಯೋಮಾನದವರು ಅವರ ವಯಸ್ಸಿಗೆ ತಕ್ಕಂತ ಆಹಾರವನ್ನು ಸೇವಿಸುವುದು ಉತ್ತಮ.

ಆದರೆ ಸಾಮಾನ್ಯವಾಗಿ ಯಾವುದೇ ವಯೋ ಮಾನದವರು ಅತೀಯಾಗಿ ಸಕ್ಕರೆಯ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಹೆಚ್ಚು ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸಬೇಕು. ದೇಹಕ್ಕೆ ಅವಶ್ಯವಿರುವಷ್ಟೇ ಸ್ವಲ್ಪ ಪ್ರಮಾಣದ ನೀರನ್ನು ಕುಡಿಯದೇ ತಮ್ಮ ತೂಕ ಮತ್ತು ವಯಸ್ಸಿಗೆ ಅನುಗುಣವಾಗಿ ಹೇಳಿರುವಷ್ಟು ಪ್ರಮಾಣದ ನೀರನ್ನು ಸೇವಿಸಬೇಕು. ಮತ್ತು ದಿನಕ್ಕೆ ಮೂರು ಬಾರಿ ಆಹಾರವನ್ನು ತಪ್ಪದೇ ಸೇವಿಸಬೇಕು. ಮುಂಜಾನೆಯ ಉಪಹಾರ , ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವನ್ನು ನಿಯಮಿತವಾಗಿ ಸಮಯಕ್ಕೆ ಜೊತೆಗೆ ಪೌಷ್ಠಿಕವಾದ ಆಹಾರವನ್ನೇ ಸೇವಿಸಬೇಕು.

ಮುಂಜಾನೆಯ ಉಪಹಾರ 8-10 ಗಂಟೆಯೊಳಗೆ, ಮಧ್ಯಾಹ್ನದ ಊಟ 1-2 ಗಂಟೆಯೊಳಗೆ ಮತ್ತು ರಾತ್ರಿಯ ಊಟ 7.30-8.30ಯೊಳಗೆ ಮಾಡಿದಾಗ ಆರೋಗ್ಯವು ಉತ್ತಮವಾಗಿರುತ್ತದೆ.

ನಮ್ಮ ದೈನಂದಿನ ಊಟದಲ್ಲಿ ಕಾರ್ಬೊಹೈಡ್ರೆಡ್‌ ಇರುವ ಅನ್ನ, ಚಪಾತಿ, ರೊಟ್ಟಿ ಮೊದಲಾದವುಗಳನ್ನು, ಪ್ರೋಟಿನ್‌ ಇರುವ ಬೇಳೆ-ಕಾಳುಗಳ ಪಲ್ಯ, ಸಾರು, ಹುಳಿ ಅಥವಾ ತೊವ್ವೆಗಳನ್ನು ವಿಟಮಿನ್‌ ಮಿನರಲ್‌ ಇರುವ ತರಕಾರಿ, ಸೊಪ್ಪು,ಗಳನ್ನು ಉತ್ತಮ ಫ್ಯಾಟ್‌ ಮತ್ತು ಕ್ಯಾಲ್ಷಿಯಮ್‌ ನಂತಹ ಪೋಷಕಾಂಶ ಕೊಡುವ ಹಾಲು ಮೊಸರು ತುಪ್ಪಗಳನ್ನು, ಸೇವಿಸಿ ಊಟದ ನಂತರ ಹಣ್ಣನ್ನು ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.

ನಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಅನವಶ್ಯಕ ಸಕ್ಕರೆ, ಕೊಬ್ಬಿನ ಅಂಶವಿರುವ ಮತ್ತು ತೂಕ ಹೆಚ್ಚಿಸುವ ಪದಾರ್ಥಗಳನ್ನು ಸೇವಿಸಬೇಕು. ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಆರೋಗ್ಯಯುತವೂ ಹಾಗೂ ಬಾಯಿಗೆ ರುಚಿಯನ್ನು ಕೊಡುವಂತಿದ್ದರೆ ಕರಿದ ಮತ್ತು ಹೆಚ್ಚಿನ ಕ್ಯಾಲರಿಯ ಪದಾರ್ಥಗಳನ್ನು ಬಿಡುವುದು ಸುಲಭವಾಗುತ್ತದೆ.

ಮುಂಜಾನೆಯ ಉಪಹಾರಕ್ಕೆ ಇಡ್ಲಿ, ದೋಸೆ, ಅವಲಕ್ಕಿ, ತರಕಾರಿಯ ಉಪ್ಪಿಟ್ಟು, ತರಕಾರಿ ಹಾಕಿದ ರೊಟ್ಟಿ ಇಂತಹ ಪದಾರ್ಥಗಳನ್ನು ಬೇಗ ಜೀರ್ಣವಾಗುವ ಪದಾರ್ಥಗಳನ್ನು ಸ್ವಲ್ಪವೇ ಪ್ರಮಾಣದಲ್ಲಿ ತಿನ್ನಬೇಕು ಮುಂದೆ ದಿನದಲ್ಲಿ ಮಧ್ಯಾಹ್ನದ ಊಟ ಬೇಡವೆನಿಸುವಷ್ಟು ಉಪಹಾರ ಸೇವಿಸಬಾರದು. ಮಧ್ಯಾಹ್ನದ ಊಟದಲ್ಲಿ ಅನ್ನ, ಚಪಾತಿ, ರೊಟ್ಟಿ, ಮುದ್ದೆ, ಜೊತೆಗೆ ಹಸಿ ತರಕಾರಿ ಬೇಯಿಸಿದ ತರಕಾರಿ ಬೇಳೆಯಿಂದ ತಯಾರಿಸಿದ ಸಾರು ಹುಳಿಗಳನ್ನು ಸೇವಿಸಿ ಮೇಲೆ ಒಂದು ಬಾಳೆಹಣ್ಣನ್ನು ತಿನ್ನಬೇಕು. ಸಂಜೆಯ ಸಮಯದಲ್ಲಿ ಹಗುರವಾಗಿ ಜೀರ್ಣವಾಗುವ ಹಣ್ಣು , ಅಥವಾ ಬೇರೆ ತಿಂಡಿ ತಿನಿಸು ಸೇವಿಸಬೇಕು. ನಂತರ ರಾತ್ರಿಯಲ್ಲಿ ಹೊಟ್ಟೆ ಭಾರ ಅನಿಸದೇ ಇರುವಷ್ಟು ಆಹಾರ ಸೇವಿಸಿದರೆ ಉತ್ತಮ ಎಂದು ಆಯುರ್ವೇದ ಶಾಸ್ತ್ರವು ಹೇಳುತ್ತದೆ.

ನಮ್ಮ ಪ್ರಾಚೀನರ ಊಟ ಉಪಹಾರ ಪದ್ಧತಿಯು ಬಹಳ ಆರೋಗ್ಯಕರವಾಗಿದ್ದಿತು. ಉಪಹಾವನ್ನು ಮುಂಜಾನೆ ಮಾಡದೇ ಸಂಜೆಯ ಸಮಯದಲ್ಲಿ ತಿನ್ನುತ್ತಿದ್ದರು. ಮಿಕ್ಕೆಲ್ಲ ರೀತಿಯ ಪೋಷಕಾಂಶಯುಕ್ತ ಆಹಾರವನ್ನು ಸೇವಿಸುವುದನ್ನು ನಮ್ಮ ಪೂರ್ವಜರು ಕಲಿಸಿಯೇ ಹೋಗಿದ್ದಾರೆ. ಮುಂಜಾನೆಯ ಕಾರ್ಯಕ್ರಮಗಳನ್ನು ಮುಗಿಸಿ ಗದ್ದೆಯ ಕೆಲಸಕ್ಕೆ ಅಥವಾ ತಮ್ಮ ಕೆಲಸವನ್ನು ಮಾಡುತ್ತಿದ್ದರಿಂಧ ಊಟ ಮತ್ತು ಉಪಹಾರದ ಸಮಯವನ್ನು ಸೇರಿಸಿ ಮಧ್ಯದ ಸಮಯದಲ್ಲಿ ಆಹಾರವನ್ನು ಸೇವಿಸಸುತ್ತಿದ್ದರು, ಅದನ್ನು ಪಾಶ್ಚಾತ್ಯರು ಬ್ರಂಚ್‌ ಎನ್ನುತ್ತಾರೆ.

ಸಂಜೆ ಅಲ್ಪೋಪಹಾರ ತೆಗೆದುಕೊಳ್ಳುತ್ತಿದ್ದರು. ಹೀಗೆ ಆರೋಗ್ಯಯುತವಾದ ಪೌಷ್ಠಿಕ ಆಹಾಋವನ್ನು ಸೇವಿಸುವುದು ಇತ್ತೀಚಿನ ಆರೋಗ್ಯ ಜಾಗೃತಿಯ ಪ್ರಭಾವವಾಗಿರದೇ ನಮ್ಮ ಪೂರ್ವಜರು ನಮಗೆ ಹಾಕಿಕೊಟ್ಟು ಮಾರ್ಗದರ್ಶನದ ಪ್ರಭಾವವಾಗಿದೆ.

ಆದರೆ ಆವಿಷ್ಕಾರಗಳು ಹೆಚ್ಚಿ ಮನುಷ್ಯನ ಆರೋಗ್ಯಗಳ ಮೇಲೆ ಅಡ್ಡ ಪರಿಣಾಮಗಳು ರೋಗಗಳು ಹೆಚ್ಚಾದಂತೆ ಐಾವ ರೀತಿಯ ಆಹಾರವನ್ನು ಎಷ್ಟು ತಿನ್ನಬೇಕೆಂದು ಹೇಳುವ ಡಯಟೀಷಿಯನ್‌ಗಳ ಅವಶ್ಯಕತೆ ಬಂದೊದಗಿದೆ.

ನಿಮ್ಮ ವಯಸ್ಸು ಎಷ್ಟೇ ಇರಲಿ ಹಾಲು, ತುಪ್ಪ, ಮೊಸರು, ಬೇಳೆಕಾಳು ಅನ್ನ ರೊಟ್ಟಿ ಚಪಾತಿ ಮುದ್ದೆ, ಹಣ್ಣು ತರಕಾರಿ ಎಲ್ಲವೂ ಸಮತೋಲಿತ ರೀತಿಯಿಂದ ಮನೆಯೊಡತಿ ಮಾಡಿಕೊಟ್ಟಂತೆ ತಿಂದು ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಿ. ಕೆಲವು ಆಹಾರವನ್ನು ಅಂದರೆ ಬಾಯಿಗೆ ರುಚಿಯೆನಿಸುವ ಆಹಾರ ಆಗೊಮ್ಮೆ ಈಗೊಮ್ಮೆ ತಿಂದು ( ಜಂಕ್ ಫುಡ್, ಕರಿದ, ಆರೋಗ್ಯಕ್ಕೆ ಹಾನಿಯುಂಟು ಮಾಡುವ ) ನಿತ್ಯವೂ ಆರೋಗ್ಯಕರ ಪೌಷ್ಟಿಕ ಆಹಾರ ತಿನ್ನುವುದು ನಮ್ಮ ದೀರ್ಘಾಯುಷ್ಯಕ್ಕೆ ಮೂಲ. ಉತ್ತಮ ಆರೋಗ್ಯಕರ ಆಹಾರ ಸೇವಿಸುವುದರ ಮೂಲಕ ದಿನ ನಿತ್ಯವೂ ನ್ಯೂಟ್ರಿಷನ್ ದಿನದ ಆಚರಣೆಯನ್ನು ಮಾಡ ಬಹುದು.

ಮಾಧುರಿ ದೇಶಪಾಂಡೆ, ಬೆಂಗಳೂರು

Don`t copy text!