ಪುಸ್ತಕ ಪ್ರಕಾಶನದಲ್ಲಿ ಅರಳಿದ ಮೊದಲ‌ ಕುಸುಮ

ಪುಸ್ತಕ ಪ್ರಕಾಶನದಲ್ಲಿ ಅರಳಿದ ಮೊದಲ‌ ಕುಸುಮ

ಆತ್ಮೀಯರೇ,
e-ಸುದ್ದಿ ಅಂತರಜಾಲ ಪತ್ರಿಕೆ ಅಕ್ಟೋಬರ್ 2 , 2೦2೦ ರಂದು ಪ್ರಾರಂಭವಾಗಿ 3ನೇ ವರ್ಷದ ಆಚರಣೆಯ ಸಮೀಪದಲ್ಲಿದ್ದೇವೆ.
ಈ ಮೂರು ವರ್ಷದಲ್ಲಿ ಸ್ಥಳೀಯ ಸುದ್ದಿಯ ಜತೆ ಜತೆಗೆ ಅತ್ಯುತ್ತಮ ಲೇಖನಗಳನ್ನು, ವ್ಯಕ್ತಿ ಪರಿಚಯ, ಸಂಘ ಸಂಸ್ಥೆಗಳ ಸಾಧನೆ, ಲೇಖಕರ ಪರಿಚಯ, ಪ್ರವಾಸ ಕಥನ, ಕವಿತೆಗಳನ್ನು ಪ್ರಕಟಿಸಿದ ತೃಪ್ತಿ ಇದೆ.
ಅನೇಕ ಹೊಸ ಹೊಸ ಲೇಖಕರು ಸಾಹಿತ್ಯ ಜಗತ್ತಿಗೆ ಪರಿಚಯವಾಗಲು e-ಸುದ್ದಿ ಒಂದು ವೇದಿಕೆಯಾಗಿದೆ.
ಕೇವಲ e-ಸುದ್ದಿ ಲೇಖನ ಮತ್ತು ಸುದ್ದಿಗಳ ಪ್ರಕಟಣೆಗೆ ಸೀಮಿತವಾಗದೆ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆತಂಕದಲ್ಲಿ ಕನ್ನಡ ಪುಸ್ತಕ ಓದುವ ಸಂಸ್ಕೃತಿಯನ್ನು ಮತ್ತೇ ಹೆಚ್ಚಿಸಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಪ್ರಕಟಿಸಬೇಕು ಎಂಬ ಉದ್ದೇಶದಿಂದ ಸಹಕಾರ ತತ್ವದ ಆಧಾರದಲ್ಲಿ ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ಸಂಘ ವನ್ನು ಒಂದು ವರ್ಷದ ಹಿಂದೆ ಸ್ಥಾಪಿಸಲಾಗಿದೆ.

ಇದೊಂದು ವಿನೂತನ‌ ಪ್ರಯೋಗ. ಲೇಖಕರು ಮತ್ತು ಓದುಗರು ಸೇರಿ ಕಟ್ಟಿದ ಸಂಸ್ಥೆ.
ಈ ಸಂಸ್ಥೆಯ ಸದಸ್ಯ ರಾದವರಿಗೆ‌ ಪ್ರತಿ ವರ್ಷ ಅವರ ಮನೆ ಬಾಗಿಲಿಗೆ ಲಾಭಾಂಶ ರೂಪದಲ್ಲಿ ಪುಸ್ತಕ ತಲುಪಿಸುತ್ತೇವೆ. (ವಿವರಕ್ಕಾಗಿ ಸಂಪರ್ಕಿಸಿ-9448805067 )
ಬರುವ ಅಕ್ಟೋಬರ್ 2 ರಂದು e-ಸುದ್ದಿ ಗೆ 3 ವರ್ಷ ತುಂಬುವದರಿಂದ 3 ಪುಸ್ತಕಗಳನ್ನು ಪ್ರಕಟಿಸುತ್ತಿದ್ದೇವೆ.
ನಮ್ಮ ಸಂಸ್ಥೆಯ ಮೊದಲ ಪುಸ್ತಕ ಇಳಕಲ್ಲಿನ ಸವಿತಾ ಮಾಟೂರು ರಚಿಸಿರುವ ಅಕ್ಕಮಹಾದೇವಿ ಸ್ತುತಿ, ೧೦೮ ನಾಮವಳಿ ಕೃತಿ ದಿನಾಂಕ 9-9-2023 ಶನಿವಾರ ಸಂಜೆ 7 ಗಂಟೆಗೆ ಇಳಕಲ್ಲಿನ ಚಿತ್ತರಗಿ ಚಿಜ್ಯೋತಿ ಶ್ರೀ ವಿಜಯ ಮಹಾಂತೇಶ್ವರ ಮಠದಲ್ಲಿ ಪೂಜ್ಯ ಶ್ರೀ ಗುರು ಮಹಾಂತ ಸ್ವಾಮೀಜಿಗಳಿಂದ ಅನಾವರಣವಾಗಲಿದೆ.
ಉಳಿದ ಎರಡು ಪುಸ್ತಗಳು ಕಲಬುರ್ಗಿಯ ಸಿಕಾ ಕಾವ್ಯನಾಮದ ಕಾವ್ಯಶ್ರೀ ಮಹಾಗಾಂವಕರ್ ಅವರು ಅಕ್ಕಮಹಾದೇವಿ ಕುರಿತು ಬರೆಯುತ್ತಿರುವ ವಚನ ವಿಶ್ಲೇಷಣೆ ವಿಶೇಷ ಪುಸ್ತಕ
ಬಯಲಿಗೊಂದು ಬಟ್ಟೆ

ಹಾಗೂ

ರಾಯಚೂರಿನ ಡಾ.ಸರ್ವಮಂಗಳ ಸಕ್ರಿ ಅವರ

ಚಿತ್ ಜ್ಯೋತಿ

ಪುಸ್ತಕಗಳು ಮುದ್ರಣಕ್ಕೆ ಅಣಿಯಾಗಿವೆ.
ನಮ್ಮ e-ಸುದ್ದಿ ಓದುಗರು ನಮ್ಮ ಪ್ರಯತ್ನವನ್ನು ಬೆಂಬಲಿಸುತ್ತೀರಿ. ಪ್ರೋತ್ಸಹಿಸುತ್ತೀರಿ ಎಂಬ ಭರವಸೆ ನಮ್ಮದು.
e-ಸುದ್ದಿ ವಾರ್ಷಿಕೋತ್ಸವದಲ್ಲಿ ಎಲ್ಲರೂ ಸೇರೋಣ. ಸಂತೋಷವನ್ನು ಹಂಚಿಕೊಳ್ಳೋಣ.
ಧನ್ಯವಾದಗಳೊಂದಿಗೆ

ನಿಮ್ಮವ
ವೀರೇಶ ಸೌದ್ರಿ
ಸಂಪಾದಕ
e-ಸುದ್ದಿ ಅಂತರಜಾಲ ಪತ್ರಿಕೆ, ಮಸ್ಕಿ
9448805067

Don`t copy text!