ವಚನ ಪರಿಷ್ಕರಣೆ – ಕಾಡುವ ಪ್ರಶ್ನೆಗಳಿಗೆ ಹುಡುಕುವ ಉತ್ತರ

 

ವಚನ ಪರಿಷ್ಕರಣೆ – ಕಾಡುವ ಪ್ರಶ್ನೆಗಳಿಗೆ ಹುಡುಕುವ ಉತ್ತರ


ವಚನ ಸಾಹಿತ್ಯವು ಹನ್ನೆರಡನೆಯ ಶತಮಾನದ ಜಾಗತಿಕ ಸರ್ವ ಶ್ರೇಷ್ಠ ಸಿದ್ಧಾಂತ . ಭಾರತದ ನೆಲದಲ್ಲಿ ಇದ್ದ ಸುಲಿಗೆ ಶೋಷಣೆ ಅಂಧಾನುಚರಣೆ ವೈದಿಕ ಹೋಮ ಕುಂಡದಲ್ಲಿ
ಬೆಂದು ಬಳಲಿದ ಬಡವರಿಗೆ ದಲಿತರಿಗೆ ದಮನಿತರಿಗೆ ಕಾರ್ಮಿಕರಿಗೆ ಶೋಷಿತರಿಗೆ ಅಸ್ಪ್ರಶ್ಯರಿಗೆ ಹೊಸ ಬದುಕಿನ ಭರವಸೆ ನೀಡಿದವರು ಬಸವಣ್ಣ .
ವರ್ಣ ಸಂಕರ ನೆಪವೊಡ್ಡಿ ಕಲ್ಯಾಣದ ಮಹತ್ತರ ವೈಚಾರಿಕ ಕ್ರಾಂತಿಗೆ ವೈದಿಕ ಸನಾತನ ವ್ಯವಸ್ಥೆಯು ಹೇಗಾದರೂ ಮಾಡಿ ವಚನ ಚಳುವಳಿಯನ್ನು ಮಣ್ಣು ಮಾಡಬೇಕೆನ್ನುವ ಹುನ್ನಾರದಲ್ಲಿ ವಚನಗಳ ಕಟ್ಟಿಗೆ ಬೆಂಕಿ ಹಚ್ಚಿದರು.

ಅಳಿದುಳಿದ ವಚನಗಳು ಸುಮಾರು 200 ವರ್ಷಗಳ ವರೆಗೆ ಸಂಪೂರ್ಣ ಭೂಗರ್ಭದಲ್ಲಿದ್ದವು. ಮುಂದೆ ಬಂದ ಪ್ರೌಢದೇವರಾಯನ ಕಾಲದಲ್ಲಿ ವಚನಗಳ ಸಂಕಲನ ನಡೆದವು .ತದನಂತರ ಶೂನ್ಯ ಸಂಪಾದನೆಯ ಸಂಪಾದಕರು ಸಂಕಲನಕಾರರು ವೈಷ್ಣವ ಜೈನ ಶೈವ ಮತ್ತು ವೈದಿಕ ಧರ್ಮಿಯರ ಜೊತೆಗೆ ಪೈಪೋಟಿಗೆ ಇಳಿದು ಶೂನ್ಯ ಸಂಪಾದನೆಯಲ್ಲಿ ಪವಾಡಗಳನ್ನು ಸೃಷ್ಟಿಸಿದರು .ಸಂದರ್ಭಕ್ಕೆ ಅನುಗುಣವಾಗಿ ಖೊಟ್ಟಿ ವಚನಗಳನ್ನು ರಚಿಸಿ ಶರಣರ ಜೀವನವನ್ನು ರಂಜನೀಯ ಮಾಡಲು ಹೋಗಿದ್ದು ದೊಡ್ಡ ದುರಂತವೆಂದೇ ಹೇಳಬಹುದು .

ನಮಗೆ ಕಾಡುವ ಪ್ರಶ್ನೆಗಳು ವಚನಗಳಲ್ಲಿ ಸಂಸ್ಕೃತ ಶ್ಲೋಕಗಳ ವೇದ ಆಗಮ ಶಾಸ್ತ್ರಗಳ ಉಕ್ತಿ ಸೇರ್ಪಡೆ ಒಂದು ಯಕ್ಷ ಪ್ರಶ್ನೆ .

1 ವಚನಗಳಲ್ಲಿ ವೀರಶೈವ ಪದ ಸೇರ್ಪಡೆ

2 ವಚನಗಳಲ್ಲಿ ಬರುವ ಶೈವ ಆಚರಣೆಗಳ ವಿವರ

3 ಅನೇಕ ವಚನಗಳಲ್ಲಿ ಅನಗತ್ಯ ಸಂಸ್ಕೃತ ಸೇರ್ಪಡೆ

4 ವಚನಗಳ ಪಾಠಾಂತರದಲ್ಲಿ ನಡೆದ ಪದಗಳ ಪಲ್ಲಟ ಉದಾಹರಣೆಗೆ ನೆಂಬೆ ಎಂಬೆ

5 ವಚನಗಳ ಪಾಠಾಂತರದಲ್ಲಿ ನಡೆದಿರಬಹುದಾದ ದೋಷಗಳು

6 ಸಿದ್ದಾಂತಕ್ಕೆ ವಿರುದ್ಧವಾದ ಆಚರಣೆಯ ಉಲ್ಲೇಖ

7 ಶೈವ ಪೂಜಾ ವಿಧಿ ವಿಧಾನಗಳನ್ನು ವಚನಗಳಲ್ಲಿ ಪ್ರಸ್ತಾಪ ಮಾಡಿದ ಉದಾಹರಣೆ

8 ಹೆಚ್ಚಿನ ವಚನಗಳ ಖಚಿತತೆ ಮತ್ತು ಶುದ್ಧೀಕರಣದ ಬೃಹತ್ ಯೋಜನೆಯಲ್ಲಿ
ನಾವೆಲ್ಲರೂ ಪಾಲ್ಗೊಳ್ಳಲು ಕೆಲವು ಶೈಕ್ಷಣಿಕ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳುವುದು
ಈ ಕಾಲದ ಅಗತ್ಯ ಮತ್ತು ಅನಿವಾರ್ಯತೆ

ಹೀಗೆ ನಮಗೆ ಕಾಡುವ ಅನೇಕ ಪ್ರಶ್ನೆಗಳಿಗೆ ಪರಿಹಾರ ಉತ್ತರ ಹುಡುಕಿದರೆ ವಚನಗಳ ಪ್ರಕ್ಷಿಪ್ತತೆಗೆ ಸಹಾಯಕವೆನಿಸಬಹುದು.

-ಡಾ ಶಶಿಕಾಂತ ಪಟ್ಟಣ ರಾಮದುರ್ಗ 9552002338

Don`t copy text!