ಹಾಯ್ಕು ಗಳು
ಇಂದು ಹೃದಯ
ದಿನವಂತೆ ಗೆಳೆಯಾ
ಕಾಯುತಿಹೆ ನಾ.
ಹೇ ಹೃದಯವೇ
ಈ ಹೃದಯ ನಿನ್ನದು
ಮರೆಯದಿರು.
ಮಳೆಗಾಲದ
ಮುಸ್ಸಂಜೆ ಬಂದೆ ಅಂದು
ಮುನ್ನುಡಿಯಾದೆ.
ಹೃದಯದಲ್ಲಿ
ಭಾವದೊಕಳಿ ಚೆಲ್ಲಿ
ಭಾಷ್ಯ ಬರೆದೆ.
ಕಂಗಳ ದೃಷ್ಟಿ
ಹರಿಸಿದಲ್ಲೆಲ್ಲನಾ
ನೀನೇ ನೀ ಸಖ.
ನಿನ್ನೊಲವಿನ
ಅನುರಾಗದ ಸವಿ
ಮರೆಯಲಾರೆ.
ಕಾವ್ಯ ಕನ್ನಿಕೆ
ಎಂದು ಉಲಿದವನೆ
ದೂರಾದೆ ಏಕೆ.
ಬಯಲು ಬಾನು
ತೋರಣ ಹೆಣೆದಿದೆ
ನಲಿಯೋಣ ಬಾ.
ಜಯಶ್ರೀ.ಭ.ಭಂಡಾರಿ.
ಬಾದಾಮಿ.