ಭಗತಗೆ ಗಲ್ಲು
ಅಂದು ಕತ್ತಲು ಹರಿದಿರಲಿಲ್ಲ.
ಮಧ್ಯ ರಾತ್ರಿ ಗುಸು ಗುಸು ಮಾತು .
ಸೆರೆವಾಸದ ಮನೆ ಸ್ಮಶಾನ .
ಕೆಂಪು ಮೋತಿಯವರಿಗೂ ದುಗುಡು.
ಒಳಗೊಳಗೆ ಕಳವಳ ಭಾರತೀಯರು.
ಮುಖದ ಮೇಲೆ ಚಿಗುರು ಗಡ್ಡಮೀಸೆ .
ಹಸೆ ಮಣಿ ಏರಿರಲಿಲ್ಲ.ಕಂಕಣ ಕಟ್ಟಿಲ್ಲ .
ಬೇಡಲಿಲ್ಲ ಜೀವ ಭಿಕ್ಷೆ .ಪ್ರಾಣ ದಯೆ .
ಬರೆದು ಮುಗಿಸಿದ ದಿನಚರಿ ,
ಸಾವಿನ ಅಧಿಕಾರಿಯ ಕೈಕುಲುಕಿದ .
ಮುಗುಳು ನಗೆ ಮಂದಹಾಸ ನೋಟ .
ಬಾಡಿರಲಿಲ್ಲ ಮುಖದ ಚೇತನ .
ನಡೆದರು ಸಾವಿನ ಕುಣಿಕೆಗೆ ಸಂತಸದಿ .
ಭಗತ್ ಸುಖದೇವ ರಾಜಗುರು.
ಅಪ್ಪಿದರು ಕೊಲ್ಲುವ ಚಾಂಡಾಲನ .
ಮನಸಿನಲಿ ಸ್ವರಾಜ್ಯ ಕಾಣದ ಕೊರಗು .
ಸಂಕೋಲೆ ಕಳಚಲಿಲ್ಲ .ಇನ್ಕಿಲಾಬ ಘೋಷಣೆ .
ಭಾರತ ಮಾತೆಗೆ ಕೊನೆಯ ವಂದನೆ ಹೇಳಿ.
ಅಪ್ಪಿ ಮುದ್ದಾಡಿದರು ವೀರ ಮಕ್ಕಳು .
ಕೊಟ್ಟರು ಕುಣಿಕೆಗೆ ಎಳೆಯ ಗೋಣು .
ರಕ್ತ ಚಿಮ್ಮಿತು ನೆಲ ಕೆಂಪಾಯಿತು.
ನೋಡು ನೋಡುತ್ತಲೆ ಅಮರರಾದರು .
ಭಗತ್ ಸುಖದೇವ ರಾಜಗುರು.
ಕದ್ದು ಮುಚ್ಚಿ ಶವ ಸಂಸ್ಕಾರ .
ಹೆತ್ತ ಕರುಳಿಗೂ ತೋರಿಸದೆ ಸುಟ್ಟರು.
ಆರಿಲ್ಲ ಭಗತ್ ಹಚ್ಚಿದ ಕ್ರಾಂತಿಯ ಜ್ವಾಲೆ
ಮರೆತಿಲ್ಲ ಭಗತನ ಹೋರಾಟ .
ಹುಟ್ಟಿ ಬರುವರು ಮತ್ತೆ ನೂರು ಭಗತ್
ದೇಶ ಕಟ್ಟಲು, ವೈರಿಯ ಮೆಟ್ಟಲು .
ಸತ್ತು ಬದುಕಿದ ಭಗತ ಸಿಂಗ
ನಾವು ಬದುಕಿ ಸತ್ತಿದ್ದೇವೆ
ಭಗತ್ ಸುಖದೇವ ರಾಜಗುರು ಅಮರ ರಹೇ .
ಇನ್ಕಿಲಾಬ ಜಿಂದಾಬಾದ
– ಡಾ ಶಶಿಕಾಂತ .ಪಟ್ಟಣ -ಪೂನಾ