ಜಾಗತಿಕ ಲಿಂಗಾಯತ ರಾಯಚೂರು ಜಿಲ್ಲಾ ಮಹಿಳಾ  ಘಟಕ ಆರಂಭ 

ಜಾಗತಿಕ ಲಿಂಗಾಯತ ರಾಯಚೂರು ಜಿಲ್ಲಾ ಮಹಿಳಾ  ಘಟಕ ಆರಂಭ 

ಜನವರಿ ೧೪ ರಂದು ರಾಯಚೂರಿನ ಬಸವ ಕೇಂದ್ರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ
ರಾಯಚೂರು ಜಿಲ್ಲಾ ಮಹಿಳಾ ಘಟಕವನ್ನು
ಜಿಲ್ಲಾಧ್ಯಕ್ಷರಾದ ಪಿ.ರುದ್ರಪ್ಪ ಕುರುಕುಂದ
ಇವರ ನೇತೃತ್ವದಲ್ಲಿ ರಚನೆ ಮಾಡಲಾಯಿತು.

ಬಸವ ಕೇಂದ್ರದ ಅಧ್ಯಕ್ಷರಾದ ಶ್ರೀ ರಾಚನ ಗೌಡ ಕೋಳೂರು ಅಧ್ಯಕ್ಷತೆಯನ್ನು ವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ
ಪಿ ರುದ್ರಪ್ಪ ಕುರುಕುಂದ ಇವರು ಶರಣರ
ದೃಷ್ಟಿಯಲ್ಲಿ ದೇವರು ಕುರಿತು ವೈಚಾರಿಕ ಚಿಂತನ
ಕುರಿತು ಮಾತನಾಡಿದರು.

ಪಿಂಡಾಂಡದ ಈ ಕಾಯದಲ್ಲಿ ದೇವರಿದ್ದಾನೆ. ಜಂಗಮ ವ್ಯಕ್ತಿಯಲ್ಲ ನಮ್ಮೊಳಗೆ ಅಡಗಿರುವ
ದೈವಶಕ್ತಿ … ಪ್ರಸಾದವೆಂದರೆ ದೇವರು
ಅನುಗ್ರಹಿಸಿಕೊಟ್ಟದ್ದು… ಶರಣರ ಇಂತಹ
ಆಧ್ಯಾತ್ಮಿಕ ಆಶಯಗಳನ್ನು ನಾವಿಂದು
ಮುನ್ನಡೆಸಿಕೊಂಡು ಹೋಗಬೇಕಾಗಿದೆ.
ಜಿಲ್ಲಾ ಮತ್ತು ತಾಲೂಕು ಘಟಕಗಳು
ಹೆಚ್ಚು ಕ್ರಿಯಾಶೀಲವಾಗಿ ಇಂದು ಕರ‍್ಯ
ನಿರ‍್ವಹಿಸುವ ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ
ಜಾಗತಿಕ ಲಿಂಗಾಯತ ಮಹಾಸಭಾದ
ಮಹಿಳಾ ಘಟಕದ  ಪ್ರಧಾನ ಅಧ್ಯಕ್ಷರನ್ನಾಗಿ
ಡಾ. ಸರ‍್ವಮಂಗಳ ಸಕ್ರಿ ಅವರನ್ನು ಮತ್ತು ಪ್ರಧಾನ ಕರ‍್ಯದರ‍್ಶಿಯಾಗಿ ಶ್ರೀಮತಿ ಪಾರ‍್ವತಿ
ಪಾಟೀಲ್,  ಉಪಾಧ್ಯಕ್ಷರಾಗಿ ಶ್ರೀಮತಿ
ಚೆನ್ನಮ್ಮ ಸಕ್ರಿ ಇವರನ್ನು  ಆಯ್ಕೆ ಮಾಡಿ  ಸನ್ಮಾನಿಸಲಾಯಿತು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸರ್ವಮಂಗಳ ಸಕ್ರಿ ಮಾತನಾಡಿ
ದಿನಾಂಕ ೨೭ ಮತ್ತು ೨೮ರಂದು ಬೆಳಗಾವಿಯಲ್ಲಿ
ನಡೆಯಲಿರುವ ಮಹಿಳಾ ಸಮಾವೇಶ…
ಲಿಂಗಾಯತ ಧರ‍್ಮ ಒಳಪಂಗಡಗಳ ಒಕ್ಕೂಟ
ವಾಗಿದೆ. ಮಹಿಳೆಯರಿಗಾಗಿಯೇ ಈ ಸಮಾವೇಶ
ಹಮ್ಮಿಕೊಳ್ಳಲಾಗಿದೆ. ಎಂಬ ಅಭಿಪ್ರಾಯವನ್ನು
ವ್ಯಕ್ತಪಡಿಸಿ ಸಮಾವೇಶವನ್ನು ಯಶಸ್ವಿ
ಗೊಳಿಸಬೇಕಾದದ್ದು ನಮ್ಮೆಲ್ಲರ ಕರ‍್ತವ್ಯವಾಗಿದೆ
ಎಂದು ಹೇಳಿದರು.
ರಾಯಚೂರು ತಾಲೂಕಿನ ಅಧ್ಯಕ್ಷರಾಗಿ
ಶ್ರೀಮತಿ ನಾಗರತ್ನ ನಾಗರಾಜು ವಿ ಪಾಟೀಲ್
ಕರ‍್ಯಧರ‍್ಶಿಯಾಗಿ ಶ್ರೀಮತಿ ಶಾರದಾ
ಪವನ್ ಪಾಟೀಲ್ ಲಿಂಗಸೂಗೂರು ತಾಲೂಕಿನ
ಗೌರವಾಧ್ಯಕ್ಷರಾಗಿ ಶ್ರೀಮತಿ ಲತಾ ಹೆಸರೂರು
ಅಧ್ಯಕ್ಷರಾಗಿ ಶ್ರೀಮತಿ ಅಮರವಾಣಿ ಐದನಾಳ
ಕರ‍್ಯಧರ‍್ಶಿಗಳಾಗಿ ಶ್ರೀಮತಿ ಶಿಲ್ಪ ನರ‍್ನಾಳ
ಇವರ ಹೆಸರುಗಳನ್ನು ಘೋಷಿಸಲಾಯಿತು.
. ಈ ಸಂದರ್ಭದಲ್ಲಿ  ತಾಲೂಕು ಅಧ್ಯಕ್ಷರಾದ
ಶ್ರೀ.ಜೆ ಬಸವರಾಜ ವಕೀಲರು ಮತ್ತು ಸಿ ಬಿ
ಪಾಟೀಲ್ ಶ್ರೀ ದೇವಣ್ಣ ವಕೀಲರು ಶ್ರೀ
ಚನ್ನಬಸವ ಇಂಜಿನಿಯರ್ ಶ್ರೀ ಮಹಾದೇವಪ್ಪ
ಏಗನೂರು ಬಸವ ಕೇಂದ್ರದ ಕರ‍್ಯಧರ‍್ಶಿ
ಗಳಾದ ಶ್ರೀ ಚನ್ನಬಸವಣ್ಣ ಮಹಾಜನ ಶೆಟ್ಟಿ
ಉಪಸ್ಥಿತರಿದ್ದರು.
ವೇದಿಕೆಯ ಮೇಲೆ ಡಾ. ಸರ‍್ವಮಂಗಳ ಸಕ್ರಿ
ಶ್ರೀಮತಿ ಪಾರ‍್ವತಿ ಪಾಟೀಲ್ ಶ್ರೀಮತಿ
ನಾಗರತ್ನ ವಿ ಪಾಟೀಲ್. ಶ್ರೀಮತಿ ಶಾಂತಲಾ
ಪಾಟೀಲ್ ಅತ್ನೂರು ಶ್ರೀಮತಿ ಅನ್ನಪರ‍್ಣಮ್ಮ
ಮೇಟಿ ಶ್ರೀಮತಿ ಅನ್ನಪರ‍್ಣಮ್ಮ ಹರವಿ
ಪ್ರೊ. ಸುಮಂಗಲ ಹಿರೇಮಠ ಶ್ರೀಮತಿ ತುಂಗಾ
ಹಿರೇಮಠ. ಶ್ರೀಮತಿ ದೇವೇಂದ್ರಮ್ಮ
ಲಿಂಗಸುಗೂರಿನ ಶ್ರೀಮತಿ ಚನ್ನಮ್ಮ ಸಕ್ರಿ
ಅಮರವಾಣಿ ಐದನಾಳ ಉಪಸ್ಥಿತರಿದ್ದರು.
ಕರ‍್ಯಕ್ರಮದ ಸ್ವಾಗತವನ್ನು
ಎಐಒ ಜಿಲ್ಲಾ ಘಟಕದ ಪ್ರಧಾನ ಕರ‍್ಯಧರ‍್ಶಿ
ಮುದ್ದನ ಗೌಡ ಪಾಟೀಲ್ ಮಾಡಿದರು.
ಕಾರ‍್ಯಕ್ರಮದ ನಿರೂಪಣೆಯನ್ನು
ತಾಲೂಕು ಘಟಕದ ಉಪಾಧ್ಯಕ್ಷರು
ಶ್ರೀಮತಿ ದೇವೇಂದ್ರಮ್ಮ ನಡೆಸಿಕೊಟ್ಟರು
ವಂದನರ‍್ಪಣೆ ಯನ್ನು ಶ್ರೀ ಶಿವಕುಮಾರ್
ಮಾಟೂರು ಮಾಡಿದರು.

Don`t copy text!