ಬಾಲ ರಾಮ
ಬರುತಲಿಹ ರಘುರಾಮ
ಚೆಂದದಲಿ ಬಾಲರಾಮ
ಜಗಕೆ ಮಂಗಳ ತರುತಲಿ
ಈ ಜಗದ ಅಂಗಳದಲಿ
ಜಗವ ರಂಜಿಸುತಲಿ
ಒಲವಿನ ಮುಗುಳು ನಗೆಯಲಿ
ಬಾಲರಾಮ ಚೆಲುವರಾಮ
ಪುಣ್ಯತಮ ರಾಮ ರಾಮ
ನಂತರ…
ವನವಾಸ ಮುಗಿಸಿ
ಎಲ್ಲ ಕಷ್ಟಗಳ ಬದಿಗೆ ಸರಿಸಿ
ಬಲು ನಳಿನಳಿಸುತಲಿ
ಬಲು ಝಗಮಗಿಸುತಲಿ
ಬರುವ ಭಕುತರ ಸೇವೆ ಸ್ವೀಕರಿಸಿ
ತುಂಬು ಹೃದಯದಲಿ ಆಶೀರ್ವದಿಸಿ
ಸೂರ್ಯವಂಶಕೆ ಶೋಭೆ ತರುತಲಿ
ನಿಂದಿಹನು ಈಗ ಅಯೋಧ್ಯೆ
ಯಲಿ
–ಕೃಷ್ಣ ಬೀಡಕರ.. ವಿಜಯಪುರ