ಬಾಗಲಕೋಟೆಯ ಹಿರಿಯ ಪತ್ರಕರ್ತ ಶ್ರೀ ರಾಮ್ ಮನಗೂಳಿ ಇನ್ನಿಲ್ಲ
ನಾನು ಬಾಗಲಕೋಟೆಯಲ್ಲಿ ಪದವಿ ವಿಧ್ಯಾರ್ಥಿ ಆಗಿದ್ದಾಗ
ಇವರ ಭಾಷಣಗಳನ್ನು ಕೇಳಿದ್ದೇನೆ ಆಗಿನ್ನೂ ಅವರದು ತರುಣ ಪ್ರಾಯ ರೋಮಾಂಚಕಾರಿ ಭಾಷಣ ಮಾಡುತ್ತಿದ್ದರು ಯಾವ ವ್ಯಕ್ತಿಯ ಭಿಡೆ ಇಲ್ಲದೆ..
ಅವರ ಸಂಪಾದಕರಾಗಿದ್ದ ನಾಗರಿಕ ಪತ್ರಿಕೆ ನಮ್ಮ ಕಾಲೇಜಿನ ಲೈಬ್ರರಿ ಯಲ್ಲಿ ದಿನಾಲು ಓದುತ್ತಿದ್ದೆ..
ಒಮ್ಮೆ ಅಂತರ ವಿಶ್ವವಿದ್ಯಾಲಯ ಮಟ್ಟದ ಕ್ವಿಜ್ ಸ್ಪರ್ಧೆಯಲ್ಲಿ ನನಗೆ ಪ್ರಥಮ ಬಹುಮಾನ ಬಂದಾಗ ನಾಗರಿಕ ಪತ್ರಿಕೆ ಮುಖ ಪುಟದಲ್ಲಿ ಬ.ವಿ.ವಿ ಕಾಲೇಜಿನ ಜಾಲಿಹಾಳಗೆ ಪ್ರಥಮ ಬಹುಮಾನ ಎಂದು ಪ್ರಕಟಿಸಿದ್ದರು
ಅಂದು ಬಸವೇಶ್ವರ ವಿಜ್ಞಾನ ಮಹಾವಿದ್ಯಾಲದ ನೋಟಿಸ್ ಬೋರ್ಡನಲ್ಲಿ ಆ ಪತ್ರಿಕೆ ತೂಗು ಹಾಕಿದ್ದರು…
ಅಂದು ನಾನು ಕಾಲೇಜಿಗೆ ಚಕ್ಕರ್..ಪ್ರಿನ್ಸಿಪಾಲ್ ಅವರು ನನ್ನನ್ನು ಕರೆದುಕೊಂಡು ಬರಲು ಪ್ಯೂನನನ್ನು ಹಾಸ್ಟೇಲಿಗೆ ಕಳುಹಿಸಿದ್ದರು ನಾನು ಹೋದೆ ಪ್ರಿನ್ಸಿಪಾಲ್ ಸೇರಿ ಎಲ್ಲರೂ ನನ್ನನ್ನು ಅಭಿನಂದಿಸಿದರು .ನಾನು ಅಂದಿನ ಆ ಪತ್ರಿಕೆಯನ್ನು ನನ್ನ ನೆನಪಿಗೊಸ್ಕರ ಕಾಯ್ದಿರಸಬೇಕೆಂದು ಮರುದಿನ ಪತ್ರಿಕೆ ಕಛೇರಿಗೆ ಹೋದಾಗ ಮನಗೂಳಿ ಇದ್ದರು
ನಿನ್ನೆ ಪತ್ರಿಕೆ ಏಕೆ ಬೇಕು ಏನು ವಿಶೇಷ ಎಂದು ಕೇಳಿ ವಿಷಯ ತಿಳಿದು ತುಂಬಾ ಆತ್ಮೀಯವಾಗಿ ಮಾತನಾಡಿಸಿ ಪತ್ರಿಕೆ ಕೊಟ್ಟು ಕಳುಹಿಸಿದರು ಈಗ ಅವರು ಬರೀ ನೆನಪು ಮಾತ್ರ ನಿಮ್ಮಾತ್ಮಕ್ಕೆ ಶಾಂತಿ ಸಿಗಲಿ ರಾಮ್ ಮನಗೂಳಿ ಸರ್.
–ಶ್ರೀ ಶೈಲ ಜಾಲಿಹಾಳ ಮಸ್ಕಿ