ನಮ್ಮೂರ ಜಾತ್ರೆ

ನಮ್ಮೂರ ಜಾತ್ರೆ

ಜಾತ್ರೆ ಬಂದಿತವ್ವ ಜಾತ್ರೆ ಬಂದೈತೆ
ನಮ್ಮೂರ ಜಾತ್ರೆ ಬಲು ಚಂದೈತೆ ಬರ್ರಿ
ಎಲ್ಲರೂ ಬರ್ರಿ ಎನ್ನುತ ಕರದೈತೆ ನೋಡ್ರಿ
ಐದ್ದಿನ ಜಾತ್ರೆ ತಯಾರಿ ನಡದೈತೆ.ತಂಗಿ

ಊರ ತುಂಬ  ಕಟ್ಟಿ ಹಸಿರು ತೋರಣ
ಮನಿಮಂದಿಗೆಲ್ಲ ಭರ್ತಿ ಸಂತಸ ಹೂರಣ
ಬೀಗರು ಬಿಜ್ಜರು ಮುಂಗಡ ಬಂದ ಕಾರಣ
ಯಂಕಪ್ಪನ ತೇರಿನ ನೆಪದಾಗ ಸೇರ್ಯಾರ

ಹುಡುಗರ ಮುಖದಾಗ  ಲವಲವಿಕೆ ವಿಶೇಷ
ಒಂದೊಂದು ದಿನ ಒಂದೊಂದು ಬಗೆ ವೇಷ
ಬೆಳ್ತನಕ ಕಾರ್ಯಕ್ರಮಗಳ ಮಾಡ್ತಾರ ಭೇಷ್
ಬಂದ ನೋಡಾಕ ಎಣಿಸಬ್ಯಾಡ್ರಿ ಮೀನಾಮೇಷ.

ಮನೆಮನೆಯಲ್ಲಿ ಸಜ್ಜಿಗೆ, ಹೋಳಿಗೆ ಮಾಡಿ
ವೆಂಕಟೇಶ್ವರನಿಗೆ ಪ್ರಥಮ ನೈವೇದ್ಯ ನೀಡಿ
ಸುಮಂಗಲಿಯರು ಸೇರಿ ಭಕ್ತಿಯಿಂದ ಹಾಡಿ
ದೇವರಿಗೆ ಹರಕೆಯ ಸಲ್ಲಿಸಿ ಮನದಲಿ ಬೇಡಿ

ನಮ್ಮ ಯಂಕಪ್ಪ ಬೇಡಿಕೆಗಳಿಗೆ ಒಲಿದಾನ
ದೂರು ದುಮ್ಮಾನ ದೂರ ಮಾಡಿ ಹರಿಸ್ಯಾನ
ಎಂಥ ಚಂದದ ತೇರವ್ವ ನೋಡಾಕ ಕರಿಸ್ಯಾನ.
ಸಾಗೈತೆ ತೇರು ಉತ್ಪತ್ತಿ ಹೂವು ಹಾರಸ್ಯಾರ .

ಜಾತ್ರೆ ತಿರುಗ್ಯಾರ ಬೆಂಡು ಬೆತ್ತಾಸ ಕೊಂಡಾರ
ಹೆಂಗೆಳೆಯರೆಲ್ಲಾ ಬಳೆಗಳ ಧರಿಸಿ ನಲಿದಾರ
ಯಪ್ಪ ಯಂಕಪ್ಪ ತವರ ಸಿರಿ ಬೆಳಕ ಹೆಚ್ಚಲಿ
ತೇರ ನೆಪದಲಿ ತವರಿಗೆ ಬರುತಿವಿ ನಿರಂತರ

ಜಯಶ್ರೀ ಭ ಭಂಡಾರಿ
     ಜಾಲಿಹಾಳ, ತಾಲೂಕು.ಬಾದಾಮಿ

Don`t copy text!