ಕೋತಿ (ಮುಷ್ಯ) ಕೊಂಬುವನ ಹಾಡು
(ಸಾಂದರ್ಭಿಕ ಚಿತ್ರ)
ಬುಡುಬುಡಿಕೆ ಬಸ್ಯಾ , ಹೆಳ್ಯಾನ ವಿಷ್ಯ…
ಬುಡುಬುಡಿಕೆ ಬಸ್ಯಾ ತಂದಾನ ಮುಶ್ಯ ||
ತೆಂಕಣದ ಕಡೆಯವನು ಬಡಗಣಕೆ ಬಂದಿಹನು
ತುಂಗೆಯಲಿ ಮಿಂದು ತಾ ಜಪತಪವ ಮಾಡಿಹನು
ಹನುಮನ ಗುಡಿಯಲಿ ಕೋತಿಗಳ ಕೊಂಬುವನು
ಕೋತಿ ಒಂದಕೆ ಕೋಡುವ ಸಾವಿರದ ಹೋನ್ನು ಸಾವಿರದ ಹೋನ್ನು ||೧||
ಬುಡುಬುಡಿಕೆ ಬಸ್ಯಾ , ಹೆಳ್ಯಾನ ವಿಷ್ಯ….
ಕರಿ ಕೋತಿ ಮರಿಕೋತಿ ಉದ್ದ ಬಾಲದಾ ಕೋತಿ
ಹೆಚ್ಚಿನ ಹೊನ್ನಿಗಿರಬೇಕು ಕೆಂಪನೆಯ ಕೋತಿ
ಸರತಿಯಲಿ ಬಂದು ಕೋತಿಗಳ ತಂದು
ಹರುಷವ ಪಟ್ಟರು ಜನ ಹೊನ್ನನ್ನು ಕಂಡು ಹೊನ್ನನ್ನು ಕಂಡು. ||೨||
ಬುಡುಬುಡಿಕೆ ಬಸ್ಯಾ ಹೆಳ್ಯಾನ ವಿಷ್ಯ….
ಕೊಳ್ಳುವನು ಕಂಡನು ಕೋತಿ ಜನಗಳ ಹಿಂಡು
ನುಡಿದನು ಅವರ ಅತಿ ಆಸೆ ಕಂಡು
ಮತ್ತೆ ನಾ ಬರುವೆನು ಕೋತಿಗಳ ಕೊಂಬುವೆನು
ಕೊಡುವೆ ಆಗ ನಾ ಸಾವಿರಕೆ ದುಪ್ಪಟ್ಟು ಹೊನ್ನು ದುಪ್ಪಟ್ಟು ಹೊನ್ನು ||೩||
ಬುಡುಬುಡಿಕೆ ಬಸ್ಯಾ ಹೆಳ್ಯಾನ ವಿಷ್ಯ….
ಬರಿದಾಯಿತು ಕಾಡು ಊರಿಗೆ ಬಂದೀತು ಕೇಡು
ಕೋತಿಕೊಳ್ಳುವನು ಮರಳಿ ಬಂದಾಯ್ತು ನೋಡು
ಹಿಗ್ಗಿನಲ್ಲಿ ಜನ ಬಂದು ಕೋತಿಗಳ ಹಿಡಿ ತಂದು
ಮಾರಿದರು ಹೊನ್ನಿಗೆ ಮತಿಭ್ರಮಣೆಗೊಂಡು ಮತಿಭ್ರಮಣೆಗೊಂಡು ||೪||
ಬುಡುಬುಡಿಕೆ ಬಸ್ಯಾ ಹೆಳ್ಯಾನ ವಿಷ್ಯ….
ಕೊಳ್ಳುವನು ನೋಡಿದನು ಜನಗಳಿಗೆ ಹೇಳಿದನು
ತನ್ನೀರಿ ಇನ್ನಷ್ಟು ಕೋತಿಗಳ ಕೊಂಬುವೆನು
ಕೊನೆಯ ಸಲ ನಾ ಬರುವೆ ಕೋತಿಗಳ ಕೊಂಬುವೆನು
ಕೊಡುವೆ ನಾ ಆಗ ಕೋತಿಗೆ ಹತ್ತುಸಾವಿರದ ಹೊನ್ನು ಹತ್ತುಸಾವಿರದ ಹೊನ್ನು ||೫||
ಬುಡುಬುಡಿಕೆ ಬಸ್ಯಾ ಹೆಳ್ಯಾನ ವಿಷ್ಯ….
ಕೋತಿಗಳ ಜೊತೆಯಲ್ಲಿ ಸೇವಕನ ಬಿಟ್ಟಿರುವೆ
ಹನುಮನ ಗುಡಿಯಲ್ಲಿ ತಿಂಗಳಿಗೆ ನಾ ಬರುವೆ
ಕೂಡಿಡಿರಿ ಕೋತಿಗಳ, ನೋಡಿಡಿರಿ ಕೋತಿಗಳ
ಚಿನ್ನದ ಭಾಗ್ಯವಿದು ನಿಮಗೆ ಬಂದಿಹುದು ಬಹುವಿರಳ ಬಂದಿಹುದು ಬಹುವಿರಳ ||೬||
ಬುಡುಬುಡಿಕೆ ಬಸ್ಯಾ ಹೆಳ್ಯಾನ ವಿಷ್ಯ….
ಅಗಲಿದವು ಕರ್ಣಗಳು ಜನಕೆ ಅರಳಿದವು ಕಣ್ಣುಗಳು
ಕೋತಿಗಳು ಸಿಗದೊಂದು ಹುಡುಕಿದರೂ ಹಗಲಿರಳು
ಸೇವಕನ ಬಳಿ ಬಂದು ಕೋತಿಗಳು ಬೇಕೆಂದು
ಮರಳಿ ಕೋಳ್ಳಲು ನಿಂತರು ಈಜಗದಿ ಜನಮರುಳು ಈಜಗದಿ ಜನಮರುಳು||೭||
ಬುಡುಬುಡಿಕೆ ಬಸ್ಯಾ ಹೆಳ್ಯಾನ ವಿಷ್ಯ….
ಕೆಳಿದರು ಸೆವಕನ ಬೆಡಿದರು ಸೇವಕನ,
ಮರಳಿಕೊಂಡರೈದು ಸಾವಿರಕೋಂದು ಕೋತಿಗಳನ
ಗುಣಿಸಿದರು ಮನದಲ್ಲಿ,ಎಣಿಸಿದರು ಮನದಲ್ಲಿ
ಕುಡಿಕಳೆ ನೋಡೆ ಉಳಿವುದು ಐದುಸಾವಿರವು ಕೈಯಲ್ಲಿ ಐದುಸಾವಿರವು ಕೈಯಲ್ಲಿ ||೮||
ಬುಡುಬುಡಿಕೆ ಬಸ್ಯಾ ಹೆಳ್ಯಾನ ವಿಷ್ಯ….
ಅತಿ ಆಸೆಗೊಂಡು ಎಲ್ಲ ಕೋತಿಗಳ ಕೊಂಡು
ಕಾಯುತಲಿ ಇದ್ದರು ಜನ ಕೋತಿ ಕೊಳ್ಳುವನ ನೋಡು
ದಿನರಾತ್ರಿ ಕಳೆದು ಮತ್ತೆ ವಾರಗಳು ಸರಿದು
ತಿಂಗಳಿನ ಹೊತ್ತಾಯಿತು ಮಾಲಿಕನ ಸುಳಿವಿಲ್ಲ ನೋಡು ಸುಳಿವಿಲ್ಲ ನೋಡು ||೯||
ಬುಡುಬುಡಿಕೆ ಬಸ್ಯಾ ಹೆಳ್ಯಾನ ವಿಷ್ಯ….
ಸೆವಕನ ಸುಳಿವಿಲ್ಲ ಮಾಲಿಕನು ಬರಲಿಲ್ಲ
ಮೋಸದ ಆಟವಿದು ಈ ಜಗದಿ ಹುರಿಳಿಲ್ಲಾ
ಆಸೆ ಎಂಬುದು ಧುಖಃಕ್ಕೆ ಕಾರಣವು ತಿಳಿ ಸುಳಲ್ಲ
ಅತಿ ಆಸೆ ಗತಿಕೆಡು ಅರಿಯಬೆಕು ನಾವೆಲ್ಲ ಅರಿಯಬೆಕು ನಾವೆಲ್ಲ ||೧೦||
ಬುಡುಬುಡಿಕೆ ಬಸ್ಯಾ , ಹೆಳ್ಯಾನ ವಿಷ್ಯ….
ಬುಡುಬುಡಿಕೆ ಬಸ್ಯಾ ತಂದಾನ ಮುಶ್ಯ ||
– ಪ್ರಸನ್ನ ಪಟವಾರಿ (ವೆಂಕಟಾಪುರ).
91138 28788
Iam Very excited and grateful to Shri Veeresh soudri sir for publishing my pom in their e – ಸುದ್ದಿ paper and to Shri Gundurao sir for supporting every time for my stories and this time also.
ಧನ್ಯವಾದಗಳು 🙏🙏🙏