ಮಾನವ ಹಕ್ಕುಗಳು ವಚನ ಸಾಹಿತ್ಯದ ಜೀವಾಳ

ಜಿಲ್ಲಾ ಕದಳಿ ಮಹಿಳಾ ವೇದಿಕೆಯಿಂದ ದತ್ತಿ ಉಪನ್ಯಾಸ

ಮಾನವ ಹಕ್ಕುಗಳು ವಚನ ಸಾಹಿತ್ಯದ ಜೀವಾಳ


ಮಾನವ ಹಕ್ಕುಗಳು ಪ್ರಜ್ಞಾವಂತರಿಂದಲೇ ಉಲ್ಲಂಘನೆ ಆಗುತ್ತಿರುವ ಪ್ರಸ್ತುತ ದಿನಗಳಲ್ಲಿ ಪ್ರಭುತ್ವ ತನ್ನ ಪಾತ್ರ ಕುರಿತು ಚಿಂತನೆ ನಡೆಸುವಂತೆ ಪ್ರಜೆಗಳು ಪ್ರಭುತ್ವದ ಜೊತೆಗಿನ ಸಂಬಂಧ ಪುನರಾವಲೋಕವಾಗಬೇಕು. ಎರಡು ವಿಶ್ವ ಯುದ್ಧಗಳನ್ನು ಕಂಡ ಜಗತ್ತು ಆದರ ವಿನಾಶಕಾರಿ ಪರಿಣಾಮಗಳಿಂದ 1945 ರಲ್ಲಿ ಅಸ್ತಿತ್ವಕ್ಕೆ ಬಂದ ವಿಶ್ವ ಸಂಸ್ಥೆ 1948ರಲ್ಲಿ ಮಾನವ ಹಕ್ಕುಗಳನ್ನು ಘೋಷಣೆ ಮಾಡಿತು. ನಮ್ಮ ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳನ್ನು ಅರ್ಥೈಸಿಕೊಳ್ಳುವಲ್ಲಿ ವಚನ ಸಾಹಿತ್ಯ ದಾರಿದೀಪವಾಗಿದೆ. ಬಸವಣ್ಣನವರ ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವನಮ್ಮವ ಜಾತಿ ಮತ ಭೇದಗಳನ್ನು ತೊರೆದು ಸಮಾನತೆಯ ತತ್ವವನ್ನು ಎತ್ತಿ ಹಿಡಿಯುತ್ತದೆ. ಛಲಬೇಕು ಶರಣಂಗೆ ಪರಸ್ತ್ರೀ, ವರಧನ, ಪರದೈವವನೊಲ್ಲೆನೆಂಬ ವಚನ ಛಲ ಒಳ್ಳೆಯ ಸಾಧನೆಗೆ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ. ಮಾತ್ರವಲ್ಲ ಮನುಷ್ಯ ಸ್ವತಂತ್ರವಾಗಿ ಯಾವ ಬಂಧನವಿಲ್ಲದೆ ಬದುಕುವ ಹಕ್ಕುಗಳ ಇತಿಮಿತಿಯನ್ನು ವಚನಗಳು ಸಾರುತ್ತವೆ. ಎಂದು ಡಾ.ರೇಖಾ ಪಾಟೀಲ ತಮ್ಮ ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು. ಅವರು ಇಂದು ವೀರಶೈವ ಸಮಾಜದ ಹೆಚ್, ಸಿ, ಎಂ, ಎಸ್, ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಮತ್ತು ಜಿಲ್ಲಾ ಕದಳಿ ಮಹಿಳಾ ವೇದಿಕೆ ವತಿಯಿಂದ ಲಿಂ. ಸಿರವಾರದ ರುದ್ರಮ್ಮ ಚಿಕ್ಕಿ ಉಮಾಪತೆಪ್ಪ ದತ್ತಿ ಮತ್ತು ಲಿಂ. ಸಿದ್ದಮ್ಮ ಬಸವನಗೌಡ ದರೂರ್ ದತ್ತಿ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಹೆಚ್, ಸಿ, ಎಂ, ಎಸ್, ಕೆ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಅಶೋಕ ಪಾಟೀಲ ಅತ್ನೂರ ರವರು ಸಸಿಗೆ ನೀರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಉದ್ಘಾಟನಾ ಮಾತುಗಳಲ್ಲಿ ಇಂದು ಸಂವಿಧಾನ ನೀಡಿರುವ ಶೇಕಡ 33 ರಷ್ಟು ಮಹಿಳಾ ಮೀಸಲಾತಿ 12ನೇ ಶತಮಾನದಲ್ಲಿಯೇ ಶರಣರು ಸ್ತ್ರೀ ಸ್ವಾತಂತ್ರ್ಯ, ಸಮಾನತೆ ನೀಡಿದ್ದಾರೆ. ಬಸವಣ್ಣನವರ ವಚನಗಳು ಇಂದಿನ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ವಚನ ಸಾಹಿತ್ಯ ದಾರಿದೀಪವಾಗಿದ್ದು ಸಮಾಜದ ಮತ್ತು ದೇಶವನ್ನು ಕಟ್ಟುವ ನಾಯಕರಾಗುವಂತೆ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕದಳಿ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಎಂ ಮಾತನಾಡಿ ಭವಿಷ್ಯದ ಶಿಕ್ಷಕರಾಗುವ ಎಲ್ಲಾ ಬಿ.ಎಡ್ ವಿದ್ಯಾರ್ಥಿಗಳಿಗೆ ಶಿಕ್ಷಕ ವೃತ್ತಿ ಉದ್ಯೋಗವಾಗದೆ ಬದುಕಿಗಾಗಿ ವಿದ್ಯಾರ್ಥಿಗಳ ಮತ್ತು ಸಮಾಜದ ಸುಭದ್ರ ಅಡಿಪಾಯಕ್ಕಾಗಿ ಶ್ರಮಿಸಬೇಕು. ವೃತ್ತಿಯೊಂದಿಗೆ ಪ್ರವೃತ್ತಿಯನ್ನು ನಿರಂತರವಾಗಿ ಬೆಳೆಸಿಕೊಳ್ಳಬೇಕು, ಸಾಹಿತ್ಯದ ಅಧ್ಯಯನ ಯುವಕ ಯುವತಿಯರಲ್ಲಿ ಹೆಚ್ಚಾಗಬೇಕೆಂದು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀಮತಿ ದಾನಮ್ಮ ಸುಭಾಷ್ ಚಂದ್ರ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ವೇದಿಕೆ ಬಳೆದು ಬಂದ ಇತಿಹಾಸವನ್ನು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.

ವೇದಿಕೆಯಲ್ಲಿ ಸಿರವಾರದ ರುದ್ರಮ್ಮ ಚಿಕ್ಕಿ ಉಮಾಪತೆಪ್ಪ ಇವರ ದತ್ತಿ ಸ್ಮರಣಾರ್ಥ ಅವರ ಕುಟುಂಬಸ್ಥರಾದ ಶ್ರೀ ಚಿಕ್ಕಿ ಸೂರಜ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾದ ಶ್ರೀ ಸಿದ್ರಾಮಯ್ಯ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿ,ಸ್ವಾಗತಿಸಿ, ವಂದಿಸಿ ಯಶಸ್ವಿಗೊಳಿಸಿದರು. ಶಿಕ್ಷಣ ಮಹಾವಿದ್ಯಾಲಯದ ಬೋಧಕ ಬೋಧಕ ಸಿಬ್ಬಂದಿಯವರು ಮತ್ತು ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಯಿತು

Don`t copy text!