ತನುವ ತೋಟದಲ್ಲಿ

ತನುವ ತೋಟದಲ್ಲಿ

ತನುವ ತೋಟದಲ್ಲಿ
ಮನವೆಂಬ ಹೂವರಳಿ
ಗುಣವೆಂಬ ಪರಿಮಳ ಬೀರಿ
ಬಾಳ ಹಸನಾಗಿಸಲಿ…..

ಸ್ನೇಹದ ಬೀಜ ಮೊಳಕೆಯೊಡೆದು
ಪ್ರೀತಿಯ ಬೆಳೆ ಬೆಳೆದು
ಶಾಂತಿಯ ಪರಿಮಳವು
ಎಲ್ಲೆಡೆಯೂ ಬೀರಲಿ…

ಮನವೆಂಬ ಮಾಮರದಿ
ಪ್ರೀತಿ ಸ್ನೇಹದಿಂಪಿನಲಿ
ಕೋಗಿಲೆಯ ಸವಿಗೊರಳು
ತಾನುಲಿಯುತಿರಲಿ…..

ಮೌನದಲಿ ಮಾತಿನಲಿ
ಕೊಲುವ ದೂರುವ
ನೋವ ನೀಡುವ ಪರಿ
ತಾನಳಿದು ನಿಲಲಿ..

ಭಾವ ಜೀವಗಳ
ಭವ್ಯ ದಿವ್ಯದಾಲಿಂಗನದಿ
ನಗೆಮಿಂಚು ಮೂಡಿ
ಸೊಗದ ಗೂಡಾಗಿರಲಿ…

ತನುವ ತೋಟವದು
ನಿತ್ಯ ಸತ್ಯ ಪ್ರೀತಿಯ
ಮನ ಮನೆಯ
ಜೇನು ಹಾಡಾಗಿರಲಿ….

ಇಂದಿರಾ ಮೋಟೆಬೆನ್ನೂರ. ಬೆಳಗಾವಿ.

Don`t copy text!