ಆರ್ಥಿಕ ಹೊರೆಯಾದ ಹೆಚ್ಚುವರಿ ವಿಶ್ವ ವಿದ್ಯಾಲಯಗಳು

ಆರ್ಥಿಕ ಹೊರೆಯಾದ ಹೆಚ್ಚುವರಿ ವಿಶ್ವ ವಿದ್ಯಾಲಯಗಳು

ಮುಖ್ಯಮಂತ್ರಿಗಳಿಗೆ ಪತ್ರ

ಹಿಂದಿನ ಸರಕಾರ ಇದ್ದ ಸಮಯದಲ್ಲಿ ಜಿಲ್ಲೆಗೊಂದು ವಿಶ್ವ ವಿದ್ಯಾಲಯ ರೀತಿಯಲ್ಲಿ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ
ವಿಶ್ವ ವಿದ್ಯಾಲಯ ಸ್ಥಾಪಿಸಿ ಯಾವುದೇ ಮೂಲಭೂತ ಸವಲತ್ತು ಸೌಕರ್ಯ ಇಲ್ಲದ ಅತ್ಯಂತ ಕಳಪೆ ಗುಣಮಟ್ಟದ ಕಟ್ಟಡದಲ್ಲಿ ವಿಶ್ವ ವಿದ್ಯಾಲಯಗಳನ್ನು ತರಾತುರಿಯಲ್ಲಿ ಸ್ಥಾಪಿಸಿ ಅನೇಕ ಕುಲ ಸಚಿವರನ್ನು ಶೈಕ್ಷಣಿಕ ಹಾಗೂ ಸೇವಾ ಜೇಷ್ಠತೆ ಅರ್ಹತೆಯನ್ನು ನೋಡದೆ ನೇಮಕಾತಿ ಮಾಡಿ
ಸ್ನಾತಕೊತ್ತರ ಪ್ರವೇಶವಿಲ್ಲದ
ಕ್ಯಾಂಪಸ್ ಒಂದು ವಿಶ್ವ ವಿದ್ಯಾಲಯವೆ?

ಕಚೇರಿ ಸಿಬ್ಬಂದಿಯ ಕೊರತೆ ಕಟ್ಟಡ ನಿರ್ವಹಣೆಯ ಕ್ಷೇತ್ರದಲ್ಲಿ ಸಂಪೂರ್ಣ ವಿಫಲಗೊಂಡವು
ಹೊಸ ವಿಶ್ವ ವಿದ್ಯಾಲಯಗಳು.
ಅದೆಷ್ಟೋ ತಿಂಗಳು ಕುಲಪತಿ ಕುಲಸಚಿವ
ಮೌಲ್ಯಮಾಪಕರ ಸಂಬಳ ಇಲ್ಲದೆ ಒಂದು ರೀತಿಯ ಅಸಹ್ಯ ರೀತಿಯಲ್ಲಿ ವಿಶ್ವ ವಿದ್ಯಾಲಯ ನಡೆಸುವುದು ಯಾವ ಪುರುಷಾರ್ಥಕ್ಕೆ?
ಸರಕಾರ ಈ ಹಿಂದೆ ತೆಗೆದುಕೊಂಡ ವಿಶ್ವ ವಿದ್ಯಾಲಯಗಳ ಪುನರ್ ವಿಲಿನಿಕರಣದ ಆದೇಶ ಇನ್ನೂ ದೊರೆತಿಲ್ಲ.
ಕೆಲವರು ಖೋಟಾ ಶೈಕ್ಷಣಿಕ ಅರ್ಹತೆಯನ್ನು ತೋರಿಸಿ
ಕುಲಸಚಿವ ಹುದ್ದೆ ಪಡೆದಿದ್ದಾರೆ.
ವಸೂಲಿ ಲಾಬಿ ಬೇಕಾ ಬಿಟ್ಟಿ ವರ್ಗಾವಣೆ ಮಾಡುವ ಸರಕಾರದ ಕಾರ್ಯ ಬೇಜಾವಾಬ್ದರಿ ಇಂದ ಕೂಡಿದೆ.
ನಿಯಂತ್ರಣ ಇಲ್ಲದ ವಿಶ್ವ ವಿದ್ಯಾಲಯ ಕರ್ನಾಟಕ ರಾಜ್ಯಕ್ಕೆ ಆರ್ಥಿಕ ಹೊರೆ ಅಲ್ಲವೆ?
ಈ ಕೂಡಲೇ ಸರಕಾರ ಇಂತಹ ಅನಗತ್ಯವಾದ ಹೆಚ್ಚುವರಿ ವಿಶ್ವ ವಿದ್ಯಾಲಯಗಳನ್ನು ತಮ್ಮ ತಮ್ಮ ಮೂಲ ವಿಶ್ವ ವಿದ್ಯಾಲಯಗಳಿಗೆ ಮರು ಜೋಡಣೆ ಮಾಡಲು
ಕೂಡಲೇ ಆದೇಶ ಹೋರಡಿಸಬೇಕು.
ಆಸಕ್ತ ಪ್ರಾಮಾಣಿಕ ಗುಣಮಟ್ಟದ ಕುಲಪತಿಗಳನ್ನು
ನಿಯಮಿಸ ಬೇಕು. ಬೇರೆ ಸರಕಾರಿ ಅಥವಾ ಅನುದಾನಿತ ಸಂಸ್ಥೆಗಳ ನಿವೃತ್ತ ಪ್ರಾಧ್ಯಾಪಕರನ್ನು ವಿಶ್ವ ವಿದ್ಯಾಲಯಕ್ಕೆ ಕುಲಪತಿ ನಿಯಮಿಸುವುದು ಯಾವ ನ್ಯಾಯಕ್ಕೆ?
ಸನ್ಮಾನ್ಯ ಶ್ರೀಸಿದ್ಧರಾಮಯ್ಯನವರು ಮುಖ್ಯ ಮಂತ್ರಿಗಳು ಕರ್ನಾಟಕ ಸರಕಾರ ಇತ್ತ ಗಮನ ಹರಿಸಲು
ಕೋರಿಕೆ.

 

 

 

 

 

 

 

 

 

ಡಾ ಶಶಿಕಾಂತ ರುದ್ರಪ್ಪ ಪಟ್ಟಣ
ರಾಮದುರ್ಗ

Don`t copy text!