ಬಸನಗೌಡ ಬಾದರ್ಲಿ ಎಂಎಲ್ಸಿ ಆಗಿ ಆಯ್ಕೆ

ಬಸನಗೌಡ ಬಾದರ್ಲಿ ಎಂಎಲ್ಸಿ ಆಗಿ ಆಯ್ಕೆ

e-ಸುದ್ದಿ ಬೆಂಗಳೂರು

ಕಾಂಗ್ರೆಸ್ ಪಕ್ಷದ ಯುವ ನಾಯಕ ಸಿಂಧನೂರಿನ ಬಸನಗೌಡ ಬಾದರ್ಲಿ ವಿಧಾನ ಪರಿಷತ್ ಸದಸ್ಯರಾಗಿ ಶುಕ್ರವಾರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಬಸನಗೌಡ ಬಾದರ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ, ನಾಯಕರಾಗಿ, ಯುವ ಕಾಂಗ್ರೆಸ್ ನ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ನಿಲ್ಲಲು‌ ಸಿದ್ದತೆ ಮಾಡಿಕೊಂಡಿದ್ದರು. ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಸಂಬಂಧಿಯು ಆಗಿದ್ದ ಹಂಪನಗೌಡ ಬಾದರ್ಲಿ ಅವರಿಗೆ ಪಕ್ಷದ ವರಿಷ್ಠರು ಸಿಂಧನೂರಿನಿಂದ ಸ್ಪರ್ಧಿಸಲು ಅವಕಾಶ ನೀಡಿ ಬಸನಗೌಡ ಬಾದರ್ಲಿ ಅವರಿಗೆ ಮುಂದಿನ ದಿನದಲ್ಲಿ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದರು.

ಅದರಂತೆ ಜಗದೀಶ ಶಟ್ಟರ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಬಸನಗೌಡ ಬಾದರ್ಲಿ ಅವರನ್ನು ವಿಧಾನ ಪರಿಷತ್ತಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಸಂಸದರಾದ ಜಿ.ಕುಮಾರನಾಯಕ, ರಾಜಶೇಖರ ಹಿಟ್ನಾಳ,  ಶಾಸಕ ಹಂಪಯ್ಯ ನಾಯಕ , ಮಾಜಿ ಶಾಸಕ ರಾಜರಾಯಪ್ಹ ನಾಯಕ ಹಾಗೂ ರವಿ ಬೋಸರಾಜು ಪ್ರಮಾಣ ಪತ್ರ ಪಡೆಯುವಾಗ ಇದ್ದರು.

 

Don`t copy text!