ಪ್ರವೇಶ ಇರದ ಹೆಚ್ಚುವರಿ ವಿಶ್ವವಿದ್ಯಾಲಯಗಳು
ಹಿಂದಿನ ಸರಕಾರವು ಮಾಡಿದ ಮಹಾ ತಪ್ಪುಗಳಲ್ಲಿ
ಹೆಚ್ಚುವರಿ ವಿಶ್ವವಿದ್ಯಾಲಯಗಳ ಸ್ಥಾಪನೆ.
ಕರ್ನಾಟಕ ರಾಜ್ಯದಲ್ಲಿನ ಮೊದಲಿನ ವಿಶ್ವವಿದ್ಯಾಲಯಗಳಲ್ಲಿ ಪ್ರತಿಶತ 80% ರಷ್ಟು ಭೋದಕ ಮತ್ತು ಭೋದಕೆತರ ಸಿಬ್ಬಂದಿಯ ಕೊರತೆ ಇದೆ. ಸರಕಾರವು ಕಳೆದ 6 ವರ್ಷಗಳಿಂದ ಯಾವುದೇ ನೇಮಕಾತಿ ಮಾಡಿಲ್ಲ. 5000 ಪ್ರಾಧ್ಯಾಪಕರ ನೇಮಕಾತಿ ಆಗ ಬೇಕು . ಸರಕಾರಿ ಕಾಲೇಜುಗಳೂ ಇದೆ ದಯನಿಯ ಸ್ಥಿತಿಯನ್ನು ಹೊಂದಿವೆ .
ಇದಲ್ಲದೆ ನಾಡಿನ ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಸರಕಾರ ಮಾನ್ಯತೆ ಪಡೆದ ಸ್ನಾತಕೊತ್ತರ ಪ್ರವೇಶ ಪಡೆಯುತ್ತಾರೆ .
ಮೊದಲಿನ ವಿಶ್ವವಿದ್ಯಾಲಯಗಳಲ್ಲಿ ಅನೇಕ ಕೋರ್ಸ್ ಮುಚ್ಚುವ ಹಂತ ತಲುಪಿವೆ. ವಸ್ತು ಸ್ಥಿತಿ ಹೀಗಿರುವಾಗ .ಅನಗತ್ಯ ಹೆಚ್ಚುವರಿ ವಿಶ್ವವಿದ್ಯಾಲಯಗಳು ಯಾವ ಪುರುಷಾರ್ಥಕ್ಕೆ ಎನ್ನುವುದು ಸೋಜಿಗದ ವಿಷಯ.
ಹೆಚ್ಚುವರಿ ವಿಶ್ವವಿದ್ಯಾಲಯಗಳು ಯಾವುದೇ ಸವಲತ್ತು ಮತ್ತು ಮೂಲಭೂತ ಸಂಶೋಧನಾ ಕೇಂದ್ರ ಸೌಕರ್ಯಗಳನ್ನು ಹೊಂದಿಲ್ಲ.
ಗುಣಮಟ್ಟದ ಶಿಕ್ಷಣ ಮರಭೂಮಿಯ ಮರಿಚಿಕೆ
ವಿಶ್ವ ವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಕಳಪೆಯಾಗಿದೆ.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಯೂನಿವರ್ಸಿಟಿ
ಸಂಪೂರ್ಣ ಎಡುವಿವೆ. ವಿಶ್ವ ವಿದ್ಯಾಲಯಗಳು ಪದವಿ ಪ್ರಧಾನ ಮಾಡುವ ಮುಕ್ತ ಮಾರುಕಟ್ಟೆಯಾಗಿವೆ.
ಗುರಿ ಗುರು ಇಲ್ಲದ ವಿಶ್ವ ವಿದ್ಯಾಲಯಗಳು ಇಂದು ವಾಣಿಜ್ಯ ಮಳಿಗೆ ಆಗಿವೆ.
ಸರಕಾರಿ ಶಾಲೆ ಸರಕಾರಿ ಆಸ್ಪತ್ರೆ
ಹೇಗೆ ಗಬ್ಬೆದ್ದು ನಾರುತ್ತಿವೆ ಅದರಂತೆ ಇಂದು ವಿಶ್ವ ವಿದ್ಯಾಲಯಗಳು ತಮ್ಮ ಗುಣಮಟ್ಟ ಕಳೆದುಕೊಂಡು
ಕಾಟಾಚಾರದ ರಂಗ ಮಂದಿರ ಆಗಿವೆ.
100 ಕಿಲೋಮೀಟರ ಅಂತರದಲ್ಲಿ ನಾವು ಕನಿಷ್ಠ 5 ವಿಶ್ವ ವಿದ್ಯಾಲಯಗಳನ್ನು ಕಾಣುತ್ತೆವೆ.
ಹೆಚ್ಚುವರಿ ವಿಶ್ವ ವಿದ್ಯಾಲಯಗಳ ಸ್ವಂತ ಕಟ್ಟಡಗಳಿಲ್ಲ
ಇದ್ದ ವಿಶ್ವ ವಿದ್ಯಾಲಯಗಳು ಪ್ರವೇಶ ಇರದೇ ತಮ್ಮ ಅಸ್ತಿತ್ವ
ಉಳಿಸಿ ಕೊಳ್ಳಲು ಒದ್ದಾಡುವಾಗ ಏಕೆ ಹೊಸ ಹೆಚ್ಚುವರಿ ವಿಶ್ವ ವಿದ್ಯಾಲಯಗಳು?
ಕುಲಪತಿ ಕುಲಸಚಿವ ನೇಮಕ
ಕೆಲವು ವರ್ಷಗಳಲ್ಲಿ ವಿಶ್ವ ವಿದ್ಯಾಲಯಗಳು ಲಂಚ ವಂಚನೆಯ ಕೇಂದ್ರ ಆಗಿ ಮಾರ್ಪಾಟು ಹೊಂದಿವೆ.
ರಾಜ್ಯದ ಬಹುತೇಕ ವಿಶ್ವ ವಿದ್ಯಾಲಯಗಳ ಕುಲಪತಿ ಕುಲಸಚಿವರು ಲಂಚದ ಆರೋಪ ಹೊತ್ತಿದ್ದಾರೆ.
ಒಬ್ಬ ಕುಲಪತಿಯನ್ನು ರಾತ್ರಿ ಪೋಲಿಸರು ಬಂಧಿಸಿದ್ದು ಈಗ ಇತಿಹಾಸ.
ವೈದ್ಯಕೀಯ ತಾಂತ್ರಿಕ ಕೃಷಿ ವಿಶ್ವ
ವಿದ್ಯಾಲಯಗಳ ಕುಲಪತಿ ಕುಲಸಚಿವರ ನೇಮಕಕ್ಕೆ ಮತ್ತೆ ಬೇರೆ ದರ ನಿಗದಿ.
ಮೊದಲಿನ ವಿಶ್ವವಿದ್ಯಾಲಯಗಳಲ್ಲಿ ಕುಲಪತಿ ನೇಮಕಕ್ಕೆ ಕೋಟಿ ರೂಪದಲ್ಲಿ ಹಣ ನೀಡ ಬೇಕು.
ಇನ್ನು ವೈದ್ಯಕೀಯ ತಾಂತ್ರಿಕ ಕೃಷಿ ವಿಶ್ವ
ವಿದ್ಯಾಲಯಗಳ ಕುಲಪತಿ ಕುಲಸಚಿವರ ನೇಮಕಕ್ಕೆಎಷ್ಟು ಕೋಟಿ ಎನ್ನುವುದು ಈಗ ಸುದ್ದಿ.
ಮುಖ್ಯ ಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರು ವಿಶ್ವವಿದ್ಯಾಲಯಗಳ ಬಗ್ಗೆ ಸಂಪೂರ್ಣ ಪರಾಮರ್ಶೆ ಮಾಡಬೇಕಾಗಿದೆ.
–ಡಾ ಶಶಿಕಾಂತ ರುದ್ರಪ್ಪ ಪಟ್ಟಣ ರಾಮದುರ್ಗ