ಮಕ್ಕಳ ಕಲಿಕಾ ಬಲವರ್ಧನೆಗೆ ನಾವು ಮನುಜರು ಎಂಬ ವಿನೂತನ ಕಾರ್ಯಕ್ರಮ ಸಹಕಾರಿ – ಶ್ರೀ ಮತಿ ವಿದ್ಯಾವತಿ
e-ಸುದ್ದಿ ಲಿಂಗಸುಗೂರು
ಲಿಂಗಸುಗೂರು ತಾಲ್ಲೂಕಿನ ಗೌಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರದಂದು ಶಾಲಾ ಮಕ್ಕಳ ಕಲಿಕಾ ಬಲವರ್ಧನೆಗಾಗಿ ನಾವು ಮನುಜರು ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸಲಾಯಿತು.
ಪಠ್ಯ ಮತ್ತು ಸಹ ಪಠ್ಯ ಆಧಾರಿತ ಚಟುವಟಿಕೆಗಳು ಮಕ್ಕಳ ಕಲಿಕೆಯ ನಡುವಿನ ಸಹ ಸಂಬಂದವನ್ನು ಪ್ರೊತ್ಸಾಹಿಸುವದು ಮತ್ತು ಮಕ್ಕಳು ಕ್ರಿಯಾಶೀಲ ವರ್ತನೆಗಳನ್ನು ಬೆಳೆಸಿಕೊಳ್ಳಲು ಧನಾತ್ಮಕ ಚಿಂತನೆ ತುಂಬುವದು ಮುಖ್ಯ ಉದ್ದೇಶವಾಗಿದೆ ಎಂದು ಮುಖ್ಯೋಪಾಧ್ಯಾಯರಾದ ಶ್ರೀ ಮತಿ ವಿದ್ಯಾವತಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಿಕ್ಷಕ ಆನಂದ ಅವರು ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಅದಕ್ಕೆ ಮಕ್ಕಳು ಸಾಮಾಜಿಕ ಸಾಮರಸ್ಯ ಮತ್ತು ಸಂವಿಧಾನಿಕ ಮೌಲ್ಯಗಳನ್ನು ಬೆಳೆಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಬೇಕು ಎಂದು ಹೇಳಿದರು.
ಶಿಕ್ಷಕರಾದ ಮಹಮ್ಮದ್ ಫರಿದ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.ಸಹ ಶಿಕ್ಷಕರಾದ ಅಮೀನಾ ಬೇಗಂ,ಎಂ ಫರಿದಾ,ಚೇತನಾ,ದೀಪಾ, ರಮೇಶ,ದುರ್ಗಾ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.