ವಾರದ ಸರಣಿ ೩ – ಮಹಾಭಾರತದ ಕಥೆ
“ಆರುಣಿ ಗುರುಭಕ್ತಿ”
ಹಿಂದೆ ಪಾಂಚಾಲ ದೇಶದಲ್ಲಿ ಧೌಮ್ಯ ಎಂಬ ಋಷಿಗಳು ವಾಸವಾಗಿದ್ದರು. ಅವರಿಗೆ ಆರುಣಿ ಎಂಬ ಶಿಷ್ಯನು ಇದ್ದನು. ದಿನ ನಿತ್ಯವೂ ಗುರುಗಳು ಶಿಷ್ಯರಿಗೆ ಕೆಲಸಗಳನ್ನು ಕೊಟ್ಟು ಅವರು ತಮ್ಮ ಕೆಲಸ ಮುಗಿಸಿದ ನಂತರ ಅವರಿಗೆ ಪಾಠಗಳನ್ನು ಹೇಳುತ್ತಿದ್ದರು. ಒಂದು ಚಳಿಗಾಲದ ದಿನದಲ್ಲಿ ಆಶ್ರಮದ ಅಡುಗೆ ಮತ್ತಿತ್ತರ ಕಾರ್ಯಕ್ಕೆ ಉರುವಲುಗಳನ್ನು ತರಲು ಕಾಡಿಗೆ ಹೋದರು. ಉರುವಲುಗಳನ್ನು ತರುವಾಗ ಗುರುಗಳ ಗದ್ದೆಯಲ್ಲಿ ಒಡ್ಡು ಒಡೆದು ನೀರು ಹರಿದು ಹೋಗುತ್ತಿತ್ತು. ಈ ಒಡ್ಡು ಒಡೆದ ಕಾರಣ ಗದ್ದೆಯ ನೀರೆಲ್ಲ ಹರಿದು ಹೊರ ಹೋಗಿ ಬೆಳೆ ಬೆಳೆಯಲು ನೀರಿನ ಸಮಸ್ಯೆ ಉಂಟಾಗುವುದು ಎಂದು ಅರಿತು. ಅದರ ಸಮಾಧಾನವನ್ನು ಯೋಚಿಸಿದನು.
ಆಶ್ರಮಕ್ಕೆ ಹೋಗಿ ಉರುವಲುಗಳನ್ನು ಅಲ್ಲಿಯೇ ಇಟ್ಟು, ಸಹಪಾಠಿಗೆ ಹೊಲದ ಒಡ್ದು ಒಡೆದು ನೀರು ಹರಿದು ಹೋಗುತ್ತಿರುವ ವಿಷಯ ತಿಳಿಸಿ ಹೊಲದ ಬಳಿ ಬಂದನು. ಉಪಾಯ ಫಲಿಸದೇ ಹೊಲದ ಒಡ್ಡಿಗೆ ಅಡ್ಡಲಾಗಿ ಮಲಗಿದನು. ಮಾರನೆಯ ದಿನ ಗುರುಗಳು ದಿನ ನಿತ್ಯದ ಕೆಲಸಗಳನ್ನು ಪೂರೈಸಿ ಪಾಠಕ್ಕೆ ಕುಳಿತಾಗ ಆರುಣಿ ಇರದೇ ಇರುವುದಕ್ಕೆ ಕಾರಣವನ್ನು ಕೇಳಿದರು. ವಿದ್ಯಾರ್ಥಿಯೊಬ್ಬ ಹಿಂದಿನ ದಿನ ಆರುಣಿ ಬಂದು ಒಡ್ಡಿನ ರಕ್ಷಣೆಗಾಗಿ ಹೊಲಕ್ಕೆ ಹೋದ ವಿಚಾರವನ್ನು ತಿಳಿಸಿದನು. ಗುರುಗಳು ಬಾಕಿ ಶಿಷ್ಯರೊಡನೆ ಹೊಲದ ಕಡೆಗೆ ಪಯಣಿಸಿದರು.
ರಾತ್ರಿಯ ಸಮಯದಲ್ಲಿ ಆರುಣಿ ಹೊಲಕ್ಕೆ ಹೋಗಿ ಒಡ್ಡನ್ನು ಕಟ್ಟುವ ಪ್ರಯತ್ನ ಮಾಡಿದನು ಮರದ ದಿಮ್ಮೆಗಳನ್ನು ಅಡ್ಡ ನಿಲ್ಲಿಸಲು ಪ್ರಯತ್ನಿಸಿದನು ಆದರೆ ನೀರಿನ ಹರಿವು ಬಹಳವಾದ್ದರಿಂದ ಯಾವುದೇ ಕಾರಣಕ್ಕೂ ನೀರಿನ ಹರಿವು ನಿಲ್ಲುವ ಲಕ್ಷಣ ಕಾಣದೇ ಹೋದಾಗ ಆರುಣಿ ಸ್ವತಃ ನೀರಿಗೆ ಅಡ್ಡಲಾಗಿ ಮಲಗಿದನು. ಅವನನ್ನು ಹುಡುಕುತ್ತಾ ಬಂದ ಶಿಷ್ಯರಿಗೆ ಅವನು ಕಾಣಿಸಲಿಲ್ಲ. ಗುರುಗಳು ಕೂಡ ಬಂದ ಮೇಲೆ ಗುರುಗಳನ್ನು ಕಂಡು ಅವರು ತನ್ನ ಹೆಸರನ್ನು ಕೂಗುತ್ತಿರುವುದನ್ನು ಗಮನಿಸಿದ ಗುರುಗಳೇ ನಾನು ಇಲ್ಲಿದ್ದೀನಿ ಎಂದು ಕ್ಷೀಣ ದನಿಯಲ್ಲಿ ಉತ್ತರಿಸಿದನು. ಶಿಷ್ಯನ ವಿಧೇಯತೆ ಮತ್ತು ಭಕ್ತಿಯನ್ನು ನೋಡಿ ಧೌಮ್ಯ ಋಷಿಗಳು ಅವನ ಗುರುಭಕ್ತಿಗೆ ಮೆಚ್ಚಿ ” ಮುಂದೆ ಪ್ರಪಂಚದಲ್ಲಿ ನಿನ್ನ ಅಪ್ರತಿಮ ಗುರುಭಕ್ತಿ ಪ್ರಸಿದ್ಧವಾಗಲಿ. ನಿನ್ನಂತಹ ಶಿಷ್ಯ ಬೆಳೆದು ನಿಂತ ಬೆಲೆಗಳಿಗಿಂತ ಅಮೂಲ್ಯವಾದವನು” ಎಂದು ಹೇಳಿ ಆಶೀರ್ವದಿಸಿದರು.
ಆರುಣಿಯ ಗುರುಭಕ್ತಿಯು ನಮ್ಮ ಗುರುಗಳ ಸಲುವಾಗಿ ನಮ್ಮ ಸರ್ವಸ್ವವೂ ಅರ್ಪಿತವಾಧರೂ ಗುರುಗಳ ಸೇವೆಯನ್ನು ಅವರ ಭಕ್ತಿಯನ್ನು ಬಿಡಬಾರದೆಂಬ ನೀತಿಯನ್ನು ಕಲಿಯುತ್ತೇವೆ. ಜೊತೆಗೆ ಗುರುವಿನ ಅನುಗೃಹಕ್ಕಿಂತ ದೊಡ್ಡ ಉಡುಗೊರೆ ಮತ್ತೊಂದು ಇಲ್ಲವೆಂದು ಕೂಡ ತಿಳಿಯುತ್ತೇವೆ.
–ಮಾಧುರಿ ದೇಶಪಾಂಡೆ, ಬೆಂಗಳೂರು