ವ್ಯಸನ ಮುಕ್ತ ದಿನಾಚರಣೆ-ಚಟಗಳಿಗೆ ಮುಕ್ತಿ ಕಾಣಿಸಿ

ವ್ಯಸನ ಮುಕ್ತ ದಿನಾಚರಣೆ-ಚಟಗಳಿಗೆ ಮುಕ್ತಿ ಕಾಣಿಸಿ

e – ಸುದ್ದಿ ಲಿಂಗಸುಗೂರು

ಚಟಗಳು‌ ಮಾನವ ಕುಲಕ್ಕೆ ನಾಶ‌ ಮಾಡುತ್ತವೆ.ಧೂಮಪಾನ, ಮದ್ಯಪಾನ, ಮೊಬೈಲ ಗೀಳು ಮಾನಸಿಕ ಅಸ್ತವ್ಯಸ್ತ ಮಾಡಿ ಬದಕನ್ನು ನಾಶ ಮಾಡುತ್ತವೆ. ಅದನ್ನು ಅರಿತಿದ್ದ ಡಾ. ಮಾಹಾಂತಪ್ಪನವರು ಚಟಗಳನ್ನು ಜೋಳಿಗೆಗೆ ಹಾಕಿ ಹೊಸ ಮನುಷ್ಯರಾಗಿ ಎಂಬ ಆಂದೋಲನ‌ ಆರಂಭ ಮಾಡಿದರು. ಸರ್ಕಾರ ಡಾ.ಮಹಾಂತಪ್ಪನವರ ಜನ್ಮ ದಿನವನ್ನು ವ್ಯಸನಮುಕ್ತ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಡಾ. ವಿಜಯ ಕುಮಾರ್ ಹೆಸರೂರ, ಗುರು ಬಸವ ಆಸ್ಪತ್ರೆ ಲಿಂಗಸುಗೂರು ಹೇಳಿದರು.

ಸರಕಾರಿ ಆಸ್ಪತ್ರೆ ಲಿಂಗಸೂರಿನ ಮುಖ್ಯ ಅಧಿಕಾರಿಗಳಾದ ಡಾಕ್ಟರ್ ರುದ್ರಗೌಡ ಪಾಟೀಲ್ ಮಾತನಾಡಿದರು.,ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಆಶಿರ್ವಚನ ನೀಡಿದರು. ದೊಡ್ಡಪ್ಪ ಸಾಹುಕಾರ್ ಅಂಬಣ್ಣ ಹುರಕಡ್ಲಿ,ಮಲ್ಲಣ್ಣ ನರಕಲದಿನ್ನಿ ,ಬೂಪನಗೌಡ ಪಾಟೀಲ್, ಗಿರಿಮಲ್ಲನಗೌಡ ಮಾಲಿಪಾಟೀಲ ,Kನಾಗಭೂಷಣ್ ,ಶಿವಪ್ಪ ಸಕ್ರಿ ಹಾಗೂ ಅಲ್ಲಮಪ್ರಭು ಕಾಲೇಜಿನ ವಿದ್ಯಾರ್ಥಿಗಳು, ಭಾಗವಹಿಸಿದ್ದರು ಜಂಗಮಮೂರ್ತಯ್ಯ ನಿರುಪಿಸಿದರು.

Don`t copy text!