ಪುರಾಣ ಉಪನಿಷತ್ತಿನ ಕಥೆಗಳು
ಸತ್ಯವಾದಿ ಹರಿಶ್ಚಂದ್ರ
ಸೂರ್ಯವಂಶದ ರಾಜರುಗಳು ಮಹಾನ್ ರಾಜರುಗಳು ಆಗಿ ಹೋಗಿದ್ದಾರೆ. ಇಕ್ಷವಾಕು ವಂಶದಲ್ಲಿ ತ್ರೇತಾಯುಗಕ್ಕಿಂತ ಮೊದಲು ಹರಿಶ್ಚಂದ್ರನೆಂಬ ರಾಜನು ಆಳುತ್ತಿದ್ದನು. ಅವನು ಸದಾ ಸತ್ಯವಾದಿಯಾಗಿದ್ದು ಎಂತದ್ದೇ ಸಂದರ್ಭ ಬರಲಿ ಸುಳ್ಳನ್ನು ಹೇಳುತ್ತಿರಲಿಲ್ಲ. ವಸಿಷ್ಠ ಮಹರ್ಷಿಗಳಾಗಿದ್ದರು. ವಿಶ್ವಾಮಿತ್ರರು ಒಮ್ಮೆ ದೇವಲೋಕಕ್ಕೆ ಹೋದಾಗ ಸತ್ಯವಂತರ ಬಗೆಗೆ ಚರ್ಚೆ ನಡೆದಿತ್ತು. ಇಂದ್ರ ಸಭೆಯಲ್ಲಿ ಸತ್ಯವಾದಿ ಹರಿಶ್ಚಂದ್ರನನ್ನು ಹೊಗಳಿದರರು. ಆ ವಿಚಾರ ವಿಶ್ವಾಮಿತ್ರರಿಗೆ ಸರಿಕಾಣಲಿಲ್ಲ ಆದ್ದರಿಂದ ಹರಿಶ್ಚಂದ್ರನ ಸತ್ಯವಾದಿತನದ ಪರೀಕ್ಷೆಗೆ ನಡೆದೇ ಬಿಟ್ಟರ. ಮೊದಲಿಗೇ ವಸಿಷ್ಠರ ಮೇಲೆನ ಅಸಮಾಧಾನ ಶಿಷ್ಯನನ್ನು ಪರೀಕ್ಷೆ ಮಾಡಲು ಪ್ರೇರೇಪಿಸತು.
ಹರಿಶ್ಚಂದ್ರ ಮಹಾರಾಜನ ಬಳಿ ಹೋಗಿ ಸಂಪೂರ್ಣ ರಾಜ್ಯವನ್ನು ದಾನವನ್ನಾಗಿ ಕೊಡಲು ಕೇಳಿದರು ವಿಶ್ವಾಮಿತ್ರರು ಜೊತೆಗೆ ರಾಜ್ಯವನ್ನು ದಾನ ಮಾಡಿದ ಮೇಲೆ ರಾಜ್ಯದ ಸೀಮೆಯಲ್ಲಿ ಇರಬಾರದು ಎಂಬ ಶರತ್ತನ್ನು ಕೂಡ ವಿಧಿಸಿದರು. ಅವರ ಮಾತಿಗೆ ಮರು ಮಾತನಾಡದೇ ರಾಜ ರಾಜ್ಯವನ್ನು ದಾನ ಮಾಡಿಬಿಟ್ಟ. ಆಗ ವಿಶ್ವಾಮಿತ್ರರು ದಾನವನ್ನು ಮಾಡಿದೆ ದಕ್ಷಿಣೆ ಎಲ್ಲಿ ಎಂಧು ಕೇಳಿದರು. ಜೊತೆಗೆ ಈಗ ರಾಜ್ಯವನ್ನು ದಾನ ಮಾಡಿರುವದರಿಂದ ರಾಜ್ಯದ ಸಂಪತ್ತಿನಲ್ಲಿ ಬಿಡಿಗಾಸು ಕೂಡ ನಿನ್ನದಲ್ಲ ಸ್ವಂತ ದುಡಿಮೆಯಿಂದ ಒಂದು ಸಾವಿರ ಚಿನ್ನದ ಮೊಹರುಗಳನ್ನು ಒಂದು ತಿಂಗಳಿನ ಸಮಯದಲ್ಲಿ ಕೊಡಬೇಕು ಎಂದು ಜೊತೆಗೆ ತಮ್ಮ ಶಿಷ್ಯ ನಕ್ಷತ್ರಿಕನನ್ನು ಕಳುಹಿಸಿದರು. ಕಾಶಿನಗರಕ್ಕೆ ಬಂದ ರಾಜಾಹರಿಶ್ಚಂದ್ರನು ಹೆಂಡತಿಯನ್ನು ಅಲ್ಲಿಯ ಧನಿಕನ ಮನೆಗೆ ಸೇವಕಿಯನ್ನಾಗಿ ವ್ಯಾಪಾರ ಮಾಡಿದನು. ಜೊತೆಗೆ ತನ್ನನ್ನು ತಾನು ಸ್ಮಶಾನ ಕಾಯುವವನ ಸೇವಕನ್ನಾಗಿ ಮಾರಾಟ ಮಾಡಿಕೊಂಡು ದಕ್ಷಿಣೆಯನ್ನು ಕೊಟ್ಟನು.
ವಿಶ್ವಾಮಿತ್ರನಿಗೆ ಇಷ್ಟಾದರೂ ಅವನು ಸತ್ಯವಾದಿ ಎಂಬ ನಂಬಿಕೆಯು ಬರಲಿಲ್ಲ. ಧನಿಕನ ಮನೆಯಲ್ಲಿ ರಾಣಿ ಮತ್ತು ರಾಜಕುಮಾರರು ಆಳಾಗಿ ದುಡಿದು ಜೀವನವನ್ನು ಕಷ್ಟದಿಂದ ನಿರ್ವಹಿಸುತ್ತಿದ್ದರು. ರಾಜಾ ಹರೀಶ್ಚಂದ್ರನು ಸ್ಮಶಾನ ಕಾಯುತ್ತ ಅಲ್ಲಿ ತಮ್ಮ ಬಂಧುಗಳ ಅಂತ್ಯ ಕಾರ್ಯಕ್ಕೆ ಬರುವವರ ಬಳಿ ಶುಲ್ಕ ವಸೂಲಿ ಮಾಡಿ ಕೊಂಡು ಇರುತ್ತಿದ್ದನು. ಹರೀಶ್ಚಂದ್ರ ಮಹಾರಾಜನ ಪತ್ನಿಯಾಗಿದ್ದು ಸಕಲ ವೈಭವಗಳ ಜೊತೆಗೆ ಇರುತ್ತಿದ್ದ ರಾಣಿಯು ಧನಿಕನ ಮನೆಯಲ್ಲಿ ಕಷ್ಟದ ಜೀವನ ನಡೆಸುತ್ತಿದ್ದಳು. ಒಂದು ಬಾರೀ ಧನಿಕನ ಮನೆಯಲ್ಲಿ ಶ್ರಾದ್ಧಕ್ಕೆ ಸಮಿತ್ತು ತರಲು ಕಾಡಿಗೆ ಹೋದಾಗ ಅವಳ ಮಗ ಹಾವಿನ ಮೇಲೆ ಕಾಲಿಟ್ಟ ಕಾರಣ ಹಾವು ಕಚ್ಚಿ ಮೃತನಾಗುತ್ತಾನೆ. ಕೆಲಸ ಮಾಡುತ್ತಿದ್ದ ಯಜಮಾನನಿಗೆ ದಹನ ಸಂಸ್ಕಾರ ಮಾಡಲು ಹೋಗಲು ಅನುಮತಿ ಕೇಳಿದಾಗ ಅವನು ಬೇಗ ಹೋಗಿ ಬರಬೇಕು ಎಂದು ಹೇಳುತ್ತಾನೆ. ಸ್ಮಶಾನದ ಶುಲ್ಕವನ್ನು ಕೊಡದೇ ದಹನ ಸಂಸ್ಕಾರ ಮಾಡಲು ಬಿಡುವುದಿಲ್ಲ ಅಂದು ಹರಿಶ್ಚಂದ್ರ ಮಹಾರಾಜ ಹೇಳಿದಾಗ ಶುಲ್ಕ ಕೊಡಲು ಹಣವಿಲ್ಲ ತನ್ನನ್ನು ಕೊಂಡು ಕೊಂಡ ಧನಿಕ ಹಣ ಕೊಡುವುದಿಲ್ಲ ಎಂದು ಹೇಳುತ್ತಾಳೆ.
ಆಗ ಹರಿಶ್ಚಂದ್ರ ನು ಸುಳ್ಳು ಹೇಳಬೇಡ ನಿನ್ನ ಮಾಂಗಲ್ಯವನ್ನು ಮಾರಿಯಾದರೂ ಶುಲ್ಕವನ್ನು ನೀಡಬೇಕು ಎಂದು ಹೇಳುತ್ತಾನೆ. ಅವಳ ಮಾಂಗಲ್ಯ ಪತಿಗಲ್ಲದೆ ಬೇರೆಯವರಿಗೆ ಕಾಣುತ್ತಿರಲಿಲ್ಲ. ತಮ್ಮ ಮಗನ ಮರಣದ ಸುದ್ದಿಯನ್ನು ಹರಿಶ್ಚಂದ್ರನಿಗೆ ಪತ್ನಿ ಹೇಳಿದಾಗ ನಾನು ಕೂಡ ದಾಸ ಶುಲ್ಕ ಬಿಡಲು ಆಗದು ಎಂದಾಗ ವಿಶ್ವಾಮಿತ್ರರ ಮನಸ್ಸು ಕರಗಿ ರಾಜನಿಗೆ ಮಗನ ಜೀವವನ್ನು ಪುನಃ ಜೀವಂತವಾಗಿಸಿ ಕೊಟ್ಟು ರಾಜ್ಯವನ್ನು ಹಿಂದಿರುಗಿಸಿ ಕೊಟ್ಟು ಆಶೀರ್ವಾದ ಮಾಡುತ್ತಾರೆ
ಈ ಕಥೆಯ ನೀತಿ : ಸದಾ ಕಾಲ ಸತ್ಯವಂತರಾಗಿ ಇರಬೇಕು. ನಮ್ಮ ಬದ್ಧತೆ ಹಾಗೂ ನಿಷ್ಠೆ ನಮಗೆ ಉತ್ತಮ ಹೆಸರನ್ನು ಕೊಡಿತ್ತದೆ. ಜೀವನದಲ್ಲಿ ಕಷ್ಟಗಳು ಬಂದಾಗ ಪಥ ಭ್ರಷ್ಟ ರಾಗಬಾರದು
-ಮಾಧುರಿ ದೇಶಪಾಂಡೆ, ಬೆಂಗಳೂರು