ಗಝಲ್

 

 

 

 

 

 

 

 

 

 

 

ಗಝಲ್

ಪರಸ್ಪರ ಆಲಿಂಗನ ಮರೆತು ನೋಡುತಿಹ ಗೆಳತಿ.
ಸರಸದಲಿ ಅದೇಕೋ ಕೋಪ ಮಾಡುತಿಹ ಗೆಳತಿ

ಒಲವ ಬಳ್ಳಿಯ ಆಸರೆಯ ಹೂವುಗಳು ನಾವಲ್ಲವೇ
ಕಲಹದಲಿ ಅಮೂಲ್ಯ ಸಮಯ ದೂಡುತಿಹ ಗೆಳತಿ.

ಸಾಗರದ ಮೇಲೆ  ಬೆಳಕಿನಾಟ ಅದೆಷ್ಟು ಪರವಶವು.
ಮಾಗಿದ ಮನಸಿನಿಂದ ಮಾಧುರ್ಯ ಬೇಡುತಿಹ ಗೆಳತಿ

ಸಂಜೆಯ ಬೆಳದಿಂಗಳ ಸವಿ ನೋಟ ಮರೆಯಲಾರೆ
ನಂಜಿನ ಕಂಗಳಲಿ ಮೋಹಕತೆ ನೀಡುತಿಹ ಗೆಳತಿ.

ಚಂದ್ರನ ಎದುರಲಿ ಪ್ರಮಾಣಿಸಿ  ಸಪ್ತಪದಿ ತುಳಿಯೋಣ
ಚಂದದಿ ಜಯಳು ಶುಭಮಸ್ತು, ಹಾಡುತಿಹ ಗೆಳತಿ.

 

 

 

 

 

 

 

 

 

ಜಯಶ್ರೀ.ಭ.ಭಂಡಾರಿ.
ಬಾದಾಮಿ.

Don`t copy text!