“ವಿಭಿನ್ನ ರೀತಿಯಲ್ಲಿ ಅಲೋಭ ಸಂಸ್ಥೆಯ ಉದ್ಘಾಟನೆ”
e-ಸುದ್ದಿ ಬೆಂಗಳೂರು
ವಿದೂಷಿ ನಯನ ವಿ ಪಟೇಲ್ ಅವರು ತಮ್ಮದೇ ಆದ ‘ಅಲೋಭ’ ಸಂಸ್ಥೆ ಉದ್ಘಾಟನಾ ಸಮಾರಂಭವನ್ನು ಬೆಂಗಳೂರಿನ ಕಪ್ಪಣ್ಣ ಅಂಗಳ ಸಭಾಂಗಣದಲ್ಲಿ ಏರ್ಪಡಿಸಿದ್ದರು. ಅಲೋಭ ಸಂಸ್ಥೆಯ ಉದ್ದೇಶ, ಎಲ್ಲಾ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಾಗೂ ಎಲ್ಲಾ ಕಲಾಸಕ್ತರಿಗೆ ವಿನೂತನ ಪ್ರದರ್ಶನಗಳನ್ನು ವೀಕ್ಷಿಸಲು ಒಂದು ಅದ್ಭುತ ವೇದಿಕೆಯನ್ನು ಕಲ್ಪಿಸುವುದು.
ನಯನ ವಿ ಪಟೇಲ್ ಹಾಗೂ ಸ್ವರೂಪ್ ಕೆಂಪಯ್ಯಮಠರವರ ಸುಪುತ್ರ ಸುಯಾನ್ಶ್ ಕೆಂಪಯ್ಯಮಠನ 4ನೇ ವರ್ಷದ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಬಡಮಕ್ಕಳಿಗಾಗಿ ಉಚಿತ ವಿದ್ಯಾಭ್ಯಾಸ ಹಾಗೂ ವಸತಿ ಶಾಲೆಯನ್ನು ನಡೆಸುತ್ತಿರುವ ‘ವಂದೇ ಮಾತರಂ ಗುರುಕುಲಂ’ ಸಂಸ್ಥೆಗೆ ಚಾರಿಟಿ ಶೋ ಅಂದರೆ ದತ್ತಿ ಪ್ರದರ್ಶನ ಒಂದನ್ನು ಆಯೋಜಿಸಿ, ಇವರ ಮೊದಲ ಪ್ರದರ್ಶನವನ್ನು ವಿಭಿನ್ನ ರೀತಿಯಲ್ಲಿ ಆರಂಭಿಸಲಾಯಿತು.
ಅಲೋಭ ಸಂಸ್ಥೆಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭರತನಾಟ್ಯ ಕಲಾವಿದರು ಗುರು ಮಿಥುನ್ ಶ್ಯಾಮ್ ರವರು ಆಗಮಿಸಿದ್ದರು. ಇವರ ಜೊತೆ ನಿವೃತ್ತ ಪ್ರೊಫೆಸರ್ ಡಾ||ಹೆಚ್. ಕೆ. ಸುಪ್ರಭ ಹಾಗೂ ನಿವೃತ್ತ ಶಿಕ್ಷಕರು ಕೆ.ಬಸವರಾಜ ರಾಯಚೂರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಸುವಿನ್ ಪ್ರಸಾದ್ ರವರ ಸುಂದರ, ಅಚ್ಚುಕಟ್ಟಾದ ನೃತ್ಯ ಪ್ರದರ್ಶನದೊಂದಿಗೆ ಆರಂಭವಾಗಿ, ‘ವಂದೇ ಮಾತರಂ ಗುರುಕುಲಂ’ ಸಂಸ್ಥೆಯ ತಂಡದಿಂದ ಭಗತ್ ಸಿಂಗ್ ರವರ ಕುರಿತಾಗಿ ದೇಶಭಕ್ತಿ ನಾಟಕ ಪ್ರದರ್ಶನದೊಂದಿಗೆ ಮುಕ್ತಾಯವಾಯಿತು. ಇನ್ನು ಮುಖ್ಯ ಅತಿಥಿ ಮಿಥುನ್ ಶ್ಯಾಮ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ‘ಅಲೋಭ’ ಸಂಸ್ಥೆ ಉದ್ದೇಶ ಹಾಗೂ ನವೀನ ಆಲೋಚನೆಯನ್ನ ಪ್ರಶಂಶಿಸಿ ಸಂಸ್ಥೆಯು ಇನ್ನೂ ಹೆಚ್ಚು ಮಹತ್ತರ ಕಾರ್ಯಕ್ರಮಗಳನ್ನು ಉನ್ನತ ಮಟ್ಟದಲ್ಲಿ ಕೈಗೊಳ್ಳಲೆಂದು ಮನಪೂರಕ ಹಾರೈಸಿದರು.
ಅಲೋಭ ಸಂಸ್ಥೆಯು ಪ್ರತಿ ತಿಂಗಳು ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿವುದು,
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ –
9880683071/9845845815