ಜನಾಂಗದ ಜನಕ 

ಜನಾಂಗದ ಜನಕ 

 

 

 

 

 

 

 

 

 

 

ನಮಿಸು ಶಿಷ್ಯನೇ ನಮಿಸು
ಕಲಿಸಿದಾ ಗುರುವಿಗೆ ನಮಿಸು
ಮಣ್ಣಿನ ಮುದ್ದೆಗೆ ಸ್ವರೂಪ
ನೀಡಿದ ಗುರುವಿಗೆ ನಮಿಸು

ಬಳಪ ಹಿಡಿಯಲು ಕಲಿಸಿದ
ಪಾಟಿ ಮೇಲೆ ಅಕ್ಷರ ತಿದ್ದುತಾ
ಬೆರಳು ಹಿಡಿದು ಬರೆಯಿಸಿದ
ಆಚಾರ್ಯರಿಗೆ ನಮಿಸು ಶಿಷ್ಯನೇ

ಜನಾಂಗದ ಜನಕ ಗುರುವಿಗೆ
ತಲೆಬಾಗಿ ಸದಾ ಗೌರವಿಸು
ಕೋಪ ಮಾಡದೆ ಪ್ರೀತಿ ತೋರಿದ
ಚೈತನ್ಯದ ಚಿಲುಮೆಗೆ ನಮಿಸು

ಸೋಲು ಗೆಲುವುಗಳ ಸಹಿಸಲು
ನೋವು ದುಃಖ ಮರೆತು ಬಾಳಲು
ಮೋಸ ವಂಚನೆಯಿಂದ ದೂರವಿರಲು
ಕಲಿಸಿದ ದೇವನಿಗೆ ನಮಿಸು ಶಿಷ್ಯನೇ

ಜಾತಿ ಭೇದಗಳ ಸಂಕೋಲೆ ಸರಿಸಿ
ನೀತಿ ನಿಯಮಗಳ ಅಂಕುಶ ಪಾಲಿಸಿ
ಅಜ್ಞಾನಿಯನ್ನು ಸುಜ್ಞಾನಿಯನ್ನಾಗಿಸಿದ
ರಾಷ್ಟ್ರದ ಪ್ರಗತಿಯ ರೂವಾರಿಗೆ ನಮಿಸು

-ಜಯಶ್ರೀ ಭಂಡಾರಿ.
ಬಾದಾಮಿ.

Don`t copy text!