ನಮ್ಮ ಮನದ ಮನೆಯ ದೇವರು
ನಿಮ್ಮನ್ನು ನಾನು ಕಂಡೆ,
ನಿಮ್ಮನ್ನು ನಾನು ಅರಿತುಕೊಂಡೆ,
ನೀವು ನನ್ನ ಪರಮಾತ್ಮ ಎಂದು ಕಂಡುಕೊಂಡೆ.
ನೀವು ಇಲ್ಲದೆ ನಾವಿಲ್ಲ.
ನೀವಿಲ್ಲದೆ ಸರ್ವಸ್ವವಿಲ್ಲ.
ನೀವಿಲ್ಲದೆ ನನ್ನ ಆತ್ಮವೂ ಇಲ್ಲ.
ನಮ್ಮ ಆತ್ಮದ ಶಕ್ತಿ ನೀವು.
ನಮ್ಮ ವಿಶ್ವಾಸದ ಭಂಡಾರ ನೀವು.
ನಮ್ಮೆಲ್ಲರ ಮನದ ಮನೆ ನೀವು.
ನಮ್ಮ ಪ್ರೀಯ ಕುತೂಹಲ ನೀವು.
ಆನಂದಮಯ ರೂಪ ನಿಮ್ಮದು.
ಮನೆ ಅಂಗಳದ ರಂಗೋಲಿ ನೀವು.
ನಮ್ಮ ತಂದೆ ತಾಯಿ ಬಂಧು ಬಳಗ ನೀವು.
ಜಗದಗಲ ಮುಗಿಲಗಲ ಪ್ರೀತಿ ನಿಮ್ಮದು.
ನಮ್ಮೆಲ್ಲರ ಭಕ್ತಿ ನಿಮಗೆ ಅರ್ಪಣೆ ಇಂದು.
ಜಗದುದ್ಧಾರವೇ ನಿಮ್ಮ ಸೇವೆ.
ಈ ಜಗತ್ತಿನ ನಿರ್ಧಾರಕರು ನೀವೇ.
ಈ ಕತ್ತಲಿನ ಜಗಕ್ಕೆ ಬೆಳಕು ನೀವೇ.
ಚಿರಋಣಿ ನಿಮ್ಮ ಪ್ರೀತಿಗೆ.
ಸದಾ ಪ್ರಯತ್ನ ಮಾಡುವೆವು
ನಾವೆಲ್ಲರೂ ನಿಮಗೆ ಹೆಮ್ಮೆಪಡಿಸಲು.
ಈ ಜೀವನ ಕೊಡುಗೆಯಾಗಿ
ಕೊಟ್ಟಿದ್ದಕ್ಕೆ ಧನ್ಯವಾದಗಳು.
ಈ ಜೀವನ ಸಾರ್ಥಕ ಮಾಡುವೆವು
ನಾವೆಲ್ಲರೂ ನಿಮ್ಮ ಇಚ್ಛೆ ಅಂತೆ.
– ಕುಮಾರಿ ಸೃಷ್ಟಿ ಅಶೋಕ ಎಲಿಗಾರ