ಮಸ್ಕಿಯಲ್ಲಿ ವಾಲ್ಮೀಕಿ ಮಹರ್ಷಿ ಜಯಂತಿ

ಮಸ್ಕಿಯಲ್ಲಿ ವಾಲ್ಮೀಕಿ ಮಹರ್ಷಿ ಜಯಂತಿ

 

e- ಸುದ್ದಿ ಮಸ್ಕಿ

ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಗುರುವಾರ ಆಚರಿಸಲಾಗಿದೆ.
ಬಳಗಾನೂರು ರಸ್ತೆಯ ವೃತ್ತದಲ್ಲಿರುವ ವಾಲ್ಮೀಕಿ ಮಹರ್ಷಿ ಮೂರ್ತಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ತಹಸಿಲ್ದಾರ ಡಾ.ಮಲ್ಲಪ್ಪ ಕೆ ಯರಗೋಳ, ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ತಾ.ಪಂ. ಇಒ, ಅಮರೇಶ ಪ್ರಮುಖರಾದ ಬಸನಗೌಡ ಪೊಲೀಸ್ ಪಾಟೀಲ, ಅಂದಾನಪ್ಪ ಗುಂಡಳ್ಳಿ, ಎಂ ಅಮರೇಶ, ಶ್ರೀಶೈಲಪ್ಪ ಸಜ್ಜನ, ಬಸಪ್ಪ ಬ್ಯಾಳಿ, ಮಲ್ಲಯ್ಯ ಬಳ್ಳಾ ಹಾಗೂ ಇತರರು ಇದ್ದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ವಾಲ್ಮೀಕಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ಬಿಜೆಪಿಯ ಮುಖಂಡರುಗಳಾದ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಡಾ.ಬಿ.ಎಚ್.ದಿವಟರ್, ಶಿವಶಂಕ್ರಪ್ಪ ಹಳ್ಳಿ, ರವಿಗೌಡ ಪಾಟೀಲ, ಜಿ.ವೆಂಕಟೇಶ ನಾಯಕ, ಪ್ರಸನ್ನ ಪಾಟೀಲ, ಶರಣಯ್ಯ ಸೊಪ್ಪಿಮಠ, ಮೌನೇಶ ನಾಯಕ, ಉಮಾಕಾಂತಪ್ಪ ಸಂಗನಾಳ, ವೆಂಕಟರಡ್ಡಿ, ಸುಗಣ್ಣ ಬಾಳೆಕಾಯಿ , ಚಂದ್ರಕಲಾ ದೇಶಮುಖ  ಹಾಗೂ ಇತರರು ಇದ್ದರು.
ವಿವಿಧಡೆ ಆಚರಣೆ-  ತಹಸೀಲ್ದದಾರ ಕಛೇರಿಯಲ್ಲಿ ತಹಸೀಲ್ದಾರ ಡಾ.ಮಲ್ಲಪ್ಪ ಕೆ ಯರಗೋಳ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ವಿವಿಧ ಸರ್ಕಾರಿ ಕಚೇರಿಗಳಲ್ಲಿ ಆಯಾ ಇಲಾಖೆಯ ಮುಖ್ಯಸ್ಥರು ಪ್ರಜೆ ಸಲ್ಲಿಸಿದರು.

Don`t copy text!