ಸವಿತಾ ಮಾಟೂರ ಅಕ್ಕನ ಬಳಗದ ನೂತನ ಅಧ್ಯಕ್ಷರಾಗಿ ಆಯ್ಕೆ

ಶರಣೆ ಸವಿತಾ ಮಾಟೂರ ಅಕ್ಕನ ಬಳಗದ ನೂತನ ಅಧ್ಯಕ್ಷರಾಗಿ ಆಯ್ಕೆ

e-ಸುದ್ದಿ ಇಳಕಲ್ಲ

ಅಕ್ಕನ ಬಳಗ ಇಳಕಲ್ಲ ಸಂಘಟನೆ ಬಸವ ತತ್ವ, ಶರಣ ಸಿದ್ಧಾಂತ ಮತ್ತು ವಚನ ಸಾಹಿತ್ಯವನ್ನು ಬೆಳೆಸುವಲ್ಲಿ ಅತ್ಯಂತ ಕ್ರಿಯಾಶೀಲ ಸಂಘಟನೆಯಾಗಿದೆ. ಪರಮ ಪೂಜ್ಯ ಶ್ರೀ ಗುರು ಮಹಂತ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದೆ.

 

“ವಚನ ಮಂದಾರ” ದ ಸದಸ್ಯರಾದ ಶರಣೆ ಸವಿತಾ ಮಾಟೂರ ಅಕ್ಕನ ಬಳಗದ ನೂತನ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದಾರೆ. ಶರಣೆ ಪ್ರತಿಭಾ ಅಲೇಗಾವಿ ಕಾರ್ಯದರ್ಶಿಯಾಗಿ ಶರಣೆ ಶಾಂತಾ ಸಜ್ಜನ ಖಜಾಂಚಿಯಾಗಿ ಆಯ್ಕೆಗೊಂಡಿದ್ದಾರೆ.

ಇಳಕಲ್ಲಿನ ಅಕ್ಕನ ಬಳಗಕ್ಕೆ ಐತಿಹಾಸಿಕ ಮಹತ್ವ ಇದೆ. ಇತ್ತೀಚಿನ ದಿನಗಳಲ್ಲಿ ಸಂಘ ಕಟ್ಟುವುದು ಮುನ್ನಡೆಸಿಕೊಂಡು ಹೋಗುವುದು. ಕಷ್ಟದ ಕೆಲಸ ಅಂತದರದಲ್ಲಿ ಇಳಕಲ್ಲಿನ ಅಕ್ಕನ ಬಳಗಕ್ಕೆ 60 ವರ್ಷದ ಇತಿಹಾಸವಿದೆ. 60ವರ್ಷಗಳಿಂದ ಇಲ್ಲಿಯವರೆಗೆ ಅಕ್ಕನ ಬಳಗ ಕ್ರೀಯಾಶಿಲವಾಗಿರುವುದು ನಿಜಕ್ಕೂ ಹೆಮ್ಮೆ ಪಡಬೇಕು. ಬಳಗವನ್ನು ಇದುವರೆಗೆ‌ ಮುನ್ನಡಿಸಿದ ಎಲ್ಲಾ‌ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಅಭಿನಂದನೆಗೆ ಪಾತ್ರರಾಗಿದ್ದಾರೆ.

ಈಗ ನೂತನವಾಗಿ ಪದಾಧಿಕಾರಿಗಳಾಗಿರುವ ಎಲ್ಲರಿಗೂ ಶ್ರೀವಿಜಯಮಹಾಂತೇಶನ‌ ಕೃಪೆಯಿಂದ ನಿರಂತರ ಚಟುವಟಿಕೆ ನಡೆಯಲ್ಲಿ ಎಂದು ಪ್ರಾರ್ಥಿಸುತ್ತ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು

Don`t copy text!