ಕ್ಷಮಿಸಿಬಿಡು ಬಸವಣ್ಣ

 

 

 

 

 

 

 

 

 

 

ಕ್ಷಮಿಸಿಬಿಡು ಬಸವಣ್ಣ
ಕಾಯಕದಲ್ಲಿ ಕೈಲಾಸ ಕಂಡವರು ನೀವು,
ಕಾಯಕವಿಲ್ಲದೇ ಕೈಲಾಸದ ಕನಸು ಕಂಡವರು ನಾವು.

ಕ್ಷಮಿಸಿಬಿಡು ಬಸವಣ್ಣ
ಕಳಬೇಡ ಕೊಲಬೇಡ ಎಂದಿರಿ ನೀವು,
ಕಳ್ಳತನ, ಕೊಲೆ, ಸುಲಿಗೆಗಳೇ ಸಪ್ತ ಸೂತ್ರಗಳೆಂದೆವು ನಾವು.

ಕ್ಷಮಿಸಿಬಿಡು ಬಸವಣ್ಣ
ದಯವೇ ಧರ್ಮದ ಮೂಲವೆಂದಿರಿ ನೀವು,
ಕರುಣೆ ಇಲ್ಲದೆ ಕಂಡವರ ಕತ್ತು ಕೊಯ್ಯುತ್ತಿದ್ದೇವೆ ನಾವು,

ಕ್ಷಮಿಸಿಬಿಡು ಬಸವಣ್ಣ
ಮಡಕೆಯ ಮಾಡುವೊಡೆ ಮಣ್ಣೇ ಮೊದಲು ಎಂದಿರಿ ನೀವು,
ಹೆಣ್ಣು, ಹೊನ್ನಿನ ಬೆನ್ನು ಹತ್ತಿ ಮಣ್ಣಾದೇವು ನಾವು,

ಕ್ಷಮಿಸು ಬಿಡು ಬಸವಣ್ಣ
ನೀರು ಕಂಡಲ್ಲಿ ಮುಳುಗುವರು
ಎಂದಿರಿ ನೀವು,
ಮೌಢ್ಯದಲ್ಲಿ ಮುಳುಗಿ
ಹಾಳಾದೇವು ನಾವು.

ಕ್ಷಮಿಸಿಬಿಡು ಬಸವಣ್ಣ
ಇವನಾರವ, ಇವನಾರವ,
ಎಂದಿರಿ ನೀವು,
ದ್ವೇಷದ ಕಿಚ್ಚಿಗೆ ಕಿಡಿ
ಇಟ್ಟೆವು ನಾವು,

ಹಾಗಾಗಿ ಕ್ಷಮಿಸು ಬಿಡು ಬಸವಣ್ಣ ನುಡಿದಂತೆ ನಡೀಲಿಲ್ಲ ನಾವು.

 

 

 

 

 

 

 

 

 

– ಸ್ವರೂಪರಾಣಿ

Don`t copy text!