ಭ್ರೂಣ ಬರೆದ ಕವಿತೆ 

ಭ್ರೂಣ ಬರೆದ ಕವಿತೆ 

ನಾನು ಕಣ್ಣು
ತೆರೆಯದ
ಮಾಂಸ ಮುದ್ದೆ
ತಾಯಿ ಎನ್ನುವ
ಗರ್ಭದಲಿ
ನಾನು ಮೂಡಿದಾಗ
ಎಲ್ಲರಿಗೂ ಸಂಭ್ರಮ
ನನ್ನ ಹೊತ್ತವಳಿಗೆ
ಸಿಂಗಾರ ಆರತಿ
ಮಾಲೆ ದಂಡೇ
ಮನೆಯಲ್ಲಿ
ಹಿರಿ ಹಿರಿ ಹಿಗ್ಗಿದರು
ಹಿರಿಯರು ಕಿರಿಯರು
ನನ್ನ ಸೃಷ್ಟಿಗೆ
ಕಾರಣರಾದ
ಗಂಡ ಹೆಂಡತಿಯರ
ಆತುರ ವೈದ್ಯರ
ಭೇಟಿ ಸಲಹೆ
ಅಂದು ತಾಯಿಯ
ಗರ್ಭದ ತಪಾಸಣೆ
ಲಿಂಗ ನಿರ್ಧಾರದ
ಯತ್ನ …
ನನಗೆ ಗೊತ್ತೇ ಇಲ್ಲ
ನಾನು ಹೆಣ್ಣೆಂದು
ನನಗೂ ಕನಸು ಇದ್ದವು
ಹೊರಗೆ ಬಂದು
ಎಲ್ಲರೊಡನೆ ಬೆರೆಯುವ
ನಲಿಯುವ ಕ್ಷಣಗಳ
ಕಾಯುತ್ತಿದ್ದೆ
ಆದರೆ
ಗಂಡ ಹೆಂಡತಿಯರ
ಕಠೋರ ನಿರ್ಣಯ
ನನ್ನ ತೆಗೆದು
ತೊಟ್ಟಿಗೆ ಬಿಸಾಕುವ
ಪ್ರಯತ್ನ
ಅಂದು
ಸಂಜೆ ವೈದ್ಯರ
ಕತ್ತರಿ ಚಾಕು
ಅವ್ವನ ಹೊಟ್ಟೆ
ಸೀಳಿದರು .
ಮೌನವಾಗಿ
ಮಲಗಿದ್ದ ನನ್ನನು
ಕರುಳ ಕಿತ್ತು
ಹೊರ ತೆಗೆದರು
ಚೀರಿದೆ ಕೂಗಿದೆ
ಬೇಡಿಕೊಂಡೆ
ಕೊಲ್ಲಬೇಡೆಂದು .
ನನ್ನ ಧ್ವನಿ ಅಳವು
ಅವರು ಕೇಳಲಿಲ್ಲ .
ಕೊಂದೆ ಬಿಟ್ಟರು .
ಅವ್ವನಿಗೆ ನಿಟ್ಟುಸಿರು
ಅವಳು ಒಬ್ಬ ಹೆಣ್ಣು
ಬೇಡವಾದೆ
ನಾನು ಹೆಣ್ಣು
ಭ್ರೂಣ ಬರೆದ ಕವಿತೆ .

 

 

 

 

 

 

 

 

-ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!