ಕುಟುಂಬಕ್ಕೆ ಮಿಸಲಾದ ಹೆಣ್ಣು ಸಾಮಾಜಿಕವಾಗಿ ಬದಲಾಗಬೇಕು – ಡಾ.ಎಚ್.ಎಸ್.ಅನುಪಮಾ
e- ಸುದ್ದಿ ಮಸ್ಕಿ
ಮಹಿಳೆಯರು ಎಲ್ಲಾ ರಂಗದಲ್ಲಿ ಛಾಪು ಮೂಡಿಸಿದ್ದರೂ ಇನ್ನು ಮಹಿಳೆಯರಿಗೆ ಸಿಗಬೇಕಾದ ಪ್ರಾದಾನ್ಯತೆ ಸಿಕ್ಕಿಲ್ಲ ಎಂದು ಸಾಹಿತಿ, ಚಿಂತಕಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸಕೃತೆ ಡಾ.ಎಚ್.ಎಸ್.ಅನುಪಮಾ ಹೇಳಿದರು.
ಪಟ್ಟಣದ ಶ್ರೀಭ್ರಮರಾಂಬ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಸಂಜೆ ಶ್ರೀಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ಸಂಘದಿಂದ ನಡೆದ ಹೆಣ್ಣು ಹೆಜ್ಜೆ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹೆಣ್ಣು ಮಕ್ಕಳು ಅಡುಗೆ ಮನೆಗೆ ಮೀಸಲಾಗಿ ತಮ್ಮಲ್ಲಿರುವ ಅಂತಃಶಕ್ತಿಯನ್ನು ಕುಂದಿಸಿಕೊಳ್ಳುತ್ತಿದ್ದಾರೆ. ಕುಟಂಬಕ್ಕೆ ಮೀಸಲಾದ ಮಹಿಳೆ ಸಾಮಾಜಿಕ ಮಹಿಳೆಯಾಗಿ ಪರಿವರ್ತನೆ ಆಗಬೇಕಾಗಿದೆ. ಗಂಡ ಹೆಂಡತಿ ಸಂಬAಧದಲ್ಲಿ ಅಂತರವಿರದೆ ಸ್ನೇಹ ಸಂಬAಧ ಬೆಳೆಯಬೇಕು ಎಂದರು.
ಸಮಾಜದಲ್ಲಿ ಬದಲಾವಣೆ ತರುವ ಏಕೈಕ ಮಾರ್ಗವೆಂದರೆ ಆಡಳಿತ ನಡೆಸುವ ಮಾರ್ಗ. ಕರ್ನಾಟಕದಲ್ಲಿ ೨೨೬ ಶಾಸಕರಿರುವ ಸದನದಲ್ಲಿ ಕೇವಲ ೬ ಜನ ಮಹಿಳಾ ಶಾಸಕರಿದ್ದಾರೆ. ಇದರಿಂದ ಮಹಿಳೆಯರನ್ನು ರಾಜಕೀಯವಾಗಿ ದೂರ ಇಡಲಾಗಿದೆ ಎಂಬುದು ಸಾಭೀತಾಗಿದೆ. ಮಹಿಳೆಯರು ರಾಜಕೀಯವಾಗಿ ಮುಂದೆ ಬಂದಾಗ ಮಾತ್ರ ಸಮ ಸಮ ಸಮಾಜ ಬೆಳೆಯಲು ಸಾದ್ಯವಾಗುತ್ತದೆ ಎಂದರು.
ಪುರುಷ ಸಮಾಜ ಸೃಷ್ಟಿಸಿದ ದೇವತೆಗಳ ಪುರಾಣ ಪುಣ್ಯ ಕಥೆಗಳಲ್ಲಿ ಮಹಿಳಾ ದೇವರಿಗೆ ಗೌರವ ಕೊಡಲಾಗಿದೆ. ಆದರೆ ವಾಸ್ತವದ ಬದುಕಿನಲ್ಲಿ ಮಹಿಳೆಯರನ್ನು ಕಡೆಗಣೆಸಲಾಗುತ್ತದೆ ಇದನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು ಎಂದರು.
ಮಹಿಳೆಯರ ಮೇಲೆ ನಡೆಯುವ ಶೋಷಣೆಯ ಪ್ರಕಾರಗಳನ್ನು ಎಳೆ ಎಳೆಯಾಗಿ ಬಿಚ್ಚಿ, ಶೋಷಣೆಯ ವಿರುದ್ಧ ಮಹಿಳೆಯರು ಪ್ರತಿಭಟಿಸುವಂತಾಗಬೇಕು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯನ್ನು ಸಮನಾಗಿ ಕಾಣುವಂತೆ ಮಾಡಬೇಕಾದರೆ ಹೆಣ್ಣು ಯಾವ ಹೆಜ್ಜೆ ಅನುಸರಿಸಬೇಕೆಂಬುದನ್ನು ಡಾ.ಎಚ್.ಎಸ್.ಅನುಪಮಾ ತಿಳಿ ಹೇಳಿದರು.
ಭ್ರಮರಾಂಬ ಸಹಕಾರಿ ಸಂಘದ ಅದ್ಯಕ್ಷ ಡಾ.ಶಿವಶರಣಪ್ಪ ಇತ್ಲಿ, ಸಿಇಒ ವೀರೇಶ ಹಿರೇಮಠ, ಮಹಾಂತೇಶ ಮಸ್ಕಿ, ಸೆಲ್ಕೋ ಸೊಲಾರನ ಯಲ್ಲಾಲಿಂಗ ಮಾತನಾಡಿದರು. ಭ್ರಮರಾಂಬ ಸಹಕಾರಿ ಸಂಘದ ಉಪಾಧ್ಯಕ್ಷ ಪಂಪಣ್ಣ ಗುಂಡಳ್ಳಿ ಉಪಸ್ಥಿತರಿದ್ದರು.