ಜಾನಪದ ಕೋಗಿಲೆ

ಜಾನಪದ ಕೋಗಿಲೆ

 

 

 

 

 

 

 

 

 

 

ಜಾನಪದ ಕೋಗಿಲೆ ಸುಕ್ರಿ
ಸಂಸ್ಕೃತಿ ಸಿರಿಯ ಸುಪುತ್ರಿ
ಕಲ್ಲು ಮುಳ್ಳಿನ ಹಾದಿಯಲಿ
ವನಸುಮ ಬಳ್ಳಿ ಹಬ್ಬಿಸಿ
ಬದುಕಿನ ಪರಿಮಳದ ನಗೆಸೂಸಿ
ಸಾಮಾಜಿಕ ರಂಗದಲಿ
ನ್ಯಾಯ ನೀತಿಗೆ ಆಗ್ರಹಿಸಿ
ರೈತ ಚಳುವಳಿಯ
ಮುಂದಾಳುವಹಿಸಿ
ಮದ್ಯದ ವಿರುದ್ಧ ಕೈಜೋಡಿಸಿ
ಹೋರಾಡಿದ ಧೀಮಂತೆ
ಸ್ತ್ರೀ ಅಂತರಾಳದ ಶಕ್ತಿಯಾಗಿ
ನಾಟಿ ವೈದ್ಯೆ ಪರಿಸರ ಪ್ರೇಮಿ
ಕಾಮಾಲೆ ರೋಗಕೆ ಮದ್ದು
ಹಾಲಕ್ಕಿ ಜನಾಂಗದ ಅಮ್ರುತ ಸಿಂಧು
ಜನಪದ ಲೋಕಕೆ ನೀನಾದೆ
ಆತ್ಮೀಯ ಬಂಧು
ಏನಾದ್ರೂ ಮಾಡಬಲ್ಲೆ ಎಂಬ
ಅಚಲ ನಂಬಿಕೆ
ಸಾಂಸ್ಕೃತಿಕ ಪರಂಪರೆ
ಐಸಿರಿ ಬೆಳೆಸುವ ಎಚ್ಚರಿಕೆ
ಸಹಸ್ರಾರು ಜಾನಪದ ಹಾಡುಗಳ
ಕಲೆಯ ಉಳಿಸಿ
ಕರುನಾಡ ಸಿರಿಯ ಬೆಳಗಿಸಿ
ಪ್ರಶಸ್ತಿ ಪದಕಗಳಿಗೆ
ಗೌರವ ತೊಡಿಸಿ
ಸಾಧಿಸುವ ಛಲ ಶ್ರದ್ಧೆಯ
ಮನೋಭಾವ ಗಳಿಸಿ
ಕೊರಳ ಮಾಲೆಗಳ ಮುತ್ತು
ಮಣಿಗಳಂತೆ
ಲೆಕ್ಕವಿಲ್ಲದಷ್ಟು ಮುಡಿಗೆ
ಬಿರುದು ಸನ್ಮಾನ
ಅಕ್ಷರವಿಲ್ಲದಿದ್ದರೂ ಅರಿವು
ಅಂತಃಕರಣ ಅಭಿಮಾನಗಳೆ
ಅಂತರಂಗದ ಬುದ್ಧಿ
ಜಾನಪದ ಸಿಧ್ಧಿಯ ಸಿರಿಗಂಗೆ
ಕರುನಾಡೆ ಕೊಂಡಾಡುವುದು
ನಿಮ್ಮ ಸಾಧನೆಯ ಶಿಖರ ರಂಗ

 

 

 

 

 

 

 

 

 

 

ಲಲಿತಾ ಪ್ರಭು ಅಂಗಡಿ
ಮುಂಬಯಿ

Don`t copy text!