ಮಾತು ಬರಿಯ ಮಾತು

ಮಾತು ಬರಿಯ ಮಾತು

ಅವರಂದ್ರ್ “ನೀನು ದಪ್ಪಗಿದ್ದೀಯ”,
ನಾನು ತಿಂಡಿ ಬಿಟ್ಟೆ, ಊಟ ಬಿಟ್ಟೆ, ಅನ್ನ ಕಾಳುಗಳನ್ನೂ ಬಿಟ್ಟೆ…
ಇವರಂದರು, “ನೀನು ಕಡ್ಡಿಯಂತಾಗಿದ್ದೀಯ”;
ನಾನು ಎಲ್ಲಾ ತಿಂದೆ, ತುಪ್ಪ, ಬೆಣ್ಣೆ ಎಲ್ಲವನ್ನೂ ತುಂಬ ತಿಂದೆ.

ಕೊನಗೆ, ನಾನು ದಾಖಲಾಗದೆ ಆಸ್ಪತ್ರೆಯಲ್ಲಿ.

ನನ್ನ ನೋಡಲು ಅವ್ರೂ ಬಂದ್ರು, ಇವ್ರೂ ಬಂದ್ರು…
ಪಿಸು ಮಾತಿನಲ್ಲಿ ಅವ್ರು ಇವ್ರಿಗೆ ಹೇಳಿದ್ರು,
“ಇದ್ ಹಾಗೆ ಇದ್ರೆ ಏನಾಗಿತ್ತೋ!?”
ಪ್ರಶ್ನೆ ಮಾಡಲು ನಾನು ಬಾಯಿ ತೆರೆವಷ್ಟರಲ್ಲಿ,
ಅವ್ರು – ಇವ್ರು ಮಾಯ… ನಾನು ಮಂಗ!!!


ವಾಣಿ ಭಟ್, ವಾಪಿ, ಗುಜರಾತ್.

Don`t copy text!