ಕೇಳು ನನ್ನ ಗೆಳತಿ…

ಕೇಳು ನನ್ನ ಗೆಳತಿ…

ಗೆಳತಿ…
ಇದೇನು ನಿನ್ನೀ ಸ್ಥಿತಿ…!
ಅವಳ ಮಾತನಿಂದ ನೀ ಕೊರಗುವ ಪರಿಸ್ಥಿತಿ…?
ಕೇಳು ಗೆಳತಿ…
ನಾನು ಹೋದೆ ಅವಳ ತಾಣ,
ತಿಳಿಸಿದೆ…ಅವಳ ಮಾತಾಗಿತ್ತು ವಿಷ ಬಾಣ.
ಆಗಲಿ ಅವಳಿಂದ ಕ್ಷಮೆಯಾಚನೆ,
ಸಿಗಲಿ ನಿನ್ನೀ ದುಃಖಕ್ಕೆ ವಿಮೋಚನೆ…
ಇದಕ್ಕೆ ಅವಳಂದಲೂ ಪಟ್ಟನೇ..
“ನಾನೇನು ಅವಳಿಗೆ ಹೇಳಿದೆನೇ…
ಎನ್ನೆಲ್ಲ ಮಾತಿಗೆ ಕೊರಗಲು,”
ಎಂತಂದು ಕುಲುಕಿದಳು ಹೆಗಲು.
ಕೇಳು ಗೆಳತಿ…
ನಿನ್ನೀ ಕೊರಗನ್ನು ಬಿಡಲಾಗದೆ…?
ಸರ್ಪ ತನ್ನ ಕಡಿತವನ್ನು ನೆನಪಿಡುವುದೇ…?

 

 

 

 

 

 

 

 

 

 

-ವಾಣಿ ಭಟ್, ವಾಪಿ, ಗುಜರಾತ್.

Don`t copy text!