ನೂರು ನಾಯಕರನ್ನು ತಯಾರು ಮಾಡುವವ ನಿಜ ನಾಯಕ
e- ಸುದ್ದಿ ಬೈಲಹೊಂಗಲ
ಅಧಿಕಾರ ಪ್ರತಿಷ್ಠೆ ಚಪ್ಪಾಳೆ ಹಾರ ತುರಾಯಿ ಸನ್ಮಾನಗಳಿಂದ ವ್ಯಕ್ತಿ ನಾಯಕನಲ್ಲ ತನ್ನಂತ ನೂರು ನಾಯಕರನ್ನು ತಯಾರು ಮಾಡುವವ ನಿಜನಾಯಕ ಎಂದು ನೈರುತ್ಯ ರೇಲ್ವೆಯ ಡಿ ಆರ್ ಯು ಸಿ ಸಿ ನಿರ್ದೇಶಕ ಎಫ್ ಎಸ್ ಸಿದ್ದನಗೌಡರ ಸನ್ಮಾನ ಪರ ಮಾತನಾಡಿದರು.
ಪತ್ರಿ ಬಸವನಗರ ಅಭಿವೃದ್ಧಿ ಸಂಘ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ಹಿರಿಯ ನಾಗರಿಕರ ವೇದಿಕೆ ಜಾಗತಿಕ ಲಿಂಗಾಯತ ಮಹಾಸಭಾ ಏರ್ಪಡಿಸಿದ್ದ 27ನೆಯ ಮಾಸಿಕ ಅನುಭಾವ ಗೋಷ್ಠಿ ಹಾಗೂ ಹರಡರ್ಕರ್ ಮಂಜಪ್ಪನವರ ಜಯಂತಿ ಉತ್ಸವದಲ್ಲಿ ಸನ್ಮಾನ ಸ್ವೀಕರಿಸಿದ ಸಿದ್ದನಗೌಡರು ಸಾವಿರಾರು ರಾಷ್ಟ್ರ ಭಕ್ತರನ್ನು ನಾಡಭಕ್ತರನ್ನು ಬಸವ ಭಕ್ತರನ್ನು ತಯಾರು ಮಾಡಿ ಮಹಾತ್ಮ ಗಾಂಧೀಜಿಯವರ ಪ್ರಶಂಸೆಗೆ ಪಾತ್ರರಾದ ಮಂಜಪ್ಪನವರು ನಮಗೆ ಸ್ಪೂರ್ತಿ ಎಂದರು.
ಮರುಗೋಡದ ಬಸವ ಮಹಾಮನೆ ಸದಸ್ಯ ಶೋಭಾ ಹಂಪಿಹೊಳಿ ಉಪನ್ಯಾಸ ನೀಡುತ್ತಾ ಪ್ರಥಮವಾಗಿ ಬಸವ ಜಯಂತಿಯ ಆಚರಣೆಗೆ ಕರಣಿಭೂತರಾದ ಮಂಜಪ್ಪನವರು ರಾಷ್ಟ್ರ ಜೀವನ ಗ್ರಂಥ ಮಾಲೆ, ಸತ್ಯಾಗ್ರಹ ಗ್ರಂಥ ಮಾಲೆ, ಜನಜಾಗೃತಿ ಗ್ರಂಥ ಮಾಲೆ, ಮಕ್ಕಳ ಸಾಹಿತ್ಯ ಗ್ರಂಥ ಮಾಲೆ, ಲಿಂಗಾಯತ ವಿದ್ಯಾಲಯ ಗ್ರಂಥ ಮಾಲೆ ಮುಂತಾದವುಗಳನ್ನು ಹುಟ್ಟು ಹಾಕಿ ಜನರಲ್ಲಿ ನಾಡು ನುಡಿ ದೇಶ ಸಾಹಿತ್ಯ ಸಂಸ್ಕೃತಿಗಳ ಅರಿವು ಮೂಡಿಸಿ ಗಾಂಧಿ ತತ್ವಗಳನ್ನ ಅಳವಡಿಸಿಕೊಂಡು ಬಾಳಿ ಬದುಕಿದ ಕರ್ನಾಟಕದ ಗಾಂಧಿ ರಾಷ್ಟ್ರಧರ್ಮದೃಷ್ಟ ನಿರಂಜನ ಶರಣ ಮಂಜಪ್ಪನವರು ಸಮಾಜಕ್ಕೆ ಮಾದರಿ ಎಂದರು.
ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷೆ ಗೌರಾದೇವಿ ತಾಳಿಕೋಟಿಮಠ. ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಕಾಡಪ್ಪ ರಾಮಗುಂಡಿ ದುಂಡಯ್ಯ ಕುಲಕರ್ಣಿ ಮೃತ್ಯುಂಜಯ ಗಡತನವರ ವೀರಭದ್ರಪ್ಪ ಕಾಪಸೆ ಗಂಗಣ್ಣ ಅಂಗಡಿ ಅಶೋಕ ಸಾಲಿ ಮಾರುತಿ ಮಸ್ತ ನವರ್ ಶಿವಲೀಲಾ ಹುಲಿಕಟ್ಟಿ ಕಲಾವತಿ ಕಡಕೋಳ ಗೀತಾ ಅರಳಿಕಟ್ಟಿ ವಿಜಯಾ ಹಾಲಬಾವಿ ನಿರ್ಮಲಾ ಕಲ್ಬುರ್ಗಿ ಸಾವಿತ್ರಿ ಹೊತ್ತಿಗಿಮಠ ಸರ್ವ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು
ಪತ್ರಿ ಬಸವ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ನೇತೃತ್ವ ನುಡಿಗಳನಾಡಿದರು. ದಾನೇಶ್ವರಿ ಸಾಣಿಕೊಪ್ಪ ವಚನ ಚಿಂತನೆಗೈದರು ಸುವರ್ಣ ಬಿಜುಗುಪ್ಪಿ ಅಧ್ಯಕ್ಷತೆ ವಹಿಸಿದ್ದರು ಅಜಗಣ್ಣ ಮುಕ್ತಾಯಕ್ಕ ಬಳಗ ಪ್ರಾರ್ಥಿಸಿದರು ಬಸವರಾಜ್ ಹುಬ್ಬಳ್ಳಿ ಸ್ವಾಗತಿಸಿದರು ಸುಹಾಸಿನಿ ಶಿಳ್ಳಿ ಪ್ರಸ್ತಾವಿಕ ನುಡಿದರು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂತೋಷ್ ಕೊಳವಿ ವಂದಿಸಿದರು. ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ದಾಕ್ಷಾಯಿಣಿ ಹುಬ್ಬಳ್ಳಿ ನಿರೂಪಿಸಿದರು.