ಲೇಖಕ ಸಮಾಜಿಕ ವ್ಯವಸ್ಥೆಗೆ ಮುಖಾಮುಖಿಯಾಗಬೇಕು- ಮಂಡಲಗಿರಿ ಪ್ರಸನ್ನ
e- ಸುದ್ದಿ ಮಸ್ಕಿ
ಲೇಖಕ ಬರಹಗಾರ ಕತೆ ಕಾದಂಬರಿ ಬರೆಯುವಾಗ ಕಾಲ್ಪನಿಕತೆಗಿಂತ ಸಾಮಾಜಿಕ ವ್ಯವಸ್ಥೆಗೆ ಮುಖಾಮುಖಿಯಾಗಿ ಸಾಹಿತ್ಯ ರಚನೆಯಾಗಬೇಕು ಎಂದು ಹಿರಿಯ ಸಾಹಿತಿ ಗಜಲ್‌ಕಾರ ಮಂಡಲಗಿರಿ ಪ್ರಸನ್ನ ಹೇಳಿದರು.
ಪಟ್ಟಣದ ಶ್ರೀಭ್ರಮರಾಂಬ ದೇವಸ್ಥಾನದಲ್ಲಿ ಶುಕ್ರವಾರ ಶಿಕ್ಷಕ ಆದಪ್ಪ ಹೆಂಬಾ ರಚಿಸಿದ ಅದ್ವಿತಾ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು. ಲೇಖಕರು ಸಂವೇದನ ಶೀಲರಾಗಿರಾಬೇಕು. ಸಮಾಜದಲ್ಲಿ ನಡೆಯುವ ಘಟನೆಗಳನ್ನು ಮುಖಾಮುಖಿಯಾಗಿಸಿಕೊಂಡು ಸಾಹಿತ್ಯ ರಚನೆಯಾದಗ ಜನ ಮಾನಸದಲ್ಲಿ ಉಳಿಯಲು ಸಾಧ್ಯ ಎಂದರು.
ನಿವೃತ್ತ ಉಪನಿರ್ದೆಶಕ ಮಲಿಕಾರ್ಜುನ ಸ್ವಾಮಿ ಹಿರೇಮಠ ಮಾತನಾಡಿ ಅದ್ವಿತಾ ಕಾದಂಬರಿ ಸ್ಥಳಿಯ ಆಡು ಭಾಷೆಯಲ್ಲಿ ಮೂಡಿ ಬಂದಿರುವದರಿಂದ ಪಾತ್ರಗಳೊಂದಿಗೆ ಓದುಗ ಮಾತನಾಡುವಂತೆ ಭಾಸವಾಗುತ್ತದೆ. ರಾಯಚೂರು ಭಾ಼಼ಷೆಯ ಸೊಗಡನ್ನು ಕಾದಂಬರಿಕಾರ ಆದಪ್ಪ ಹೆಂಬಾ ಚನ್ನಾಗಿ ಬಳಸಿಕೊಂಡು ಉತ್ತಮ ಕಾದಂಬರಿಯನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಾಹಿತಿ ಮಹಾಂತೇಶ ಮಸ್ಕಿ ಮಾತನಾಡಿ ಕಾದಂಬರಿ ರಚನೆಗೆ ಧ್ಯಾನಸ್ಥ ಮನಸ್ಸು ಮತ್ತು ಕ್ಷೇತ್ರ ಕಾರ್ಯ ಬಹಳ ಮುಖ್ಯವಾಗಿದ್ದು ಇಡಿ ಕಾದಂಬರಿಯಲ್ಲಿ ಟೆನ್ನಿಸ್ ಆಟದ ಬಗ್ಗೆ ಕಟ್ಟಿಕೊಡಲಾಗಿದೆ. ಕಾದಂಬರಿಕಾರ ಆದಪ್ಪ ಹೆಂಬಾ ಟಿನ್ನಿಸ್ ಆಟಗಾರ ಅಲ್ಲದಿದ್ದರೂ ಟೆನ್ನಿಸ್ ಗುರುಗಳಾದ ಅರವಿಂದ ಶಾಸಲ್ ಅವರಿಂದ ಮಾಹಿತಿ ಪಡೆದುಕೊಂಡು ಅರವಿಂದ ಶ್ಯಾಸಲ್ ಅವರನ್ನು ಪಾತ್ರದಲ್ಲಿ ತಂದು ಉತ್ತಮವಾದ ಕ್ಷೇತ್ರಕಾರ್ಯ ಮಾಡಿ ಕಾದಂಬರಿ ರಚಿಸಿದ್ದು ಈ ಕೃತಿಯ ಹಗ್ಗೆಳಿಕೆಯಾಗಿದೆ ಎಂದರು.
ಜಿ.ಪಂ.ಮಾಜಿ ಸದಸ್ಯ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ.ಶಿವಶರಣಪ್ಪ ಇತ್ಲಿ, ಸಾಹಿತಿ ಗುಂಡುರಾವ ದೇಸಾಯಿ, ಪತ್ರಕರ್ತ ವೀರೇಶ ಸೌದ್ರಿ, ಕತೆಗಾರ ಶರಣಪ್ಪ ಗುಡದಿನ್ನಿ, ಮುಖ್ಯಗುರು ರಾಜೇಶ್ವರಿ ಹಿರೇಮಠ, ಶಿಕ್ಷಕ ಸುಗುರೇಶ ಹಿರೇಮಠ, ಯಶೋಧಬಾಯಿ ಮಾತನಾಡಿದರು.