ಬಿಚ್ಚಿಟ್ಟ ಬುತ್ತಿ 

 

ಬಿಚ್ಚಿಟ್ಟ ಬುತ್ತಿ 

ಮನುಕುಲದ ಉದ್ಧಾರಕ್ಕಾಗಿ ಬಿಚ್ಚಿಟ್ಟ
ವಚನಾಮ್ರತದ ಬುತ್ತಿ
ಉಂಡು ಅರಗಿಸಿ
ಸವಿಯ ನೆನಪಿಸಿ
ಸುಮಧುರ ಸ್ವಾದವ
ಆಘ್ರಾಣಿಸಿ
ತನು ಮನಕೆ ತಂಪುಣಿಸುವ
ಭವರೋಗದ ವೈದ್ಯ
ಭವಬಂಧನ ಬಿಡಿಸುವ
ಸಿಂಧು
ಸರ್ವರ ಸಮಪಾಲಿನ
ಸೋಪಾನ
ಇವನೊಮ್ಮೆಅಗಿದು
ಅರೆದು ರುಚಿಯ ನೋಡಾ
ನೀನುಂಡು ಹಸಿದವರಿಗೆ
ನೀಡು
ಇದು ಕೆಡುವ ನಾರುವ
ಬುತ್ತಿ ಅಲ್ಲ
ಬಿತ್ತಿ ಬೆಳೆವ ಬೆಳೆಸುವ
ಬಾಳಿನ ಬಂಡಿಯ ಬುತ್ತಿ
ಅರಿವು ಬೆಳಕಿನ
ದಾರಿಯ ಬುತ್ತಿ
ಅಂತರಾತ್ಮದ ಅವಲೋಕನಕೆ
ಸುತ್ತಿಸುವ ನೆನಪಿನ ಬುತ್ತಿ
ಅನುಭವ ಮಂಟಪದಲಿ
ಸಾವಿರಾರು ಶರಣರೊಡಗೂಡಿ
ಹಂಚಿಕೊಂಡ ವೈಚಾರಿಕ ಪ್ರಜ್ಞೆಯ ಅನುಭಾವದ ಬುತ್ತಿ
ಅರಗಿಸಿಕೊಳ್ಳದ ವಿವೇಕ ರಹಿತ ಬಿಕ್ಕುವ ಬಚ್ಚಿಡುವ ಮೇಧಾವಿಗಳಿಗೂ
ಬಿಚ್ಚಿಟ್ಟ ಬುತ್ತಿ
ಘಮಲು ಅರಿಯದ
ತನು ವಂಚಕ ಮನವಂಚಕರಿಗೆ
ಸದಾ ಸುಗಂಧ ಸೂಸುವ
ಶರಣರ ಹಿತನುಡಿಯ
ಬಿಚ್ಚಿಟ್ಟ ಬುತ್ತಿ.

 

 

 

 

 

 

 

 

 

 

-ಲಲಿತಾ ಪ್ರಭು ಅಂಗಡಿ
ಮುಂಬಯಿ

Don`t copy text!