ಸಮಬಾಳು

ಕವಿತೆ

ಸಮಬಾಳು

ಭರವಸೆಯ ಹೊಂಬೆಳಕು
ಮೂಡಿಹುದು ಬಾಳಲಿ
ಬಾಳ ಪಥದಿ ನೀ
ಜೋತೆಗಿರುವೆ ಎಂದು ||
ಭರವಸೆಯೇ ಬದುಕೆಂದು
ನಂಬಿ ನಡೆಯುತಲಿ
ನಡೆದಷ್ಟು ದಾರಿಯಿದೆ
ಸಾಗೋಣ ಮುಂದು ||
ನೋವುಂಡ ಬದುಕಲಿ
ನಲಿವು ಹಂಚುತಲಿ
ಸಾಗೋಣ ಸಮರಸದಿ
ಸವಿ ಜೇನನುಂಡು ||
ಎನೆ ಬರಲಿ ಎದೆಗುಂದದೆ
ಬಾಳ ಬಂಡೆಯಲಿ
ಒಲವಿನಾ ಬುತ್ತಿಯಲಿ
ಸಮಬಾಳು ಸಮಪಾಲು
ನನಗೂ ನಿನಗೂ ಎಂದು
ಅರಿತು ನಡೆಯುವ ಮುಂದು||

ಸವಿತಾ ಮಾಟೂರು ಇಲಕಲ್ಲ

Don`t copy text!