ನೆತ್ತರಿನ ರುಚಿ ಹತ್ತಿದೆ

ನೆತ್ತರಿನ ರುಚಿ ಹತ್ತಿದೆ

 

ಕಲ್ಲೇ ಕರಗಿತು
ರಕ್ತದೋಕುಳಿ ಕಂಡು
ಕಾಶ್ಮೀರದ ಕಣಿವೆಯ
ಕೆಂಪು ಕಲೆಗಳಲಿ
ರಂಗಾದ ಅವನಿಯ
ಉಸಿರುಗಟ್ಟಿತು

ನೆತ್ತರಿನ ರುಚಿ ಹತ್ತಿದೆ
ಧರ್ಮದ ಬಂದೂಕಿಗೆ
ರಕ್ತ ಚೆಲ್ಲಿದ ಹಾದಿಯಲಿ
ಕನಸು ಹೊತ್ತ
ಕೂಸುಗಳ ಆಕ್ರಂದನ
ಕೇಳದು ಪಾಪಿ ಪಿಶಾಚಿಗೆ

ಧರ್ಮ, ದೇವರುಗಳ ಹೆಸರಿನ
ಅಸ್ತ್ರಗಳ ಅಟ್ಟಹಾಸ
ಹಿಂದುಗಳ ಕೊಚ್ಚೆಂದು
ಕುರಾನ್ ಹೇಳಿತೇ?
ಮುಸ್ಲಿಮರ ಕೊಲ್ಲೆಂದು
ಭಗವದ್ಗೀತೆ ಹೇಳಿತೇ?

ನರಬೇಟೆಯ, ನರಭಕ್ಷಕರ
ಬಂದೂಕಿನ ಆರ್ಭಟ ಅಡಗಿಸಲು
ದ್ವೇಷದ ಕಳೆ ಕೀಳಲೇಬೇಕು
ಕೊಲ್ಲುವ ಕಾಯಕದ
ಧರ್ಮಾಂಧ ಕೊಲೆಗಡುಕರ
ನಿಶಾನೆ ನಿರ್ನಾಮವಾಗಲಿ
ಕ್ರಾಂತಿ ಕಹಳೆ ಮೊಳಗಲಿ

ಸಮತೆಯ ಸುನಾಮಿ
ಭೋರ್ಗರೆಯಲಿ
ಧರ್ಮದ ಅಫೀಮು
ಕೊಚ್ಚಿ ಹೋಗಲಿ
ಎಲ್ಲರೆದೆಯಲಿ
ಪ್ರೀತಿ, ಮಮತೆ,
ಬಂಧುತ್ವ ಬೀಜ
ಮೊಳೆತು ಹೆಮ್ಮರವಾಗಲಿ

 

 

 

 

 

 

 

 

 

ಉಷಾ ಗೊಬ್ಬೂರ

Don`t copy text!