ರಕ್ತಬೀಜಾಸುರರ ವಧೆ ಆಗಲೇಬೇಕು

ರಕ್ತಬೀಜಾಸುರರ ವಧೆ ಆಗಲೇಬೇಕು

 

ರಕ್ತಬೀಜಾಸುರರ ವಧೆ ಆಗಲೇಬೇಕು
ಆತಂಕಿಗಳ ಹತ್ಯೆ ನಡೆಯಲೇಬೇಕು

ಗಂಡಸರನ್ನೇ ಗುರಿಯಾಗಿಸಿ ಕೊಂದ
ನೀಚರನ್ನು ಹುಡುಕಿ ಕೊಲ್ಲಿ ಸೈನಿಕರೆ

ನಮ್ಮ ಯೋಧರ ವೇಷದಲ್ಲಿ ಬಂದ
ಅಧರ್ಮಿಗಳೆ ಧರ್ಮ ಕೇಳಿದಿರಾ

ರಾಷ್ಟ್ರ ಧರ್ಮ ನಮ್ಮದು ಭಾರತೀಯ
ಜಾತಿನಮ್ಮದು ಮನುಷ್ಯ ಜಾತಿ ನಮ್ಮದು

ಸಂತೋಷದ ಕ್ಷಣಗಳನ್ನು ಕಳೆವಾಗ
ಪತ್ನಿಯೆದುರೇ ಪತಿಯನ್ನು ಗುಂಡಿಕ್ಕಿದ

ಪಾಪಿಗಳ ಬಿಡಬೇಡಿ ನನ್ನ ಯೋಧರೆ
ಪಾತಾಳದಲ್ಲಡಗಿದ್ದರೂ ತೆಗೆಯಿರಿ

ಸಹನೆಗೂ ಮಿತಿಯಿದೆ ಪುಲ್ವಾಮಾ
ದಾಳಿಯಂತೆ ಇದನ್ನೂ ಖಂಡತುಂಡು

ಮಾಡುವರು ನಮ್ಮ ದೇಶದ ಜವಾನರು
ಅನ್ನ ನೀರಿಲ್ಲದೆ ನರಳಿ ಸಾಯಿಸುವರು

ರಕ್ತಬೀಜಾಸುರರ ಹುಟ್ಟಡಗಿಸಲೇಬೇಕು
ಪೂರ್ಣ ವಿಶ್ವ ಒಂದಾಗಿ ಮುಂದೆಬರಬೇಕು

 

 

 

 

 

 

 

 

 

 

ಅನ್ನಪೂರ್ಣ ಸಕ್ರೋಜಿ ಪುಣೆ

Don`t copy text!