“ಅಜ್ಜಿ ಮುಟಿಗಿಯ ಪ್ರೀತಿ”
ಬೇಸಿಗೆಯ ರಜಾ ದಿನಗಳಲಿ
ಅಜ್ಜ ಅಜ್ಜಿಯರ ಮನೆಯಲಿ
ಸೇರುತ ಎಲ್ಲರು ಹರುಷದಲಿ
ಮಜಾ ಮಾಡುತ ಸಂಭ್ರಮದಲಿ
ದಿನಕ್ಕೊಂದು ಚೆಂದದ ಕಥೆಯು
ಕೇಳಲು ಬಹಳ ಕುತೂಹಲವು
ನಿತ್ಯ ಊಟದಲಿ ಮುಟಿಗಿಯು
ಸವಿಯಲು ಬಲು ರುಚಿಕರವು
ಬಿಸಿ ಬಿಸಿ ಬೇಸಿದ ರೊಟ್ಟಿಯಲಿ
ಖಾರ ಉಪ್ಪು ಎಣ್ಣೆ ಹಾಕುತಲಿ
ಕೋತಂಬರಿ ಬಳ್ಳೊಳ್ಳಿ ಎಸಳಲಿ
ಕುಟ್ಟಿದ ಮುಟಿಗಿ ಅಜ್ಜಿ ಕೈಯಲಿ
ಅಜ್ಜಿಯ ಮುಟಿಗಿಯ ಮುಟ್ಟಿ
ತಿಂದರೆ ತುಂಬುವುದು ಹೊಟ್ಟಿ
ಶಕ್ತಿ ಬಲದಿಂದ ತುಂಬುತ ರಟ್ಟಿ
ದೇಹವು ಕೂಡ ತುಂಬಾ ಗಟ್ಟಿ
ಅಜ್ಜಿ ಮುಟಿಗಿಯ ಪ್ರೀತಿಯಲಿ
ಅಕ್ಕರೆಯ ಭಾವವು ಬೆರೆತಿದೆ
ಅಜ್ಜಿಯ ಕೈ ಬೆರಳ ಚಳಕದಲಿ
ಸ್ವಾದದ ಘಮವು ತುಂಬಿದೆ
ಪಿಜ್ಜಾ ಬರ್ಗರ್ ಬದಿಗೆ ಸರಿಸುತ
ದಿನಕ್ಕೊಂದು ಮುಟಿಗಿ ತಿನ್ನುತ
ಆರೋಗ್ಯವೇ ಭಾಗ್ಯವೆಂದೆನ್ನುತ
ನಗುತಿರಬೇಕು ಮೊಗವರಳಿಸುತ