ವೀಣಾ ಹೇಮಂತಗೌಡ ಅವರಿಗೆ SIWAA” ಸೌತ್ ಇಂಡಿಯಾ ವಿಮೆನ್ ಅಚೀವರ್ಸ್ ಅವಾರ್ಡ್
e- ಸುದ್ದಿ ಅಂತರ್ಜಾಲ ಪತ್ರಿಕೆಯ ಬರಹಗಾರ್ತಿ, ಕರ್ನಾಟಕದ ಗದಗ ಜಿಲ್ಲೆಯ ಮುಂಡರಗಿಯ ಚೈತನ್ಯ ಗ್ರಾಮೀಣಾಭಿವೃದ್ಧಿ ಮತ್ತು ಶೈಕ್ಷಣಿಕ ಸಂಸ್ಥೆ(ರಿ) ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮುಂಡರಗಿಯ
ಶ್ರೀಮತಿ ವೀಣಾ ಹೇಮಂತ್ ಗೌಡ ಪಾಟೀಲ್ ಅವರು ಕಳೆದ 15 ವರ್ಷಗಳಿಂದ ಮಹಿಳೆಯರ ಮತ್ತು ಮಕ್ಕಳ ಶೈಕ್ಷಣಿಕ ಕ್ಷೇಮಾಭಿವೃದ್ಧಿಗಾಗಿ ಕಾರ್ಯನಿರ್ವಹಿಸಿದ್ದು ದಕ್ಷಿಣ ಭಾರತದ ಪ್ರತಿಷ್ಠಿತ ಪ್ರಶಸ್ತಿ
“SIWAA” ಸೌತ್ ಇಂಡಿಯಾ ವಿಮೆನ್ ಅಚೀವರ್ಸ್ ಅವಾರ್ಡ್ ನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ವಿಭಾಗದಲ್ಲಿ
ದಿ:6-7-2025 ಭಾನುವಾರ ಚೆನ್ನೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರ ಸ್ವೀಕರಿಸಿ ಸನ್ಮಾನಿತರಾಗಲಿದ್ದಾರೆ.
ಟ್ವೆಲ್ ಮ್ಯಾಗಜಿನ್ ಅವರು ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಗ್ಲೋಬಲ್ ಪಿಂಕ್ ಆರ್ಮಿ, ಬೇಟಿ ಬಚಾವೋ ಬೇಟಿ ಪಡಾವೋ,ಎಂ ಎಸ್ ಎಂ ಇ (ಅತಿ ಸಣ್ಣ, ಕಿರು ಮದ್ಯಮ ಸಂಸ್ಥೆ)ಇವುಗಳ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೀಮತಿ ವೀಣಾ ಪಾಟೀಲ್ ಅವರು ಶೈಕ್ಷಣಿಕ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ
Many congratulations madam.
Proud of you.
Angelina Gregory
Akshara Foundation