ಗಜಲ್
ಮಗು ಹೃದಯದಿ ಅಕ್ಷರ ಬಿತ್ತಿಸಿದಾತ ಗುರು
ಬಾಳಿಗೆ ಅರಿವನು ಮೂಡಿಸಿದಾತ ಗುರು
ಕುಳಿತಿಹವು ಜೀವಿಗಳು ಆಲಸಿಯಾಗಿ
ಕಾಯಕದಿ ಛಲವನು ಬೆಳೆಸಿದಾತ ಗುರು
ಕಲಬೆರಕೆ ಎಲ್ಲೆಡೆ ರಾರಾಜಿಸುತಿದೆ
ಜಗಕೆ ಶುದ್ಧತೆಯನು ತಿಳಿಸಿದಾತ ಗುರು
ಮೇಲು ಕೀಳೆಂಬ ಭಾವವು ಬಲಿಯುತಿದೆ
ಸರ್ವರು ಸಮವೆಂದು ಒಪ್ಪಿಸಿದಾತ ಗುರು
ಅಜ್ಞಾನದ ಮುಸುಕು ಹೊದ್ದಿದೆ ವಿಶ್ವವು
ತಮವ ಸರಿಸಿ ಪ್ರಭೆ ಹರಡಿಸಿದಾತ ಗುರು
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ