ಚಿತ್ತರಗಿಯ ಜಗದ ಸೂರ್ಯ

 

ಚಿತ್ತರಗಿಯ ಜಗದ ಸೂರ್ಯ

 

 

 

 

 

 

 

 

 

 

 

ಚಿತ್ತರಗಿಯ ಚಿದ್ಬೆಳಕ
ಜೋಳಿಗೆ ಹಿಡಿದು ಹೊರಟ
ಅದ್ವೈತ ಮಹಿಮ
ಇಳಕಲನ ಈ ಮಾಹಾಂತ. 1

ಕಾವಿಯ ಶಿವಯೋಗಿ ಬಿಸಿಲಲ್ಲಿ
ಮಳೆಗರೆದ ವೈರಾಗ್ಯದ ಯತಿ
ಬಗಲಲಿ ಜೋಳಿಗೆ ಸಹಸ್ರಾರು
ಮೈಲು ನಡಿಗೆಯ ಧೀಮಂತ 2

ದುಶ್ಟಟಗಳ ಬೆಂಕಿಗೆ ನೀರುಣಿಸುವ
ನಡಿಗೆ ಬರಗಾಲಕ್ಕೆ ಬೆಳಕಾಗಿಸುವ
ಚೈತನ್ಯದ ಹರಿಕಾರ ದಾಸೋಹದ
ಭಗವಂತ. ಈ ಮಹಾ ಮಹಾಂತ. 3

ದುಃಖಿಸುವ ಮನಗಳಿಗೆ ತಾಯಿ
ಯಿಲ್ಲದ ತಬ್ಬಲಿಗಳಿಗೆ ಅಪ್ಪಿಕೊಂಡ
ಆತ್ಮ ರಕ್ಷಕ ಮತಿ ಹೀನರಿಗೆ
ಸನ್ಮತಿಯ ದೈವಗುರು ಮಹಾ ಮಹಿಮ 4

ಜಾತಿ ಧರ್ಮಗಳ ತೆಕ್ಕೆಯ ಸವರಿ
ಮಾತೆಯರಿಗೆ ಜಂಗಮ ದೀಕ್ಷೆ
ನೀಡಿ ಮಾನವತೆಯನ್ನು ಅಪ್ಪಿದ
ಧರ್ಮ ಗುರು ಮಹಾಂತ ಈ ಮಹಾಂತ 5

ವ್ಯಸನ ಮುಕ್ತ ಯುವಕರಿಗೆ ಆಶಾವಾದಿ..
ಕಲ್ಯಾಣ ಶರಣರ ಪ್ರತಿದ್ವನಿಯ ಸದ್ದು.
ಜಗವೆಲ್ಲಾ ಬಸವ ಮಂತ್ರ.
ಲಿಂಗಾಯತ ಧರ್ಮದ ಗುರು ಮಹಾಂತ.6

ಧರ್ಮ ಸಾಕ್ಷಾತ್ಕಾರದ ತವನಿಧಿ..
ಗುರು ಲಿಂಗ ಜಂಗಮ ಶೋಧದ…
ಭವ್ಯ ಮಹಾಂತನಿಗೆ ದುಶ್ಟಟ
ಗಳ ಮುಕ್ತತೆಯ ಚಿಂತೆ 7

ಕಲ್ಯಾಣ ನಾಡಿನ ಮೇರು ಶಿಖರಕ್ಕೆ
ಮಹಾಂತ ಬಿಕ್ಷೆಗೆ ಬೇಕಾಗಿದ್ದು
ಧನ ಕನಕವಲ್ಲ ವಿರಕ್ತ ಧರ್ಮದ
ನಿಷ್ಠೆ ಶರಣರ ಲೋಕ ಕಲ್ಯಾಣ. 8

ಚಿತ್ತರಗಿಯ ಜಗದ ಸೂರ್ಯನಿಗೆ
ವ್ಯಸನ ಮುಕ್ತ ಮಹಾಗುರುವಿಗೆ
ಶಿವ ಸಂಪ್ರೀತಿಯ ಉದಯದ ದಿನ
ಮಹಾಂತಾಗಮನದ ಪವಿತ್ರ ದಿನ 9

ದಾರಿ ತಪ್ಪಿದ ಸಮಾಜಕ್ಕೆ ‌ನೆರಳಿನಂತೆ
ಹಿಂಬಾಲಿಸಿ ರಕ್ಷಿಸಿದ ಸಪ್ತ ವ್ಯಸನಗಳ
ಸುಟ್ಟು ಹಾಕಿದ ಮಹಾಂತರಲ್ಲಿ ಮಹಾಂತ
ಎಂದಿಗೂ ಅಮರರು 10

ಡಾ. ಸರ್ವಮಂಗಳ ಸಕ್ರಿ
ರಾಯಚೂರು

 

 

Don`t copy text!