ಸಂಸ್ಕಾರ, ಸಮಾಜ ಸಂಘಟನೆ, ಶಿಕ್ಷಣಕ್ಕೆ ಆಧ್ಯತೆ- ಪರಣ ಮುನವಳ್ಳಿ

 

 

e- ಸುದ್ದಿ ಮಸ್ಕಿ

ಎಲ್ಲಾ ಸಮುದಾಯದವರೊಂದಿಗೆ ಹೊಂದಾಣಿಕೆಯಿoದ ಬದುಕುವ ಬಣಜಿಗ ಸಮುದಾಯಕ್ಕೆ ಭವಿಷ್ಯದಲ್ಲಿ ಬಣಜಿಗರ ಮಕ್ಕಳಿಗೆ ಶಿವಯೋಗ ಸಂಸ್ಕಾರ, ಶಿಕ್ಷಣ ಮತ್ತು ಕೌಟಂಬಿಕ ಸಧೃಡತೆಗೆ ಒತ್ತು ಕೊಡಬೇಕು ಎಂದು ಗಂಗಾವತಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಪಟ್ಟಣದ ಶ್ರೀಭ್ರಮರಾಂಬ ದೇವಸ್ಥಾನದಲ್ಲಿ ಬುಧವಾರ ಮಸ್ಕಿ ತಾಲ್ಲೂಕು ಬಣಜಿಗ ಸಮಾಜದ ವಾರ್ಷಿಕ ಮಹಾಸಭೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಹಿರಿಯ ಕಾಯಕ ಜೀವಿಗಳಿಗೆ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಣಜಿಗ ಸಮಾಜದವರು ಸ್ವಾಭಿಮನಿಗಳು, ವರ್ತಕ ವೃತ್ತಿಯಿಂದ ಬಂದ ಸಮಾಜ ಎಲ್ಲಾ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವುದರಿಮದ ಜನ ನಮ್ಮನ್ನು ಪ್ರೀತಿಸುತ್ತಾರೆ ಎಂದರು.
ಶಾಹಪುರದ ಮಾಜಿ ಶಾಸಕ ಗುರು ಪಾಟೀಲ ಬಣಜಿಗ ಸಮಾಜದ ಮಾಹಿತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಮಸ್ಕಿ ಪಟ್ಟಣ ನಾಲ್ಕು ಸಾವಿರ ವರ್ಷಗಳಿಂದ ಮಾನವರ ಅಸ್ಥಿತ್ವ ಹೊಂದಿದ ಪುರಾತನ ನಗರವಾಗಿದೆ. ಅಂದಿನಿAದಲು ಬಣಜಿಗರು ವಾಸಿಸುತ್ತಿದ್ದರೇ ಎಂಬುದನ್ನು ಸಂಶೋಧನೆಯಿAದ ತಿಳಿದುಕೊಳ್ಳಬೇಕಾಗಿದೆ. ಬಣಜಿಗರು ವ್ಯಾಪಾರದ ಜತೆಗೆ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ ರಾಜ್ಯದಲ್ಲಿ ಬಣಜಿಗ ಸಮಾಜದ ಮುಖ್ಯಮಂತ್ರಿಗಳ ಕಾಲವಧಿಯಲ್ಲಿ ರಾಜ್ಯ ಅಭಿವೃದ್ದಿ ಕಂಡಿದೆ. ವಿಶೇಷವಾಗಿ ಬಣಜಿಗರು ಧಾರ್ಮಿಕ ಸಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದಿದ್ದು ಇತರ ಸಮಾಜಗಳಿಗೆ ಮಾದರಿಯಾಗಿದೆ ಎಂದರು.
ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ಆರ್ಶೀವಚನ ನೀಡಿದರು. ಶಿಕ್ಷಕರÀ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೊಟ್ರಪ್ಪ ಹಗರಿಬಮ್ಮೊನಳ್ಳಿ, ಬಣಜಿಗ ಸಮಾಜದ ಅಧ್ಯಕ್ಷ ವೀರೇಶ ಸೌದ್ರಿ, ಬಿ.ಎಲ್.ಶಟ್ಟಿ, ಶಿವಪ್ರಸಾದ ಕ್ಯಾತ್ನಟ್ಟಿ, ನಾಗರಾಜ ಯಂಬಲದ, ಸಹನಾ ಬ್ಯಾಳಿ ಮಾತನಾಡಿದರು.
ಸಮಾಜದ ಗೌರವ ಅಧ್ಯಕ್ಷ ಬಸಪ್ಪ ಬ್ಯಾಳಿ, ಶ್ರೀಶೈಲಪ್ಪ ಬ್ಯಾಳಿ, ಡಾ.ಮಲ್ಲಿಕಾರ್ಜುನ ಇತ್ಲಿ,  ಗೌರವ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ಎಂ.ಪ್ರಭುದೇವ, ಅಧ್ಯಕ್ಷೆ ಶ್ರೀಮತಿ ಲತಾ ವೀರೇಶ ಸೌದ್ರಿ ಉಪಸ್ಥಿತರಿದ್ದರು.
ಇಪ್ಪತ್ತೆöÊದಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಇಪ್ಪತ್ತು ಹಿರಿಯ ಕಾಯಕ ಜೀವಿಗಳಿಗಳನ್ನು ಸತ್ಕರಿಸಲಾಯಿತು.

 

Don`t copy text!