ವೃಕ್ಷಮಾತೆಗೆ ಅಶ್ರು ತರ್ಪಣೆ,🌳

ವೃಕ್ಷಮಾತೆಗೆ ಗಿಡಮರಗಳ ಅಶ್ರು ತರ್ಪಣೆ,

🌳🌳🌳🌳

 

 

 

 

 

 

 

 

ಹೂ ಎಲೆ ಮರಗಿಡಗಳಿಗೆ
ನೀರುಣಿಸಿ
ತಂಪಾದ ಗಾಳಿಗೆ ತನುಮುಡಿಸಿ
ಮಕ್ಕಳಂದದಿ ಅಕ್ಕರೆಯ ಬೆರಸಿ
ತಾಯಿಪ್ರೀತಿಯ ಕಕ್ಕುಲಾತಿ ತೋರಿಸಿ
ಸಾಲು ಸಾಲಿಗೂ ಸಸಿನೆಟ್ಟು
ಬೆಳೆಸಿದೆ ನೀ ಛಲವಿಟ್ಟು
ಹಾರೈಕೆಯ ಆನಂದದ ಮಡಿಲಲ್ಲಿಟ್ಟು
ನಿತ್ಯ ಕಾಯಕದಿ ತಿಮ್ಮಕ್ಕ
ನೀರುಣಿಸಿ ನಿರಂತರ ಕಷ್ಟಪಟ್ಟು
ಬೆಳೆದ ಮರಗಿಡ ಹೂ ಬಳ್ಳಿಗಳು
ಜೋಕಾಲಿ ಹಾಡಿದವು
ಹಸಿರು ಮಕರಂದವನುಟ್ಟು
ನಿನ್ನ ಹೆಸರಿನ ನಾಮಾಂಕಿತವಿಟ್ಟು
ಉಸಿರು ಹಸಿರು ಕೂಡಿಕೊಂಡು
ಮರಗಿಡದಿ ಗೂಡುಕಟ್ಟಿದ ಹಕ್ಕಿ
ಪಕ್ಷಿಗಳು ನಂದನವನದಿ ಹಾರಾಡಿ
ಹೂವಿನ ಮಕರಂದದಿ ದುಂಬಿಗಳು
ಝೇಂಕಾರ ಮಾಡಿ
ನೆರಳು ಗಾಳಿ ತಂಗಾಳಿಯ ತೀಡಿ
ರೆಂಬೆ ಕೊಂಬೆಗಳು
ನೆನೆ ನೆನೆದು ಇಂದು ಕಣ್ಣೀರ ಹಾಕಿದವು ಒಡತಿಯ ನೊಲುಮೆಯ ಪ್ರೀತಿಯ
ಕೊಡುಗೆಯು ಇಂದು ನಮ್ಮಿಂದ ದೂರವೆಂದು
ಮಮ್ಮಲ ಮರುಗಿ ಬಿಕ್ಕಿ ಬಿಕ್ಕಿ
ಅತ್ತವು
ತಾಯಿ ಪ್ರೀತಿಯ ನಿನ್ನ ಋಣವ
ಮರೆಯಲಾರೆವು ಎಂದಿಗೂ
ಜನುಮ ನೀಡಿದ ಜನ್ಮದಾತೆ
ಜಗಕೆಲ್ಲ ಭಾಗ್ಯದಾತೆ
ಅಂತಿಮ ಅಶ್ರುತರ್ಪಣೆ
ನಿನಗೆ

 

 

 

 

 

 

 

 

 

ಲಲಿತಾ ಪ್ರಭು ಅಂಗಡಿ
ಮುಂಬಯಿ

Don`t copy text!