ಪಾಶ್ಚಾತ್ಯ ಸಂತನ ತಿಥಿ ದಿನದಂದು ಯುವ ಜನಾಂಗ ಪ್ರೇಮಿಗಳ ದಿನಾಚರಣೆ…

ವಿಶೇಷ ಲೇಖನ

ಪಾಶ್ಚಾತ್ಯ ಸಂತನ ತಿಥಿ ದಿನದಂದು ಯುವ ಜನಾಂಗ
ಪ್ರೇಮಿಗಳ ದಿನಾಚರಣೆ…

ಯುವ ಜನಾಂಗ ವಿಶ್ವ ಪ್ರೇಮಿಗಳ ದಿನಾಚರಣೆಯ ಒಳ ಮರ್ಮ ಏನೆಂದು ತಿಳಿದು ಆಚರಿಸುವುದು ಸೂಕ್ತ ಎಂದಾದರೆ ಪ್ರೇಮಿಗಳ ದಿನ ಆಚರಣೆ ಮಾಡಬಹುದು.
ಯಾರೊ ಸತ್ತ ದಿನವನ್ನು ಪ್ರೇಮಿಗಳು ಖುಷಿಯಿಂದ ಆಚರಿಸುವುದು ಸರಿಯೇ…?. ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯಲು ಯುವ ಜನಾಂಗ ತಿಳಿದುಕೊಳ್ಳಲೇ ಬೇಕಾದ ವಿಷಯ..
ಕ್ರಿಶ 269ರಲ್ಲಿ ರೋಮ್ ದೇಶವನ್ನು ಕ್ಲಾಡಿಯಸ್ ಎಂಬ ಜುಡಾಯಿಸ್ ಧರ್ಮದ ಕ್ರೂರ ದೊರೆ ಆಳುತ್ತಿದ್ದ.
ರಕ್ತಪಿಪಾಸು ದೊರೆಯಂದೆ ಆತ ಪ್ರಸಿದ್ಧ. ಅವನ ರಾಜ್ಯದಲ್ಲಿ ಹೆಣ್ಣು-ಗಂಡು ಎಂಬ ಬೇಧವಿಲ್ಲದೆ ಅತ್ಯಾಚಾರ ಅನೈತಿಕಗಳು ಸಾಮಾನ್ಯವಾಗಿದ್ದವು.
ಅಣ್ಣ-ತಂಗಿ ತಾಯಿ- ತಂದೆ ಗಂಡ -ಹೆಂಡತಿ ಎಂಬ ಯಾವ ಸಂಬಂಧಕ್ಕೂ ಬೆಲೆಯಿರಲಿಲ್ಲ, ಹೆಣ್ಣು ಕೇವಲ ಭೋಗದ ವಸ್ತು ಹೆರಿಗೆ ಯಂತ್ರ ಎಂಬಂತಾಗಿತ್ತು.
ಯೂರೋಪ್ ಹಾಗೂ ಭಾರತದ ಮಧ್ಯೆ ವ್ಯಾಪಾರ ವಹಿವಾಟು ಆಗಲೂ ಇತ್ತು. ಅದೆ ಸಮಯದಲ್ಲಿ ರೋಮ ನಗರದಲ್ಲಿ ಸೇಂಟ್ ವ್ಯಾಲೆಂಟೈನ್ ಎಂಬ ಸಂತ ಮತಾಂತರಗೊಳಿಸುವ ಪಾದ್ರಿ ವಾಸವಾಗಿದ್ದ.
ಇತನ್ಯಾವ ಪುಣ್ಯ ಪುರುಷನು ಅಲ್ಲ ,ಶ್ರೇಷ್ಠ ವ್ಯಕ್ತಿಯೂ ಅಲ್ಲ ,ಸಾಧನೆಯಂತೂ ತಿಳಿದಿಲ್ಲ ಆದರೂ ಯಾಕೆ ಪ್ರಸಿದ್ಧಿಯಾಗಿದ್ದನೆಂದರೆ ಆತ ಭಾರತದಲ್ಲಿ ನೆಲೆಗೊಂಡ ಸಂಬಂಧಗಳ ಮಹತ್ವ ತಿಳಿದುಕೊಂಡು ತನ್ನ ದೇಶದಲ್ಲೂ ಮದುವೆ ಬಾಂಧವ್ಯ ಜಾರಿ ಬರಬೇಕೆಂದು ಬಯಸಿದ್ದನು. ಆದರೆ ಕ್ರೂರ ರಾಜನ ಆಸ್ಥಾನದಲ್ಲಿ ಸೈನಿಕರಿಗೆ ಕೆಲಸಗಾರರಿಗೆ ಮದುವೆಯಾದರೆ ಅವರು ಸುಖ ಭೋಗದಲ್ಲೇ ತೊಡಗಿ ರಾಜ್ಯ ಹಾಳಾಗುತ್ತದೆ ಎಂಬ ದೂರಾಲೋಚನೆಯಿಂದ ಮದುವೆ ಆಗುವವರ ಮತ್ತು ಪ್ರೇಮಿಗಳ ತಲೆ ಕತ್ತರಿಸುತ್ತಿದ.ಹೀಗಾಗಿ ವ್ಯಾಲೆಂಟೈನ್ ನ ಈ ಹೋರಾಟ ಅರಿತು ಕೋಪಗೊಂಡು
ಆತನನ್ನು ಬಂಧಿಸಿ ಜೈಲಿನಲ್ಲಿ ಚಿತ್ರಹಿಂಸೆ ಕೊಡಲಾರಂಭಿಸಿದ ಆದರೆ ಆ ಜೈಲಿನ ಜೈಲರ್ ಅದು ಹೇಗೊ ವ್ಯಾಲೆಂಟೈನನ ವಿಚಾರಗಳಿಗೆ ಅಭಿಮಾನಿಯಾಗಿ ಮಗಳನ್ನು ಅವನಿಗೆ ಮದುವೆ ಮಾಡಿ ಕೊಡುವ ನಿರ್ಧಾರಕ್ಕೆ ಬರುತ್ತಾನೆ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿರುತ್ತಾನೆ. ಇದನ್ನರಿತ ರಾಜ ಕ್ಲಾಡಿಯಸ್ ಕ್ರೋಧಿತನಾಗಿ ಆಸ್ಥಾನಕ್ಕೆ ಕರಸಿ ನೀನು ನಮ್ಮ ರೋಮನ್ ಜುಡಾಯಿಸ್ ಧರ್ಮವನ್ನು ಒಪ್ಪಿಕೊಂಡರೆ ನಿನ್ನ ಕ್ಷಮಿಸಿ ನಿನ್ನಿಚ್ಚಯಂತೆ ನಿನ್ನ ಪ್ರೇಮಿಯೊಡನೆ ಮದುವೆ ಮಾಡಿಸುತ್ತೇನೆ ಎಂದು ಹೇಳಿದಾಗ ವ್ಯಾಲೆಂಟೈನ್ ಕಟ್ಟಾ ಕ್ರೈಸ್ತ ಮತಾವಲಂಬಿ ಆಗಿರುವುದರಿಂದ ವಿರೋಧಿಸುತ್ತಾನೆ. ಆಗ ರಾಜ ಫೆಬ್ರವರಿ 14 ಕ್ರಿ.ಶ.269ರಲ್ಲಿ ಬಹಿರಂಗವಾಗಿ ವ್ಯಾಲೆಂಟೈನ್ ನ ತಲೆ ಕತ್ತರಿಸಿಲಾಗುತ್ತದೆ. ವ್ಯಾಲೆಂಟೈನ್ ಸಾಯುವ ಮುನ್ನ ಜೈಲರ್ ಮಗಳಿಗೆ ಪತ್ರ ಬರೆದು ಕೊನೆಯ ಸಾಲುಗಳಲ್ಲಿ Your Valatain ಅಂತಾ ನಮೂದಿಸುತ್ತಾನೆ.

ಮುಂದೆ ದಶಕಗಳು ಕಳೆದಾಗ ರೋಮ ಕ್ರಿಶ್ಚಿಯನ್ನರ ಕ್ರೂರ ಸೇಡಿಗೆ ಬಲಿಯಾಗಿ ಕ್ರಿಶ್ಚಿಯನ್ ರಾಷ್ಟ್ರವಾಗುತ್ತದೆ. ಪೋಪ್ ಗೆಲೆಸಿಯಸ್ ಅಧಿಕಾರಕ್ಕೆ ಬಂದು ಫೆಬ್ರವರಿ 14 ವ್ಯಾಲೆಂಟೈನ್ ಸಂತನ ಸತ್ತ ದಿನವನ್ನು ಆಚರಣೆಗೆ ತರುತ್ತಾನೆ. (Death day of valintain) ಧರ್ಮ ಹಾಗೂ ಪ್ರೇಮಕ್ಕಾಗಿ ಸತ್ತ ಜುಡಾಯಿಸ್ ಧರ್ಮದ ಮೇಲೆ ವಿಜಯ ಅಂತ ಕಟ್ಟಿ ತನ್ನ ರಾಜ್ಯದಲ್ಲಿ ಘೋಷಣೆ ಮಾಡುತ್ತಾನೆ. ಆದರೆ ನಿಜವಾಗಿಯೂ ಅದು ಧರ್ಮ ಮತಾಂತರದ ಹೋರಾಟವಾಗಿತ್ತು.
ಮುಂದೆ 15 ನೆ ಶತಮಾನದಲ್ಲಿ ಧರ್ಮ ಮತಾಂತರ ಮರೆತು ಪ್ರೇಮಿಗಳ ದಿನವೆಂದು ಹೇಗೂ ಆಚರಣೆ ಸುರುವಾಯಿತು. ಅರ್ಥ ವಿಲ್ಲದ ತಲೆಬುಡವಿಲ್ಲದ ಸತ್ತವನ ದಿನದ ಆಚರಣೆಯನ್ನು ಮೂರ್ಖರು ಭಾರತೀಯ ಹಬ್ಬ ಎಂಬಂತೆ ಆಚರಿಸುತ್ತಾರೆ. ಆದರೆ ನೆನಪಿಡಿ ಸ್ನೇಹಿತರೆ ಯಾರು ಭಾರತವನ್ನು ಆಳಿದರೊ ಕ್ರೈಸ್ತ ಧರ್ಮವನ್ನು ಹರಡಲು ಅನೇಕ ನಾಟಕಗಳ ಮಾಡಿದರೊ ಆ ನಾಟಕಗಳಲ್ಲಿ ಇದು ಒಂದು.
ಭಾರತೀಯರ ಮನಸ್ಥಿತಿಯ ಮೇಲೆ ಇದು ಒಂದು ದಾಳಿ.
ಪಾಶ್ಚಾತ್ಯ ಸಂಸ್ಕೃತಿಗೆ ನಮ್ಮ ಭಾರತೀಯ ಯುವ ಜನಾಂಗ ಮಾರು ಹೋಗಿ ರೋಜ ಡೇ,ಪ್ರೊಪೋಜ್ ಡೇ, ಚಾಕಲೇಟ್ ಡೇ,ಟೆಡ್ಡಿ ಡೇ, ಹಗ್ ಡೇ, ಕಿಸ್ ಡೇ, ಫೆಬ್ರವರಿ 14 ಕೊನೆಯ ಡೇ ಯಾಗಿ ವ್ಯಾಲೆಂಟೈನ್ ಡೇ ಇನ್ನೂ ಯಾವ ಯಾವ ಡೇ ಗಳನ್ನು ಭಾರತೀಯ ಸಂಸ್ಕೃತಿಗೆ ತದ್ವಿರುದ್ಧವಾಗಿ ದೊಡ್ಡ ಪ್ರಮಾಣದಲ್ಲಿ ಆಚರಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.

ನಿಂಬೀಯ ಹಣ್ಣಂಗ ತುಂಬಿತ್ತ ಮೈಬಣ್ಣ
ಹಂಬಲಾ ಬಿತ್ತ ನಿನ್ ಮ್ಯಾಲೆ ಎಲೆ ಹೆಣ್ಣ
ನಂಬಿ ಬಂದೇನ ಮನೆತನಕ

ಪ್ರೀತಿ ವ್ಯಕ್ತ ಪಡಿಸೋಕೆ ಫೆಬ್ರವರಿ ಹದಿನಾಲ್ಕೆ ಯುವ ಪ್ರೇಮಿಗಳೆ ಆಗಿರಬೇಕಂತೇನಿಲ್ಲ.
ಅನ್ಯರೊಂದಿಗೆ ಸಮಾಧಾನವಾಗಿ ಎಷ್ಟೊಂದು ಪ್ರೀತಿಯಿಂದ ಮಾತಾಡ್ತೀವಿ, ಸದಾಕಾಲ ನಮಗೆ ಬೆನ್ನಲುಬಾಗಿರುವ ನನ್ನವರು ಅಂತಾ ಅನಿಸಿಕೊಂಡಿರುವ ಅಪ್ಪ ಅಮ್ಮ ಅಣ್ಣ ತಂಗಿ ಹಂಡತಿ ಜೊತೆಗೆ ಪ್ರೀತಿಯಿಂದ ಎಷ್ಟು ಸಲ ಮಾತಾಡ್ತೀವಿ. ಯುವ ಜನಾಂಗ ಅರ್ಥ ಮಾಡಿಕೊಂಡು ಹಿಂದೆ ಗುರು ಮುಂದೆ ಗುರಿ ಇಟ್ಟು ಜೀವನದಲ್ಲಿ ಏನಾದರೂ ಸಾಧಿಸಲು ಹೊರಟರೆ ಎಷ್ಟು ಚೆನ್ನ ಅಲ್ಲವೇ.ಇನ್ನಾದರೂ ಇಂತಹ ಆಚರಣೆಗಳು ಬಿಡಿ ಭಾರತದ ಭವ್ಯ ಸಂಸ್ಕೃತಿ ಹಾಗೂ ಅನೇಕ ಬಾಂಧವ್ಯ ಬೆಸೆಯುವ ರಕ್ಷಾ ಬಂಧನ, ಯುಗಾದಿ ,ಸಂಕ್ರಾಂತಿಯಂತ ಮುಂತಾದ ಹಬ್ಬ ಆಚರಿಸಿ. ಭಾರತೀಯ ಸಂಸ್ಕೃತಿಯನ್ನೂ ಎತ್ತಿ ಹಿಡಿದು ಮುಂಬರುವ ನಮ್ಮ ಮುಂದಿನ ಪಿಳಿಗೆಯು ಪ್ರೀತಿ ಪ್ರೇಮ ಕಾಮದ ಕಡೆ ಒಲವು ತೋರದೆ ತಮ್ಮ ಭವ್ಯ ಭವಿಷ್ಯದ ಮೇಲೆ ತಾವೇ ಕಲ್ಲು ಚಲ್ಲಿಕೊಳ್ಳದೆ ಹೆತ್ತ ನಾಡಿನ ಹಾಗೂ ಭಾರತದ ಸಂಸ್ಕೃತಿಯ ಘನತೆಯನ್ನು ಉಳಸಿಕೊಂಡು ಭವ್ಯ ಭಾರತದ ಕನಸನ್ನು ನನಸಾಗಿಸಲು ಯುವ ಜನಾಂಗ ಮಾದರಿಯಾಗಬೇಕು.

ಚಳಿಜ್ವರ ಬೀಟ್ಟಾವು ಒಳಜ್ವರ ಬಿಡಲಿಲ್ಲ
ಮಂಟಪದ ಜಾಜಿ ಮನೆಯವನೆ ಅತ್ತಿ ಮಗನೆ
ಮಂತ್ರಿಸಿ ಹೋಗು ತಲೆ ನೋವು

ಇಷ್ಟೆಲ್ಲಾ ಓದಿದ ಮೇಲು ತುಂಟರಾದ ಯುವಕ ಯುವತಿಯರು ಕೇಳಬಹುದು ಅಲ್ರೀ ವ್ಯಾಲೆಂಟೈನ್ ನ ಮನೆ ಹಾಳಾಗಲಿ ನಾವು ಪ್ರೇಮಿಗಳ ದಿನ ಅಂತಾ ಆಚರಿಸ್ಕೋತಿವಿ ಏನೀಗ..? ಅಂತಾ ಅದಕ್ಕೆ ಅಲ್ರಿ ಈ ಮೈ ಕೊರೆಯುವ ಚಳಿಯಲ್ಲಿ ಏನು ಪ್ರೇಮಿಗಳ ದಿನ ಆಚರಸ್ತಿರಿ ಅದರ ಬದಲಾಗಿ ಬರುವ ಮಳೆಗಾಲದಲ್ಲಿ ಯಾವೊದಾದರು ಒಂದು ದಿನ ಇಟ್ಕೋಳ್ಳಿ ಮಜವಾಗಿರುತ್ತೆ. ಅಲ್ವಾ ,ನಮ್ಮ ಬಾಲಿವುಡ್ ಸೇರಿದಂತೆ ಭಾರತದ ಎಲ್ಲಾ ವುಡ್ಡಗಳ ಸಿನೆಮಾದಲ್ಲಿ ಮಳೆಯಲ್ಲಿಯೆ ಯುವ ಪ್ರೇಮಿಗಳ ಹೃದಯಗಳಲ್ಲಿ ಪ್ರೇಮಾಂಕುರವಾಗುವುದು. ಹಾಗಿದ್ದ ಮೇಲೆ ಮಳೆಗಾಲದಲ್ಲೆ ಪ್ರೇಮಿಗಳ ದಿನ ಆಚರಿಸಿದರೆ ಹೆಚ್ಚು ಮಜಾ ಬರಬಹುದು ಅಂತ ಯುವ ಜನಾಂಗ ಅಥವಾ ಪ್ರೇಮಿಗಳ ತಲೆಯೊಳಗೂಂದು ಪ್ರೇಮ ಜ್ವರದ ಮದ್ದು ಕೊಟ್ಟು ನನ್ನ ಚಿಕ್ಕದಾದ ಬರಹಕ್ಕೆ ಪುಲ್ ಸ್ಟಾಪ್.

-ಉಮೇಶ ಗೌರಿ , ಸಾ:ಯರಡಾಲ
ತಾ:ಬೈಲಹೊಂಗಲ ಜಿ:ಬೆಳಗಾವಿ
(M)-8867505678

Don`t copy text!