ಒಂದು ಮರದ ನೆರಳಿನಲ್ಲಿ ಸಾವಿರ ವಿದ್ಯಾರ್ಥಿಗಳ ಸಮಾಗಮ
ಪರಿಸರ ಜಾಗೃತಿ ಸಮಾವೇಶದಲ್ಲಿ ಧ್ವನಿ ಮುದ್ರಿಕೆ ಬಿಡುಗಡೆ
e-ಸುದ್ದಿ, ಮಸ್ಕಿ
ಪರಿಸರ ಜಾಗೃತಿ ಮೂಡಿಸುತ್ತ ಜಿಲ್ಲೆಯನ್ನು ಹಸಿರು ಮಯವನ್ನಾಗಿ ಮಾಡುವ ಉದ್ದೇಶದಿಂದ ವನಸಿರಿ ಫೌಂಡೇಶನ್ ಅಸ್ಥಿತ್ವಕ್ಕೆ ತರಲಾಗಿದ್ದು, ಪರಿಸರ ಕುರಿತು ಹಾಡುಗಳನ್ನು ಧ್ವನಿ ಮುದ್ರಿಸಲಾಗಿದೆ ಎಂದು ವನಸಿರಿ ಫೌಂಡೇಶನ್ ಜಿಲ್ಲಾ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಹೇಳಿದರು.
ತಾಲೂಕಿನ ಬಳಗಾನೂರು ಪಟ್ಟಣದ ಹೊರವಲಯದ ಬಸವೇಶ್ವರ ಪ್ರೌಢಶಾಲೆಯ ಮುಂಬಾಗದ ಆವರಣದಲ್ಲಿ ಶುಕ್ರವಾರ ದೊಡ್ಡ ಮರದ ಕೆಳಗೆ ಸಾವಿರ ವಿದ್ಯಾರ್ಥಿಗಳ ಸಮಾವೇಶ ನಡೆಸಿ ಮಾತನಾಡಿದರು.
ವನಸಿರಿ ಫೌಂಡೇಶನ್ ಸಂಸ್ಥೆಯವರು ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿದ್ಧಬಸವ ಸ್ವಾಮೀಜಿ ಮಾತನಾಡಿ ಮನುಷ್ಯ ಆಸೆ ಮತ್ತು ದುರಾಸೆಯ ಬೆನ್ನುಬಿದ್ದು ಪರಿಸರ ನಾಶ ಮಾಡುತ್ತಿದ್ದಾನೆ. ಅದರ ದುಷ್ಪರಿಣಾಮ ಪ್ರಕೃತಿ ನೀಡುತ್ತಿದ್ದು ಮುನುಷ್ಯ ಎಚ್ಚತ್ತುಕೊಂಡು ಪರಿಸರ ಉಳಿಸಬೆಕಾಗಿದೆ. ಪ್ರತಿಯೊಬ್ಬರು ಒಂದು ಮರವನ್ನು ಬೆಳಸುವ ಪಣತೊಡಬೇಕಾಗಿದೆ ಎಂದರು.
ಬಳಗಾನೂರು ಪಟ್ಟಣದಲ್ಲಿ ರೀಟ್ರೇಟ್ (ಮಳೆಮರ) ವಿಶೇಷ ಮರವಿದ್ದು ಒಂದೇ ಮರದಡಿಯಲ್ಲಿ ನೂರಾರು ವಿದ್ಯಾರ್ಥಿಗಳು ಕುಳಿತುಕೊಳ್ಳವ ಆಶ್ರಯ ನೀಡಿದೆ. ಇಂತಹ ಮರಗಳನ್ನು ಬೆಳಸುವಂತೆ ಸಿದ್ಧಬಸವ ಸ್ವಾಮೀಜಿ ಕರೆ ನೀಡಿದರು.
ಶಂಕರಗೌಡ ಎಲೇಕೂಡ್ಲಗಿ, ಇಸಿಒ ಹನುಮಂತಪ್ಪ, ಡಾ.ದಾವಲಸಾಬ್, ಶರಣೇಗೌಡ ಗದ್ದಿ, ಶರಭಯ್ಯಸ್ವಾಮಿ, ಮೂದೇಶ ಮರಾಠಿ, ವೆಂಕಟರಡ್ಡಿ, ಮಹಾಂತೇಶ ಗಿರಿಸ್ವಾಮಿ, ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಗಿಸಿದ್ದರು.
———————————————————-
ಬಿಸಲನಾಡು ರಾಯಚೂರು ಜಿಲ್ಲೆಯಲ್ಲಿ ಹಸಿರುನಾಡು ಮಾಡುವ ಉದ್ದೇಶದಿಂದ ಕಳೆದ ಮೂರು ವರ್ಷದಿಂದ ಸಸಿ ನೆಡುವ ಕಾರ್ಯಕ್ರಮ ಮಾಡಿ ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಈಗಗಾಲೇ ಲಕ್ಷ ಸಸಿಗಳನ್ನು ನೆಟ್ಟಿದ್ದು ಕೋಟಿ ಸಸಿ ನೆಡುವ ಯೋಜನೆ ರೂಪಿಸಿದ್ದು ಪ್ರತಿ ತಾಲೂಕಿನಲ್ಲಿ ಪದಾಧಿಕಾರಿಗಳನ್ನು ಮಾಡಿ ಸಂಘವನ್ನು ಬಲಿಷ್ಟಗೊಳಿಸಿ ಸಾರ್ವಜನಿಕರ ಸಹಕಾರದಿಂದ ಹಸಿರು ಜಿಲ್ಲೆ ಮಾಡುವ ಪಣ ತೊಡಲಾಗಿದೆ.
-ಅಮರೇಗೌಡ ಮಲ್ಲಾಪೂರು, ವನಸಿರಿ ಫೌಂಡೇಶನ್ ಜಿಲ್ಲಾ ಅಧ್ಯಕ್ಷ