ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆ ೪೭ ಸಂಸ್ಥಾಪನ ದಿನಾಚರಣೆ
e-ಸುದ್ದಿ, ಕಲಬುರ್ಗಿ
ದಿನಾಂಕ 16-02-2021 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರ್ಗಿಯ ಜ್ಞಾನ ಸಿಂಚನ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಮ್ ನ 47ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಶ್ರೀ ಸಂಗಮನಾಥ ರೇವತಗಾಂವ ಹಿರಿಯ ಉಪಸಂಪಾದಕರು ಸಂಯುಕ್ತ ಕರ್ನಾಟಕ ಕನ್ನಡ ದಿನಪತ್ರಿಕೆ ಕಲಬುರಗಿಯವರು ಆಗಮಿಸಿದ್ದರು. ಅಧ್ಯಕ್ಷ ಸ್ಥಾನವನ್ನು ಶ್ರೀ ಅನಿಲಕುಮಾರ ಮಾಲಪಾಣಿ ಕಾರ್ಯಕಾರಿ ಮಂಡಳಿ ಸದಸ್ಯರು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಮ್ ರವರು ವಹಿಸಿದ್ದರು. ಶ್ರೀ ಜಗದೀಶ ಕಡಬಗಾಂವ ಉಪನ್ಯಾಸಕರು ಮಾತೃ ಛಾಯಾ ಕಾಲೇಜು, ಸೇಡಮ್ ಇವರು 47 ವಷ೯ಗಳಲ್ಲಿ ಸಂಸ್ಥೆ ಬೆಳದುಬಂದಿರು ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಚ್ ಸಿ ಪಾಟೀಲ ಹಾಗೂ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಪತ್ರಕರ್ತರು ಉಪಸ್ಥಿತರಿದ್ದರು.