ಮಸ್ಕಿ : ಆಧುನಿಕ ಜಗತ್ತಿನ ಆವಿಷ್ಕಾರದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮತ್ತು ವಿಡಿಯೋಗಳನ್ನು ಕ್ಷಣ ಮಾತ್ರದಲ್ಲಿ ಲಕ್ಷಾಂತರ ಜನರು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಘನಮಠದಯ್ಯ ಸಾಲಿಮಠ ಹೇಳಿದರು. ಶುಕ್ರವಾರ ವಿ.ಎಸ್.ಮಿಡಿಯಾ ಮತ್ತು e-ಸುದ್ದಿ ಅಂತರ್ಜಾಲ ಪತ್ರಿಕೆ ಬಿಡುಗಡೆ ಮಾತನಾಡಿದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಸ್ಕಿ ತಾಲೂಕು ಅಧ್ಯಕ್ಷ ಪ್ರಕಾಶ ಮಸ್ಕಿ, ಕಾರ್ಯದರ್ಶಿ ಇಂದರಪಾಷ ಚಿಂಚರಕಿ,ಜಿಲ್ಲಾ ಪ್ರತಿನಿಧಿ ಅಬ್ದುಲ್ ಅಜೀಜ್ ಶುಭ ಹಾರೈಸಿದರು.
ಸಂಪಾದಕ ವೀರೇಶ ಸೌದ್ರಿ, ವರದಿಗಾರ ಎಂ.ಎಸ್.ಭಾಗವಾನ, ಹನುಮೇಶ ನಾಯಕ, ಹಾಗೂ ಸಮರ್ಥ ಸೌದ್ರಿ, ಹರ್ಷ ಸೌದ್ರಿ ಇದ್ದರು.